3 ತಿಂಗಳಲ್ಲಿ 42,000 ಕೋಟಿ ರು. ಜಿಎಸ್‌ಟಿ ಪರಿಹಾರ ಬಿಡುಗಡೆ!

By Suvarna NewsFirst Published Dec 15, 2020, 11:31 AM IST
Highlights

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಿಂದ ರಾಜ್ಯ ಸರ್ಕಾರಗಳಿಗೆ ಉಂಟಾಗುತ್ತಿರುವ ನಷ್ಟವನ್ನು ಭರಿಸಲು ಕೇಂದ್ರದಿಂದ ಹಣ ಬಿಡುಗಡೆ| 7ನೇ ಕಂತಿನ 6000 ಕೋಟಿ ನೀಡಿದ ಕೇಂದ್ರ| 3 ತಿಂಗಳಲ್ಲಿ 42,000 ಕೋಟಿ ರು. ಜಿಎಸ್‌ಟಿ ಪರಿಹಾರ ಬಿಡುಗಡೆ!

ನವದೆಹಲಿ(ಡಿ.15): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಿಂದ ರಾಜ್ಯ ಸರ್ಕಾರಗಳಿಗೆ ಉಂಟಾಗುತ್ತಿರುವ ನಷ್ಟವನ್ನು ಭರಿಸಲು ಅಕ್ಟೋಬರ್‌ನಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ 42,000 ಕೋಟಿ ರು.ಗಳನ್ನು ಸಾಲ ಮಾಡಿ ಬಿಡುಗಡೆ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಈ 42,000 ಕೋಟಿ ರು.ಗಳ ಪೈಕಿ 7ನೇ ಕಂತಿನಲ್ಲಿ 6000 ಕೋಟಿ ರು.ಗಳನ್ನು 23 ರಾಜ್ಯ ಸರ್ಕಾರಗಳಿಗೆ ಹಾಗೂ 3 ಕೇಂದ್ರಾಡಳಿತ ಪ್ರದೇಶ ಗಳಿಗೆ ಸೋಮವಾರ ಬಿಡುಗಡೆ ಮಾಡಿದೆ. ಈ ಮೊತ್ತವನ್ನು ಕೇಂದ್ರ ಸರ್ಕಾರ ಶೇ.4.7ರ ಬಡ್ಡಿ ದರದಲ್ಲಿ ಸಾಲದ ಮೂಲಕ ಸಂಗ್ರಹಿಸಿ ನೀಡಿದೆ.

ಅಕ್ಟೋಬರ್‌ನಿಂದ ಇಲ್ಲಿಯವರೆಗೆ ಅ.23, ನ.2, ನ.9, ನ.23, ಡಿ.1, ಡಿ.7 ಹಾಗೂ ಡಿ.14ರಂದು ವಿವಿಧ ಕಂತುಗಳಲ್ಲಿ ಒಟ್ಟು 42 ಸಾವಿರ ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.
 

click me!