Iran-Israel Conflict: ಇಸ್ರೇಲ್ ನರಮೇಧ ಮಾಡಿದ ಇರಾನ್‌ ನಮ್ಮ ಸ್ನೇಹಿತ ಎಂದ ಕಾಂಗ್ರೆಸ್ ಸಂಸದ!

Published : Jun 19, 2025, 11:52 PM IST
Congress MP Imran Masood Backs Iran Slams Israel in 2025 War Controversy

ಸಾರಾಂಶ

ಇಸ್ರೇಲ್ ನಡೆಸಿದ ನರಮೇಧವನ್ನು ಖಂಡಿಸಿ, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಇರಾನ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಉತ್ತರ ಪ್ರದೇಶದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಇಸ್ರೇಲ್-ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಭಾರತೀಯರ ಸ್ಥಳಾಂತರ ಕಾರ್ಯಾಚರಣೆ ನಡೆಸುತ್ತಿದೆ.

ಉತ್ತರ ಪ್ರದೇಶ (ಜೂ.19): ನಮ್ಮ ಸ್ನೇಹಿತ ಇರಾನ್ ಇಸ್ರೇಲ್‌ನ್ನು ನರಮೇಧ ಮಾಡಿದೆ ಎಂದು ಉತ್ತರ ಪ್ರದೇಶದ ಸಹರಾನಪುರದ ಕಾಂಗ್ರೆಸ್ ಸಂಸದ ಇಮ್ರಾನ್‌ ಮಸೂದ್ ಇಸ್ರೇಲ್-ಇರಾನ್ ಯುದ್ಧ ಬಗ್ಗೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.

ಇರಾನ್-ಇಸ್ರೇಲ್ ಯುದ್ಧದ ಬಗ್ಗೆ ಇಮ್ರಾನ್ ಮಸೂದ್ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಸಂಸದ, ಇಸ್ರೇಲ್-ಇರಾನ್ ಯುದ್ಧದ ವಿಚಾರವಾಗಿ ಬಹಿರಂಗವಾಗಿ ಇರಾನ್‌ ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

ಇಸ್ರೇಲ್ ವಿರುದ್ಧ ಕಾಂಗ್ರೆಸ್ ಸಂಸದ ಆಕ್ರೋಶ:

ಇಸ್ರೇಲ್ ನರಮೇಧ ಮಾಡಿದೆ, ಇದು ಖಂಡನೀಯ. ಇರಾನ್ ನಮ್ಮ ಐತಿಹಾಸಿಕ ಸ್ನೇಹಿತ, ನಾವು ಇರಾನ್‌ನೊಂದಿಗೆ ಇದ್ದೇವೆ ಎಂದು ಬಹಿರಂಗವಾಗಿ ಬೆಂಬಲಿಸಿ ಇಸ್ರೇಲ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆಕ್ರಮಣಕಾರಿ ಇಸ್ರೇಲ್ ಹೊರತು ಇರಾನ್ ಅಲ್ಲ. ಪ್ರತಿಯೊಬ್ಬರಿಗೂ ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ ಹಕ್ಕಿದೆ. ಎಂದು ಮಸೂದ್ ಹೇಳಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಉತ್ತರ ಪ್ರದೇಶದಲ್ಲಿ ರಾಜಕೀಯ ಕೋಲಾಹಲ:

ಮಸೂದ್‌ರ ಹೇಳಿಕೆಯಿಂದ ಉತ್ತರ ಪ್ರದೇಶದಲ್ಲಿ ರಾಜಕೀಯ ಗೊಂದಲ ಉಂಟಾಗಿದೆ. ಮಾಜಿ ಸಮಾಜವಾದಿ ಪಕ್ಷದ ಸಂಸದ ಡಾ. ಎಸ್ಟಿ ಹಸನ್ ಕೂಡ ಇರಾನ್‌ಗೆ ಬಹಿರಂಗ ಬೆಂಬಲ ಸೂಚಿಸಿದ್ದು, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ತೀಕ್ಷ್ಣ ಟೀಕೆಗಳನ್ನು ಮಾಡಿದ್ದಾರೆ. ಈ ಹೇಳಿಕೆಗಳು ರಾಜ್ಯದಲ್ಲಿ ವಿಭಿನ್ನ ಪ್ರತಿಕ್ರಿಯೆಗಳಿಗೆ ಕಾರಣವಾಗಿವೆ.

ಇರಾನ್ ಕ್ಷಿಪಣಿ ದಾಳಿ: ಇಸ್ರೇಲ್ ಆಸ್ಪತ್ರೆಗೆ ಹಾನಿ:

ಇದೇ ವೇಳೆ, ಇರಾನ್-ಇಸ್ರೇಲ್ ಯುದ್ಧ ತೀವ್ರಗೊಂಡಿದ್ದು, ಇರಾನ್‌ನ ಕ್ಷಿಪಣಿ ಇಸ್ರೇಲ್‌ನ ದಕ್ಷಿಣ ಭಾಗದ ಪ್ರಮುಖ ಆಸ್ಪತ್ರೆಯ ಮೇಲೆ ನೇರ ದಾಳಿ ನಡೆಸಿದೆ. ಈ ದಾಳಿಯಿಂದ ಆಸ್ಪತ್ರೆಗೆ ಗಂಭೀರ ಹಾನಿಯಾಗಿದೆ. ಎರಡೂ ದೇಶಗಳು ಪರಸ್ಪರ ಕ್ಷಿಪಣಿ ದಾಳಿಗಳನ್ನು ತೀವ್ರಗೊಳಿಸಿವೆ.

ಭಾರತ ಸರ್ಕಾರದ ಕಾರ್ಯಾಚರಣೆ:

ಈ ಉದ್ವಿಗ್ನತೆಯ ನಡುವೆ, ಭಾರತ ಸರ್ಕಾರವು ಇಸ್ರೇಲ್ ಮತ್ತು ಇರಾನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುತ್ತಿದೆ. ಆಪರೇಷನ್ ಸಿಂಧು ಅಡಿಯಲ್ಲಿ, ಇರಾನ್‌ನ ಟೆಹ್ರಾನ್‌ನಿಂದ 100ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಒಳಗೊಂಡ ವಿಮಾನ ಜೂನ್ 19, 2025ರಂದು ದೆಹಲಿಗೆ ಆಗಮಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು