Latest Videos

ಪುನರ್ಜನ್ಮ ನೀಡಿದ್ದ ವಯನಾಡು ಕ್ಷೇತ್ರ ತ್ಯಜಿಸಿದ ಸಂಸದ ರಾಹುಲ್ ಗಾಂಧಿ!

By Chethan KumarFirst Published Jun 17, 2024, 7:45 PM IST
Highlights

ಎರಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವ ರಾಹುಲ್ ಗಾಂಧಿ ಇದೀಗ ರಾಯಬರೇಲಿ ಉಳಿಸಿಕೊಂಡು ವಯಾನಾಡು ಕ್ಷೇತ್ರಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
 

ನವದೆಹಲಿ(ಜೂ.17) ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಗೆ ಪುನರ್ಜನ್ಮ ಕೊಟ್ಟಿದ್ದ ವಯನಾಡು ಕ್ಷೇತ್ರವನ್ನು ಈ ಬಾರಿ ತೊರೆದಿದ್ದಾರೆ. ಹೌದು, 2024ರ ಲೋಕಸಭಾ ಚುನಾವಣೆಯಲ್ಲಿ ವಯನಾಡು ಹಾಗೂ ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಇದೀಗ ಎರಡರ ಪೈಕಿ ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿದೆ. ರಾಯಬರೇಲಿ ಉಳಿಸಿಕೊಂಡು ವಯನಾಡು ಕ್ಷೇತ್ರವನ್ನು ರಾಹುಲ್ ತ್ಯಜಿಸುತ್ತಿದ್ದಾರೆ. 

ರಾಯಬರೇಲಿ ಕ್ಷೇತ್ರವನ್ನು ಉಳಿಸಿಕೊಂಡಿರುವ ರಾಹುಲ್ ಗಾಂಧಿಗೆ ವಯನಾಡು ಕ್ಷೇತ್ರ ತ್ಯಜಿಸಿದ್ದಾರೆ. ಇದೀಗ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಚುನಾವಣಾ ರಾಜಕೀಯಕ್ಕೆ ಪಾದರ್ಪಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಕ್ಷೇತ್ರ ತೊರೆಯಲು ಇಂದು(ಜೂ.17) ಕೊನೆಯ ದಿನವಾಗಿತ್ತು. ಹೀಗಾಗಿ ಇಂದು ರಾಹುಲ್ ಗಾಂಧಿ ಅಂತಿಮ ನಿರ್ಧಾರ ಘೋಷಿಸಿದ್ದಾರೆ.  

ಇವಿಎಂ ತಿರುಚಬಹುದು: ಎಲಾನ್‌ ಮಸ್ಕ್‌ ನುಡಿ ಭಾರತದಲ್ಲಿ ಭಾರಿ ವಿವಾದ!

ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ಈ ನಿರ್ಧಾರ ಘೋಷಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ನಾಯಕರ ಜೊತೆ ಕೆಲ ಸುತ್ತಿನ ಚರ್ಚೆ ಬಳಿಕ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ನಿರ್ಧಾರ ಘೋಷಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ಈ ನಿರ್ಧಾರ ಘೋಷಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ನಾಯಕರ ಜೊತೆ ಕೆಲ ಸುತ್ತಿನ ಚರ್ಚೆ ಬಳಿಕ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ನಿರ್ಧಾರ ಘೋಷಿಸಿದ್ದಾರೆ. 

ಇತ್ತೀಚೆಗೆ ರಾಯ್‌ಬರೇಲಿಯಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್‌ ತಾವು ಯಾವ ಕ್ಷೇತ್ರ ತೊರೆಯಬೇಕೆಂಬ ಕುರಿತು ಗೊಂದಲದಲ್ಲಿರುವಾಗಿ ತಿಳಿಸಿದ್ದರು. ಇದೀಗ ಅಂತಿಮ ನಿರ್ಧಾರ ಘೋಷಿಸಿದ್ದಾರೆ. ರಾಹುಲ್ ಗಾಂಧಿಯಿಂದ ತೆರವಾಗಿರುವ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿಯನ್ನು ಕಣಕ್ಕಿಳಿಸಲು ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ.  

ಪ್ರಿಯಾಂಕಾ ಸ್ಪರ್ಧಿಸಿದ್ದರೆ ಮೋದಿಗೆ 3 ಲಕ್ಷ ಮತಗಳ ಸೋಲು: ರಾಹುಲ್‌ ಗಾಂಧಿ

ಇತ್ತೀಚೆಗೆ ವಯನಾಡು ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ದ ರಾಹುಲ್ ಗಾಂಧಿ, ಸಮಾವೇಶದಲ್ಲಿ ಮತದಾರರಿಗೆ ಧನ್ಯವಾದ ಅರ್ಪಿಸಿದ್ದರು. ವಯನಾಡು ಜನತೆ ಮತ್ತೆ ನನ್ನ ಕೈ ಹಿಡಿದಿದ್ದು, ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿದ್ದೀರಿ. ಎಲ್ಲರಿಗೂ ಧನ್ಯವಾದಗಳು ಎಂದಿದ್ದರು.  ಉತ್ತರ ಪ್ರದೇಶದಲ್ಲಿ ಈ ಬಾರಿಯ ಇಂಡಿಯಾ ಒಕ್ಕೂಟ ಉತ್ತಮ ಪ್ರದರ್ಶನ ನೀಡಿದೆ. ಜೊತೆಗೆ ರಾಯಬರೇಲಿ ಗಾಂಧಿ ಕುಟುಂಬದ ಭದ್ರಕೋಟೆ. ಇಲ್ಲಿನ ಜನತೆಗೆ ಗಾಂಧಿ ಕುಟುಂಬದ ಜೊತೆ ಅವಿನಾಭಾವ ಸಂಬಂಧವಿದೆ. ಗಾಂಧಿ ಕುಟುಂಬದ ಕ್ಷೇತ್ರವನ್ನು ಭದ್ರಪಡಿಸುವ ಸಲುವಾಗಿ ಹಾಗೂ ದೆಹಲಿಯಿಂದ ರಾಯಬರೇಲಿ ಪ್ರಯಾಣ ಸುಲಭ. ಆದರೆ ವಯನಾಡು ಸುದೀರ್ಘ ಪ್ರಯಾಣದ ಅವಶ್ಯಕೆ ಇದೆ. 

click me!