ಭಾರತದಲ್ಲಿ ಒಂದೇ ದಿನ ವಿಶ್ವದಾಖಲೆಯ 1ಲಕ್ಷ ಕೊರೋನಾ ಕೇಸು!

By Suvarna NewsFirst Published Sep 9, 2020, 8:41 AM IST
Highlights

ನಿನ್ನೆ ವಿಶ್ವದಾಖಲೆಯ 1ಲಕ್ಷ ಕೊರೋನಾ ಕೇಸು| 1.04 ಲಕ್ಷ ಹೊಸ ಕೇಸು/ 1532 ಕೊರೋನಾ ಸೋಂಕಿತರ ಸಾವು| ಒಟ್ಟು ಸೋಂಕಿತರ ಸಂಖ್ಯೆ 43.55 ಲಕ್ಷಕ್ಕೆ, ಸಾವು 74000 ಸನಿಹಕ್ಕೆ

ನವದೆಹಲಿ(ಸೆ.09): ಕೊರೋನಾ ಹೊಡೆತದಿಂದ ಹೈರಾಣಾದ ಭಾರತದಲ್ಲಿ ಮಂಗಳವಾರ ವಿಶ್ವದಾಖಲೆಯ 1.04 ಲಕ್ಷ ಹೊಸ ಕೊರೋನಾ ಕೇಸು ದೃಢಪಟ್ಟಿದೆ. ಇದು ವಿಶ್ವದಲ್ಲಿ ಯಾವುದೇ ದೇಶದಲ್ಲಿ ಒಂದು ದಿನದಲ್ಲಿ ದಾಖಲಾದ ಗರಿಷ್ಠ ಸೋಂಕಿತರ ಪ್ರಮಾಣವಾಗಿದೆ. ಅದೇ ರೀತಿ ನಿನ್ನೆ ಸೋಂಕಿಗೆ 1532 ಜನರು ಬಲಿಯಾಗಿದ್ದಾರೆ. ಇದು ಭಾರತದಲ್ಲಿ ಈವರೆಗೆ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಸಾವಿನ ಪ್ರಮಾಣವಾಗಿದೆ. ಇದರೊಂದಿಗೆ ಇದುವರೆಗೆ ದೇಶದಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 73828ಕ್ಕೆ ತಲುಪಿದೆ.

ಇನ್ನು ನಿನ್ನೆ 89446 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಗುಣಮುಖರಾದವರ ಒಟ್ಟು ಪ್ರಮಾಣ 33.86 ಲಕ್ಷ ಮುಟ್ಟಿದೆ.

ಮಂಗಳವಾರ ಮಹಾರಾಷ್ಟ್ರದಲ್ಲಿ 20,131 ಜನರಿಗೆ ಸೋಂಕು ತಗುಲಿದ್ದು, 380 ಮಂದಿ ಬಲಿಯಾಗಿದ್ದಾರೆ. ಉಳಿದಂತೆ ಆಂಧ್ರಪ್ರದೇಶ 10,601(73 ಮೃತರು), ಕರ್ನಾಟಕ 7866(146 ಸಾವು), ಉತ್ತರ ಪ್ರದೇಶದಲ್ಲಿ 6622 ಮಂದಿಗೆ ಸೋಂಕು ಹಾಗೂ 71 ಮಂದಿ ಈ ವ್ಯಾಧಿಗೆ ಬಲಿಯಾಗಿದ್ದಾರೆ.

ಕೊರೋನಾ ಅಂಕಿ ಅಂಶ

3102: ಪ್ರತಿ 10 ಲಕ್ಷ ಜನರಿಗೆ ಸೋಂಕಿನ ಪ್ರಮಾಣ

53: ಪ್ರತಿ 10 ಲಕ್ಷ ಸೋಂಕಿತರಲ್ಲಿ ಸಾವಿನ ಪ್ರಮಾಣ

5 ರಾಜ್ಯಗಳಲ್ಲಿ ಶೇ.62 ಕೇಸು, ಶೇ.70 ಸಾವು

ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಉತ್ತರಪ್ರದೇಶ ಮತ್ತು ಆಂಧ್ರಪ್ರದೇಶ ದೇಶದ ಒಟ್ಟು ಸಾವಿನಲ್ಲಿ ಶೇ.70ರಷ್ಟುಪಾಲು ಹೊಂದಿವೆ. ಜೊತೆಗೆ ಒಟ್ಟು ಪ್ರಕರಣಗಳಲ್ಲಿ ಶೇ.62ರಷ್ಟುಪಾಲು ಹೊಂದಿವೆ.

5000ಕ್ಕಿಂತ ಕಡಿಮೆ ಕೇಸ್‌

ದೇಶದ 14 ರಾಜ್ಯಗಳಲ್ಲಿ ತಲಾ 5000ಕ್ಕಿಂತ ಕಡಿಮೆ ಸಕ್ರಿಯ ಕೇಸುಗಳಿವೆ. ಲಕ್ಷದ್ವೀಪದಲ್ಲಿ ಯಾವುದೇ ಸಕ್ರಿಯ ಕೇಸುಗಳಿಲ್ಲ.

click me!