ಕಾಂಗ್ರೆಸ್ ಪಕ್ಷದ ಟ್ವಿಟರ್ ಪುಟದಲ್ಲಿ ಇಂದು ಆರ್‌ಎಸ್‌ಎಸ್ ಕುರಿತಾಗಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿತ್ತು. ಆರ್‌ಎಸ್‌ಎಸ್ ಚಡ್ಡಿಯನ್ನು ಬೆಂಕಿಯಿಂದ ಸುಟ್ಟ ರೀತಿಯಲ್ಲಿ ಚಿತ್ರಿಸಲಾಗಿತ್ತು. ಇದರ ಬೆನ್ನಲ್ಲಯೇ ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಿದ್ದು, ಬೆಂಕಿ ಹಚ್ಚುವುದು ಕಾಂಗ್ರೆಸ್‌ನ ಸಂಸ್ಕೃತಿ ಎಂದು ಹೇಳಿದೆ.
ನವದೆಹಲಿ (ಸೆ.12): ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಗೆ ಇಂದು 6ನೇ ದಿನ, ಇದೇ ವೇಳೆ ಆರ್‌ಎಸ್‌ಎಸ್‌ನ ಚಡ್ಡಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಒಂದು ಟ್ವೀಟ್ ಮಾಡಿದ್ದು, ಇದು ಬಿಜೆಪಿ ನಾಯಕರನ್ನು ಕೆರಳಿಸಿದೆ. ಇನ್ನು ಬಿಜೆಪಿ ಕೂಡ, ಸಿಖ್ ದಂಗೆ ಹಾಗೂ ಮುಂಬೈ ಗಲಭೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದು, ಕಾಂಗ್ರೆಸ್‌ನಲ್ಲಿ ಬೆಂಕಿ ಹಚ್ಚುವ ಸಂಸ್ಕೃತಿ ಹಿಂದಿನಿಂದಲೂ ಇದೆ ಎಂದು ಬಿಜೆಪಿ ಹೇಳಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಇನ್ನೂ 145 ದಿನಗಳು ಬಾಕಿ ಇದೆ ಎನ್ನುವ ಫೋಟೋ ಹಂಚಿಕೊಂಡಿದ್ದ ಕಾಂಗ್ರೆಸ್ ಪಕ್ಷ, ಇದರಲ್ಲಿ ಮಾರ್ಮಿಕವಾಗಿ ಆರ್‌ಎಸ್ಎಸ್‌ನ ಚಡ್ಡಿಯನ್ನು ಸುಡುವ ಚಿತ್ರವನ್ನು ಪ್ರಕಟಿಸಿತ್ತು. "ದೇಶವನ್ನು ದ್ವೇಷದ ವಾತಾವರಣದಿಂದ ಮುಕ್ತಗೊಳಿಸುವ ಮತ್ತು ಆರ್‌ಎಸ್‌ಎಸ್-ಬಿಜೆಪಿ ಮಾಡಿದ ಹಾನಿಯನ್ನು ಸರಿದೂಗಿಸುವ ಗುರಿಯತ್ತ ನಾವು ಒಂದೊಂದಾಗಿ ಹೆಜ್ಜೆ ಇಡುತ್ತಿದ್ದೇವೆ" ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ ಬರೆದುಕೊಂಡಿತ್ತು. ನಾವು ನಮ್ಮ ಗುರಿಯತ್ತ ಸಾಗುತ್ತಿದ್ದೇವೆ ಎಂದೂ ಅದರಲ್ಲಿ ತಿಳಿಸಲಾಗಿತ್ತು. ಕಾಂಗ್ರಸ್ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಈ ಪೋಸ್ಟ್ ಬಂದ ಬೆನ್ನಲ್ಲಿಯೇ ವಿವಿಧ ರಾಜ್ಯಗಳ ಕಾಂಗ್ರೆಸ್ ಸಮಿತಿಗಳು ಈ ಪೋಸ್ಟ್‌ಅನ್ನು ತಮ್ಮ ತಮ್ಮ ಭಾಷೆಯಲ್ಲಿ ಬಳಸಿ ಪೋಸ್ಟ್ ಮಾಡಿದ್ದವು.
To free the country from shackles of hate and undo the damage done by BJP-RSS.
Step by step, we will reach our goal. 🇮🇳 pic.twitter.com/MuoDZuCHJ2
ಬಿಜೆಪಿಯಿಂದ ಟೀಕೆ: ಕಾಂಗ್ರೆಸ್ ನ ಈ ಟ್ವೀಟ್ ನಂತರ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ವಕ್ತಾರ ಶಹಜಾದ್ ಪೂನವಾಲಾ "ದೇಶವನ್ನು ಸುಡುವುದು ಕಾಂಗ್ರೆಸ್‌ನ ಹಳೆಯ ಅಭ್ಯಾಸ, ಅದು 1984 ರ ಗಲಭೆಗಳು, ಜಲಗಾಂವ್, ಮುಂಬೈ, ಹಾಶಿಂಪುರ, ಭಾಗಲ್ಪುರ ಅಥವಾ ಮೀರತ್ ಆಗಿರಬಹುದು. ಈ ಪಟ್ಟಿ ತೆಗೆದಷ್ಟು ದೊಡ್ಡದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. 1984ರ ಸಿಕ್ ಗಲಭೆಯನ್ನು ರಾಹುಲ್ ಗಾಂಧಿ ಹೇಗೆ ಸಮರ್ಥನೆ ಆಡಿಕೊಂಡಿದ್ದರು ಎನ್ನುವುದನ್ನೂ ನಾವು ನೆನಪಿಸಿಕೊಳ್ಳಬೇಕು, ದೇಶವನ್ನು ಸುಡುವುದು ಹೇಗೆ ಎನ್ನುವ ಬಗ್ಗೆಯೇ ಕಾಂಗ್ರೆಸ್ ಯೋಚನೆ ಮಾಡುತ್ತಿರುತ್ತದೆ ಎಂದು ಬರೆದಿದ್ದಾರೆ.
ಒಂದೋ ದೇಶವನ್ನು ಒಡೆಯುತ್ತೇವೆ ಅಥವಾ ದೇಶವನ್ನು ಸುಡುತ್ತೇವೆ ಎನ್ನುವ ರೀತಿಯ ಕೆಲಸವನ್ನು ಕಾಂಗ್ರೆಸ್ ಕುಟುಂಬ ಹೊಂದಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳು ಸಹಜ ಮತ್ತು ಅರ್ಥವಾಗುವಂತಹವು ಎಂದು ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡ ಯೋಗಿ ಸರ್ಕಾರದ ಸಚಿವ ಜಿತಿನ್ ಪ್ರಸಾದ ಹೇಳಿದ್ದಾರೆ. ಆದರೆ ರಾಜಕೀಯ ಎದುರಾಳಿಗಳನ್ನು ಸುಡಲು ಎಂತಹ ಮನಸ್ಸು ಬೇಕು? ಈ ಋಣಾತ್ಮಕ ಮತ್ತು ದ್ವೇಷದ ರಾಜಕಾರಣವನ್ನು ಎಲ್ಲರೂ ಖಂಡಿಸಬೇಕು ಎಂದು ಬರೆದಿದ್ದಾರೆ.
ಮೋದಿಯನ್ನ ಮಣಿಸೋಕೆ ರಾಹುಲ್ ಗಾಂಧಿ ಸಜ್ಜು, ಸಫಲವಾಗುತ್ತಾ‘ಭಾರತ್ ಜೋಡೋ ಯಾತ್ರೆ’ ?
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕಾಂಗ್ರೆಸ್‌ನ ಬೆಂಕಿ 1984ರಲ್ಲಿ ದೆಹಲಿಯನ್ನು ಸುಟ್ಟು ಹಾಕಿತ್ತು. 2002ರಲ್ಲಿ ಗೋಧ್ರಾದಲ್ಲಿ 59 ಕರಸೇವಕರನ್ನು ಸಜೀವ ದಹನ ಮಾಡಿತ್ತು. ಈಗ ಮತ್ತೆ ಭಾರತದ ಪರಿಸರಕ್ಕೆ ಬೆಂಕಿ ಹಚ್ಚಿ ಎನ್ನುವ ಮೂಲಕ ಹಿಂಸಾಚಾರದ ಕರೆ ನೀಡಿದ್ದಾರೆ. ರಾಹುಲ್ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಉಳಿದುಕೊಳ್ಳಲಿ ಎನ್ನುವ ನಿಟ್ಟಿನಲ್ಲಿ ರಾಹುಲ್ ಗಾಂದಿ ಹೋರಾಟ ನಡೆಸುತ್ತಿದ್ದಾರೆ, ಆದರೆ, ಕಾಂಗ್ರೆಸ್ ಇನ್ನು ಮುಂದೆ ಸಂವಿಧಾನವನ್ನು ನಂಬುವ ಪಕ್ಷವಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
'ತಮಿಳು ಹುಡ್ಗಿಯನ್ನು ಮದುವೆ ಮಾಡಿಸಿಕೊಡ್ತೇವೆ', ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಮದುವೆ ಪ್ರಪೋಸಲ್!
ಇದು ‘ಭಾರತ್ ಜೋಡೋ ಯಾತ್ರೆ’ ಅಲ್ಲ ‘ತೋಡೊ ಇಂಡಿಯಾ’ ಮತ್ತು ‘ಲಗೋ ಆಗ್ ಯಾತ್ರೆ’ ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಈ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲನಿಮಗೆ ಈ ದೇಶದಲ್ಲಿ ಹಿಂಸೆ ಬೇಕೇ? ಎನ್ನುವುದನ್ನು ನಾನು ಕಾಂಗ್ರೆಸ್‌ಗೆ ಕೇಳಲು ಬಯಸುತ್ತೇನೆ. ಈ ಚಿತ್ರವನ್ನು ಕಾಂಗ್ರೆಸ್ ಕೂಡಲೇ ತೆಗೆದುಹಾಕಬೇಕು ಎಂದು ಟ್ವೀಟ್ ಮಾಡಿದ್ದಾರೆ.