ರಾಹುಲ್‌ ಬಿಡಾಡಿ ಗೂಳಿ ಇದ್ದಂತೆ: ಕೇಂದ್ರ ಸಚಿವರ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ!

* ಕೇಂದ್ರ ಸಚಿವ ರಾವ್‌ಸಾಹೇಬ್‌ ದನ್ವೆ ಟೀಕೆ

* ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಿಡಾಡಿ ಗೂಳಿ ಇದ್ದಂತೆ


ಮುಂಬೈ(ಆ.22): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಿಡಾಡಿ ಗೂಳಿ ಇದ್ದಂತೆ. ಅವರಿಂದ ಯಾರಿಗೂ ಉಪಯೋಗ ಇಲ್ಲ ಎಂದು ಕೇಂದ್ರ ಸಚಿವ ರಾವ್‌ಸಾಹೇಬ್‌ ದನ್ವೆ ಟೀಕಿಸಿದ್ದಾರೆ.

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದ ಜನಾಶಿರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ‘ರಾಹುಲ್‌ ಗಾಂಧಿ ದೇವರಿಗೆ ಸಮರ್ಪಿಸಿದ ಗೂಳಿಯಂತೆ ಇದ್ದಾರೆ. ಎಲ್ಲೆಡೆ ತಿರುಗುತ್ತಾರೆ. ಆದರೆ ಯಾರಿಗೂ ಉಪಯೋಗವಿಲ್ಲ. ನಾನು 20 ವರ್ಷಗಳಿಂದ ಲೋಕಸಭೆಯಲ್ಲಿದ್ದೇನೆ. ಅವರ ಕೆಲಸವನ್ನು ನೋಡಿದ್ದೇನೆ’ ಎಂದಿದ್ದಾರೆ.

Latest Videos

ದನ್ವೆ ಹೇಳಿಕೆ ಅಸಭ್ಯ, ಆಘಾತಕಾರಿ. ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

click me!