ತಲೆಕೆಳಗಾಗಿ ನಿಂತು ಡಿಸಿ ವಿರುದ್ಧ ಕಾಂಗ್ರೆಸ್‌ ಶಾಸಕ ಧರಣಿ!

Published : Sep 09, 2020, 09:55 AM ISTUpdated : Sep 09, 2020, 09:59 AM IST
ತಲೆಕೆಳಗಾಗಿ ನಿಂತು ಡಿಸಿ ವಿರುದ್ಧ ಕಾಂಗ್ರೆಸ್‌ ಶಾಸಕ ಧರಣಿ!

ಸಾರಾಂಶ

ಸ್ಥಳೀಯ ಜಿಲ್ಲಾಧಿಕಾರಿ ತಮ್ಮ ಭೇಟಿಗೆ ಅವಕಾಶ ನೀಡಲಿಲ್ಲವೆಂಬ ಕಾರಣ| ಡಿಸಿ ವಿರುದ್ಧ ತಲೆಕೆಳಗಾಗಿ ನಿಂತು ಮಧ್ಯಪ್ರದೇಶ ಕಾಂಗ್ರೆಸ್‌ ಶಾಸಕ ಧರಣಿ!

ಬೋಪಾಲ್‌(ಸೆ.09): ಸ್ಥಳೀಯ ಜಿಲ್ಲಾಧಿಕಾರಿ ತಮ್ಮ ಭೇಟಿಗೆ ಅವಕಾಶ ನೀಡಲಿಲ್ಲವೆಂಬ ಕಾರಣಕ್ಕೆ ಸಿಡಿದೆದ್ದ ಶಾಸಕರೊಬ್ಬರು ತಲೆಕೆಳಗಾಗಿ ನಿಂತು ಪ್ರತಿಭಟಿಸಿದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಅಟಲ್‌ ಎಕ್ಸ್‌ಪ್ರೆಸ್‌ ಯೋಜನೆಗೆ ರೈತರಿಂದ ಸ್ವಾಧೀನಪಡಿಸಿಕೊಳ್ಳಲಾದ ಜಮೀನಿಗೆ ಸರಿಯಾದ ಪರಿಹಾರ ಧನ ನೀಡುವಂತೆ ಕೋರುವ ಸಲುವಾಗಿ ಕಾಂಗ್ರೆಸ್‌ ಶಾಸಕ ಬಾಬು ಸಿಂಗ್‌ ಅವರು ತಮ್ಮ ಬೆಂಬಲಿಗರೊಂದಿಗೆ ಭೋಪಾಲ್‌ನಿಂದ 390 ಕಿ.ಮೀ ದೂರದ ಶೀಪುರ ಜಿಲ್ಲಾಡಳಿತ ಕಚೇರಿಗೆ ಆಗಮಿಸಿದ್ದರು.

ಆದರೆ, ಜಾಂಡೇಲ್‌ ಅವರ ಭೇಟಿಗೆ ಜಿಲ್ಲಾಧಿಕಾರಿ ಅವಕಾಶ ನೀಡಿರಲಿಲ್ಲ. ಸುದೀರ್ಘ ಕಾಲ ಕಾದು ಬೇಸತ್ತ ಶಾಸಕ ಜಾಂಡೇಲ್‌ ಕೊನೆಗೆ ಅಂಗಿ ಬಿಚ್ಚಿ ತಲೆಕೆಳಗಾಗಿ ನಿಂತು ಪ್ರತಿಭಟನೆ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!