ತಿಹಾರ್ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್, ಜಾಕ್ವೆಲಿನ್ ಫರ್ನಾಂಡಿಸ್‌ಗೆ ಕ್ರಿಸ್‌ಮಸ್‌ಗೆ ಪತ್ರ ಬರೆದು ದುಬಾರಿ ಉಡುಗೊರೆ ನೀಡುವುದಾಗಿ ಹೇಳಿದ್ದಾರೆ. ಫ್ರಾನ್ಸ್‌ನಲ್ಲಿರುವ ದ್ರಾಕ್ಷಿತೋಟವನ್ನು ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದ್ದು, ಇಬ್ಬರ ನಡುವಿನ ಸಂಬಂಧ ಮයೆ ಇನ್ನಷ್ಟು ಕುತೂಹಲ ಮೂಡಿಸಿದೆ.
ನವದೆಹಲಿ (ಡಿ.27): ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ಸುಕೇಶ್ ಚಂದ್ರಶೇಖರ್ ಅವರು ಕ್ರಿಸ್‌ಮಸ್ ಹಬ್ಬದಂದು ಬಾಲಿವುಡ್ ನಟಿ ಮತ್ತು ಅವರ ಗೆಳತಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಪತ್ರವೊಂದನ್ನು ಕಳುಹಿಸಿದ್ದಾರೆ. ಈ ಪತ್ರ ಮತ್ತೊಮ್ಮೆ ಕುತೂಹಲ ಕೆರಳಿಸಿದ್ದು, ಇವರಿಬ್ಬರ ನಡುವಿನ ಪ್ರೇಮ ಸಂಬಂಧಕ್ಕೆ ಇನ್ನಷ್ಟು ಕುತೂಹಲವನ್ನು ಸೇರಿಸಿದೆ. ಹೈ-ಪ್ರೊಫೈಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಸುಕೇಶ್, ಜೈಲಿನಿಂದ ತನ್ನ ಸಂವಹನದಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಜಾಕ್ವೆಲಿನ್ ಮೊದಲು ಈ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದ್ದರು. ಆದರೆ, ಈಗ ಸುಕೇಶ್ ಚಂದ್ರಶೇಖರ್ ಆಕೆಗೆ ಬರೆದಿರುವ ಮತ್ತೊಂದು ಪತ್ರ ಇಬ್ಬರ ನಡುವಿನ ಸಂಪಕರ್ವನ್ನು ಮತ್ತಷ್ಟು ಗಾಢವಾಗಿ ತಿಳಿಸಿದೆ. ಜಾಕ್ವೆಲಿನ್ ಫರ್ನಾಂಡೀಸ್ ಅವರ ಮೇಲಿನ ಪ್ರೀತಿಯನ್ನು ಸುಕೇಶ್ ಚಂದ್ರಶೇಖರ್ ಅವರು ತಮ್ಮ ಪತ್ರದಲ್ಲಿ ವ್ಯಕ್ತಪಡಿಸಿದ್ದು, ಆಕೆಗೆ ಅತ್ಯಂತ ದುಬಾರಿ ಉಡುಗೊರೆ ನೀಡುವುದಾಗಿ ತಿಳಿಸಿದ್ದಾರೆ. ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಪತ್ರದಲ್ಲಿ ಸುಕೇಶ್, 'ಬೇಬಿ ಗರ್ಲ್, ಕ್ರಿಸ್‌ಮಸ್ ಶುಭಾಶಯಗಳು. ಮತ್ತೊಂದು ಸುಂದರವಾದ ವರ್ಷ ಮತ್ತು ಅತ್ಯಂತ ನೆಚ್ಚಿನ ಹಬ್ಬವು ನಮ್ಮ ಪ್ರೀತಿ ಮತ್ತು ಬಂಧವಿಲ್ಲದೆ ಹಾದುಹೋಗುತ್ತಿದೆ. ಆದರೆ, ನಮ್ಮ ಆತ್ಮಗಳು ಸಂಪರ್ಕ ಹೊಂದಿವೆ. ನಾನು ನಿಮಗೆ ಕ್ರಿಸ್‌ಮಸ್ ಶುಭಾಶಯ ಕೋರಿದಾಗ, ನಾನು ನಮ್ಮ ಎರಡೂ ಕೈಗಳನ್ನು ಹಿಡಿದಿದ್ದೇನೆ ಮತ್ತು ನಿನ್ನ ಕಣ್ಣುಗಳನ್ನೇ ನೋಡುತ್ತಿದ್ದೇ' ಎಂದು ಬರೆದಿದ್ದಾರೆ.
undefined
ಜಾಕ್ವೆಲಿನ್‌ಗೆ ಉಡುಗೊರೆ ನೀಡಲು ಮುಂದಾಗಿರುವುದಾಗಿ ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ. "ಇಂದು, ನಾನು ನಿಮಗೆ ವೈನ್ ಬಾಟಲಿಯನ್ನಲ್ಲ, ಆದರೆ ಪ್ರೀತಿಯ 'ಫ್ರಾನ್ಸ್' ದೇಶದಲ್ಲಿರುವ ಸಂಪೂರ್ಣ ದ್ರಾಕ್ಷಿತೋಟವನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ, ಅದು ನೀವು ಕನಸಿನಲ್ಲಿಯೂ ಯೋಚಿಸಿರಲಿಲ್ಲ." ಎಂದಿದ್ದಾರೆ.
ಸುಕೇಶ್ ಚಂದ್ರಶೇಖರ್ ಅವರು ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ 107 ವರ್ಷ ಹಳೆಯದಾದ ದ್ರಾಕ್ಷಿತೋಟ ಅಥವಾ ವೈನ್‌ಯಾರ್ಡ್‌ಅನ್ನು ಉಡುಗೊರೆಯಾಗಿ ನೀಡುವುದಾಗಿ ಭರವಸೆ ನೀಡಿದ್ದಾರೆ, ಇದು ಟಸ್ಕನ್ ಶೈಲಿಯ ಮನೆಯನ್ನು ಹೊಂದಿದೆ. ಪತ್ರದಲ್ಲಿ, ಅವರು ನಟಿಯನ್ನು ಭೇಟಿಯಾಗಲು ಬಲವಾದ ಆಸೆಯನ್ನು ವ್ಯಕ್ತಪಡಿಸಿದ್ದಾರೆ, ಶೀಘ್ರದಲ್ಲೇ ಇಡೀ ಜಗತ್ತು ಅವರನ್ನು ಒಟ್ಟಿಗೆ ನೋಡುತ್ತದೆ ಎಂದಿದ್ದಾರೆ.
21 ವರ್ಷದ ಬ್ಯೂಟಿಗಾಗಿ ಬಟ್ಟೆ ಬಿಚ್ಚಿದ ಅಂಕಲ್, ನಕಲಿ ಪೊಲೀಸ್‌ಗೆ ದುಡ್ಡು ಕಳ್ಕೊಂಡು ಪಾಪರ್!
"ನಿಮ್ಮ ಕೈ ಹಿಡಿದು ಈ ಉದ್ಯಾನದಲ್ಲಿ ನಡೆಯಲು ನಾನು ಕಾಯುತ್ತಿದ್ದೇನೆ. ನಾನು ಹುಚ್ಚನೆಂದು ಜಗತ್ತು ಭಾವಿಸಬಹುದು, ಆದರೆ ನಾನು ನಿಜವಾಗಿಯೂ ನಿನ್ನನ್ನು ಪ್ರೀತಿಸುತ್ತೇನೆ. ನಾನು ಹೊರಗೆ ಬರುವವರೆಗೆ ಕಾಯಿರಿ, ಆಗ ಇಡೀ ಜಗತ್ತು ನಮ್ಮನ್ನು ಒಟ್ಟಿಗೆ ನೋಡುತ್ತದೆ' ಎಂದಿದ್ದಾರೆ. ಈ ವರ್ಷದ ಆರಂಭದಲ್ಲಿ, ಚಂದ್ರಶೇಖರ್ ಅವರ ಜನ್ಮದಿನದಂದು ಫರ್ನಾಂಡಿಸ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ, ಅದರಲ್ಲಿ ಅವರು ಅವಳನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದನ್ನು ಉಲ್ಲೇಖಿಸಿದ್ದರು.
ಸುಜುಕಿ ಕಂಪನಿ ಭಾರತಕ್ಕೆ ಬರಲು ಕಾರಣರಾಗಿದ್ದ ಮಾಜಿ ಚೇರ್ಮನ್ ಒಸಾಮು ಸುಜುಕಿ ನಿಧನ!
ಕೇಂದ್ರ ಗೃಹ ಮತ್ತು ಕಾನೂನು ಕಾರ್ಯದರ್ಶಿಗಳಾಗಿ ಪೋಸ್ ನೀಡಿ ಮಾಜಿ ರೆಲಿಗೇರ್ ಪ್ರವರ್ತಕ ಮಲ್ವಿಂದರ್ ಸಿಂಗ್ ಅವರ ಪತ್ನಿಯಿಂದ ಅಂದಾಜು ₹ 200 ಕೋಟಿ ಸುಲಿಗೆ ಮಾಡಿರುವ ಕೇಸ್‌ನಲ್ಲ ಸುಖೇಶ್ ಚಂದ್ರಶೇಖರ್ ಬಂಧನದಲ್ಲಿದ್ದಾರೆ.