ಕೃಷಿ ಕಾಯ್ದೆ ವಿರೋಧಿಸಿ ಅನ್ನದಾತನ ಸಮರ| ರೈತರ ಬೆಂಬಲಕ್ಕೆ ನಿಂತ ರಾಜಕೀಯ ಪಕ್ಷಗಳು| ಕಾಂಗ್ರೆಸ್ ಬೆಂಬಲದ ಹಿಂದಿನ ಅಸಲಿಯತ್ತೇ ಬೇರೆ ಇದೆ!
ನವದೆಹಲಿ(ಡಿ.15): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಅನ್ನದಾತನ ಹೋರಾಟ ಇಪ್ಪತ್ತನೇ ದಿನಕ್ಕೆ ಕಾಲಿಟ್ಟಿದೆ. ಈ ಹೋರಾಟಕ್ಕೆ ಕಾಂಗ್ರೆಸ್ ಸೇರಿ ಅನೇಕ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಆದರೀಗ ಕಾಂಗ್ರೆಸ್ ಬೆಂಬಲದ ಹಿಂದೆ ಬೇರೆಯೇ ಕಾರಣವಿರುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ರೈತಪರ ಸರ್ಕಾರ, ಕೃಷಿ ಕಾಯ್ದೆಯೂ ರೈತ ಸ್ನೇಹಿ; ಅನ್ನದಾತರಿಗೆ ಬೇಡ ಭಯ
undefined
ಹೌದು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಫೋಟೋವೊಂದನ್ನು ಶೇರ್ ಮಾಡುತ್ತಾ ಟ್ವೀಟ್ ಒಂದನ್ನು ಮಾಡಿದ್ದಾರೆ. ಇದರಲ್ಲಿ ರೈತರ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲಿಸುತ್ತಿರುವ ಹಿಂದಿನ ಕಾರಣ ಅನ್ನದಾತನ ಮೇಲಿನ ಕಾಳಜಿಯಲ್ಲ, ಬದಲಾಗಿ ತನ್ನ ಹಗರಣದ ಮೇಲಿನ ಗಮನ ದೂರ ಸರಿಸುವ ಯತ್ನ ಎಂದು ತಿಳಿಸಿದ್ದಾರೆ. ಪ್ರಶ್ನೋತ್ತರ ಮಾದರಿಯಲ್ಲಿ ಹರಿದಾಡುತ್ತಿರುವ ಈ ಸಂದೇಶದ ವಿವರ ಹೀಗಿದೆ ನೋಡಿ.
What is reason for Rahuls Cong - to go thru these contortions n lies on Farm reforms ? 🤔
Reason is protect dynasty by divertng attn away frm .
Thats it. they care nothng abt farmers - tdy or in last 70 yrs.
Read n RT pic.twitter.com/SfJkHogNPG
ಪ್ರಶ್ನೆ 1: ರಾಹುಲ್ ಗಾಂಧಿಯ ಕಾಂಗ್ರೆಸ್ ಪಕ್ಷ ಕೃಷಿ ಸುಧಾರಣೆ ವಿಚಾರದಲ್ಲಿ ತನ್ನ ನಿಲುವು ಬದಲಾಯಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದೇಕೆ?
ಉತ್ತರ: ಸೆ. 22ರಂದು ಸಂಸತ್ತಿನಲ್ಲಿ ಕೃಷಿ ಕಾಯ್ದೆ ಮಂಜೂರಾಯ್ತು, ಸೆ. 28 ರಂದು ರಾಷ್ಟ್ರಪತಿ ಅಂಕಿತವೂ ಲಭಿಸಿತು, ನ. 26 ರಂದು ರೈತರ ಪ್ರತಿಭಟನೆ ಆರಮಭವಾಯ್ತು. ಇದ್ದಕ್ಕಿದ್ದಂತೆಯೇ ಏನಾಯ್ತು? ಕಾಂಗ್ರೆಸ್ ಬೆಂಬಲಿತ 'ರೈತ ಪ್ರತಿಭಟನೆ'ಗೆ ಕಾರಣವೇನು?
ನವೆಂಬರ್ 18 ರಂದು ರಾಜೀವ್ ಸಕ್ಸೇನಾ ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದಲ್ಲಿ ಕಾಂಗ್ರೆಸ್ ಪಾತ್ರವಿರುವ ವಿಚಾರವನ್ನು ಬಹಿರಂಗಗೊಳಿಸಿದ್ದರು. ಹೀಗಿರುವಾಗ ತನ್ನ ವಿರುದ್ಧ ಕೇಳಿ ಬಂದ ಈ ಗಂಭೀರ ಆರೋಪದಿಂದ ಜನರ ಗಮನ ಬೇರೆಡೆ ಹರಿಸಲು, ರೈತ ಪ್ರತಿಭಟನೆಗೆ ಕುಮ್ಮಕ್ಕು ನೀಡಿತು. ತನ್ನ ಪಕ್ಷ ಉಳಿಸಲು ರೈತರನ್ನು ತಪ್ಪು ಹಾದಿಗೆಳೆದು ಅವರನ್ನು ನರಳಿಸುವುದೆಲ್ಲಾ ಅವರಿಗೆ ಲೆಕ್ಕವಲ್ಲ.
ಕಾಂಗ್ರೆಸ್ ಹೀಗೆ ತನ್ನ ಹಗರಣ ಬಯಲಿಗೆ ಬಂದಾಗ ಜನರ ಗಮನ ಬೇರೆಡೆ ಹರಿಸಲು ಸಂಚು ರೂಪಿಸಿದ್ದು ಇದೇ ಮೊದಲಲ್ಲ, ಇದಕ್ಕೂ ಮುನ್ನ 1987ರಲ್ಲಿ ಬೋಪೋರ್ಸ್ ಹಗರಣ ಸದ್ದು ಮಾಡಿದಾಗ, ಅಂದಿನ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಸಮರವವೊಂದಕ್ಕೆ ಸಂಬಂಧಿಸಿದಂತೆ IPKFನ್ನು ಶ್ರೀಲಂಕಾಗೆ ಕಳುಹಿಸಲು ನಿರ್ಧರಿಸಿದರು. ಹೀಗಿರುವಾಗ 1200 ಸೈನಿಕರು ಹುತಾತ್ಮರಾದರೆ, 1000ಕ್ಕೂ ಅಧಿಕ ಯೀಧರು ಗಾಯಗೊಂಡಿದ್ದರು. ಈ ಮೂಲಕ ಹಗರಣದಿಂದ ಜನರ ಗಮನ ದೂರ ಸರಿಸಿದ್ದರು.
ಇನ್ನು 1987ರಲ್ಲಿ ನಮ್ಮ ದೇಶದ ಸೈನಿಕರು ಕಾಂಗ್ರೆಸ್‌ನ ಷಡ್ಯಂತ್ರಕ್ಕೆ ತಮ್ಮ ಜೀವ ಕಳೆದುಕೊಂಡರು, ಇಂದು ರೈತರು ಅವರ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ.
ಕೃಷಿ ಕಾಯ್ದೆ ರದ್ದು ಮಾಡಿದರೆ ಪ್ರತಿಭಟನೆ: ಹರ್ಯಾಣ ರೈತರು!
ಒಟ್ಟಾರೆಯಾಗಿ ದೆಹಲಿಯಲ್ಲಿ ನಡೆಯುತ್ತಿರುವ ಅನ್ನದಾತನ ಸಮರ ದಿನೇ ದಿನೇ ಉಗ್ರ ರೂಪ ಪಡೆದುಕೊಳ್ಳುತ್ತಿದೆ. ಸರ್ಕಾರದ ಜೊತೆಗಿನ ಮಾತುಕತೆ ಕೂಡಾ ಪದೇ ಪದೇ ವಿಫಲವಾಗುತ್ತಿದ್ದು, ಜನ ಸಾಮಾನ್ಯರೂ ಕಷ್ಟ ಅನುಭವಿಸುತ್ತಿದ್ದಾರೆ.