
ಆಲಪುಝಾ(ಜೂ.24): ತಮ್ಮ ಪಕ್ಷದ ನಾಯಕನ ಕಾರು ಹಾಗೂ ಬೆಂಗಾವಲು ಪಡೆಯನ್ನು ತಡೆದ ಕಾಂಗ್ರೆಸ್ ಕಾರ್ಯಕರ್ತರು, ಬಳಿಕ ತೀವ್ರ ಮುಜುಗರ ಅನುಭವಿಸಿದ್ದಾರೆ. ಕೇರಳ ಕಾಂಗ್ರೆಸ್ ನಾಯಕ ವಿಡಿ ಸತೀಶನ್ ತೆರಳುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಬೆಂಗಾವಲು ಪಡೆಯನ್ನು ತಡೆದು ವಿಡಿ ಸತೀಶನ್ ಹೊರಬರುವಂತೆ ಆಜ್ಞೆ ಮಾಡಿದ್ದಾರೆ. ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಹೈಡ್ರಾಮವೇ ನಡೆದು ಹೋಗಿದೆ. ಕೇರಳದ ಉಲುಪುಝಾ ಜಿಲ್ಲೆಯಲ್ಲಿ ನಡೆದಿದೆ.
ವಿಡಿ ಸತೀಶನ್ ತಮ್ಮ ಕಾರಿನ ಮೂಲಕ ಕಾರ್ಯಕ್ರಮ ಮುಗಿಸಿ ಆಲಪುಝಾ ಮಾರ್ಗವಾಗಿ ತೆರಳಿದ್ದಾರೆ. ಸತೀಶನ್ ಅವರಿಗೆ ಬೆಂಗಾವಲು ಕಾರು ಜೊತೆ ಪ್ರಯಾಣ ಆರಂಭಿಸಿದ್ದಾರೆ. ಕೆಲ ಹೊತ್ತಲ್ಲೇ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ತಮ್ಮದೇ ಪಕ್ಷದ ನಾಯಕನ ಕಾರು ತಡೆ ಹಿಡಿದಿದ್ದಾರೆ. ಕಾರಿನಲ್ಲಿ ಬರುತ್ತಿರುವ ನಾಯಕ ಪಿಣರಾಯಿ ವಿಜಯನ್ ಕ್ಯಾಬಿನ್ ಮಂತ್ರಿ ಎಂದುಕೊಂಡು ಕಾಂಗ್ರೆಸ್ ಕಾರ್ಯಕರ್ತರು ಈ ರೀತಿ ಮಾಡಿದ್ದರೆ. ಇತ್ತ ವಿಡಿ ಸಚೀಶನ್ ಅವರ ಪರಿಚಯ ಇಲ್ಲದ ಹಲವು ಕಾಂಗ್ರೆಸ್ ಕಾರ್ಯಕರ್ತರು ಕಾರು ತಡೆದು ಪ್ರತಿಭಟನೆ ನಡೆಸಿದ್ದಾರೆ.
Kerala: ಕೆಪಿಸಿಸಿ ಅಧ್ಯಕ್ಷರಿಗೆ ಸಂಕಷ್ಟ: ವಂಚನೆ ಕೇಸಲ್ಲಿ ವಿಚಾರಣೆಗೆ ಹಾಜರಾಗಲು ಹೈಕೋರ್ಟ್ ಸೂಚನೆ
ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಕಮ್ಯೂನಿಸ್ಟ್ ಆಡಳಿತದಲ್ಲಿನ ಅಕ್ರಮಗಳ ವಿರುದ್ಧ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ತಮ್ಮ ಪಕ್ಷದ ನಾಯಕ ಇದೇ ದಾರಿಯಲ್ಲಿ ಸಾಗಿ ಬಂದಿದ್ದಾನೆ. ಹೀಗಾಗಿ ಕಾರ್ಯಕರ್ತರು ಸಚಿವರು ಎಂದು ಕಾರು ತಡೆದು ಪ್ರತಿಭಟನೆ ಮಾಡಿದ್ದಾರೆ. ಈ ಘಟನೆ ಬಳಿಕ ಕಾಂಗ್ರೆಸ್ ಕಾರ್ಯಕರ್ತರಿಗೆ ಇರಿಸು ಮುರಿಸು ಉಂಟಾಗಿದೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ದ ಆಕ್ರೋಶ ಕೇಳಿಬರುತ್ತಿದೆ. ಕಾರ್ಯಕರ್ತರಿಗೆ ತಮ್ಮ ಪಕ್ಷದ ನಾಯಕರ ಮಖವೇ ಪರಿಯವೇ ಇಲ್ಲ ಎಂದು ಟೀಕಿಸಿದ್ದಾರೆ.
ಇತ್ತೀಚೆಗೆ ಶಶಿ ತರೂರ್ ಅಧ್ಯಕ್ಷ ಸ್ಥಾನ ಸ್ಪರ್ಧೆಯಿಂದ ಕೇರಳ ಕಾಂಗ್ರೆಸ್‌ನಲ್ಲಿ ಒಡಕು ಮೂಡಿತ್ತು. ಇದೀಗ ತರೂರ್ ಪ್ರವಾಸ ಆರಂಭಿಸುವ ಮೂಲಕ ಪಕ್ಷದೊಳಗಿನ ವಿರೋಧಿ ಬಣಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋಲುಂಡ ಸಂಸದ ಶಶಿ ತರೂರ್ ತವರು ರಾಜ್ಯ ಕೇರಳದ ಮಲಬಾರ್ ಪ್ರಾಂತ್ಯದಲ್ಲಿ ಕೈಗೊಂಡಿರುವ ಪ್ರವಾಸವು ರಾಜ್ಯ ರಾಜಕೀಯದಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ರಾಜ್ಯದಲ್ಲಿನ ಪಕ್ಷದ ಒಂದು ಬಣ ತರೂರ್ ಅವರನ್ನು ಬೆಂಬಲಿಸುತ್ತಿದೆ. ಈ ಪ್ರವಾಸದ ಮೂಲಕ ತರೂರ್ ತಮ್ಮನ್ನು ತಾವು 2026ರ ಕೇರಳ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂಬ ವರದಿಗಳ ನಡುವೆಯೇ ಈ ಬೆಳವಣಿಗೆ ತರೂರ್ ಈ ಪ್ರವಾಸ ಕೈಗೊಂಡಿರುವುದು ಭಾರೀ ಅಚ್ಚರಿ ಮೂಡಿಸಿದೆ.
ಗಡಿನಾಡು ಸರ್ಕಾರಿ ಶಾಲೆಗೆ ಮತ್ತೆ ಆಪತ್ತು; ಕನ್ನಡದ ಗಂಧಗಾಳಿ ಗೊತ್ತಿಲ್ಲದ ಮಲಯಾಳಂ ಶಿಕ್ಷಕಿ ನೇಮಿಸಿದ ಕೇರಳ!
ಈ ನಡುವೆ ತಮ್ಮ ಪ್ರವಾಸ ಸೃಷ್ಟಿಸಿರುವ ಅಲೆಯ ಬಗ್ಗೆ ಪ್ರತಿಕ್ರಿಯಿಸಿರುವ ತರೂರ್, ‘ನಾನೂ ಯಾರಿಗೂ ಹೆದರುವುದಿಲ್ಲ, ಬೇರೆಯವರೂ ನನ್ನ ಬಗ್ಗೆ ಹೆದರಬೇಕಿಲ್ಲ’ ಎಂದು ಪರೋಪಕ್ಷವಾಗಿ ಪಕ್ಷದ ನಾಯಕರಿಗೆ ಸಂದೇಶ ರವಾನಿಸಿದ್ದಾರೆ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಕಾಂಗ್ರೆಸ್‌ನ ಸತೀಶನ್, ಸತತ ಎರಡು ಬಾರಿ ಚುನಾವಣೆಯಲ್ಲಿ ಸೋತು ಇದೀಗ ಪಕ್ಷ ಜನ ಬೆಂಬಲ ಪಡೆಯುತ್ತಿರುವ ಹೊತ್ತಿಗೆ ಯಾವುದೇ ಪರ್ಯಾಯ ಚಟುವಟಿಕೆಯನ್ನು ಪಕ್ಷ ಸಹಿಸುವುದಿಲ್ಲ’ ಎನ್ನುವ ಮೂಲಕ ಪರೋಕ್ಷವಾಗಿ ತರೂರ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ