
ಜೈಪುರ(ಸೆ.05) ಕೇಂದ್ರ ಸರ್ಕಾರ ಜಿ20 ಆಮಂತ್ರದಲ್ಲಿ ಪ್ರಸಿಡೆಂಟ್ ಆಫ್ ಭಾರತ ಅನ್ನೋ ಉಲ್ಲೇಖ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇಂಡಿಯಾ ಮೈತ್ರಿ ಒಕ್ಕೂಟ ಕೇಂದ್ರದ ನಡೆಯನ್ನು ಟೀಕಿಸಿದೆ. ಇತ್ತ ದೇಶಾದ್ಯಂತ ಇದೀಗ ಇಂಡಿಯಾ ಅಥವಾ ಭಾರತ, ಯಾವ ಹೆಸರು, ಮರುನಾಮಕರಣ ಸೇರಿದಂತೆ ಹಲವು ಚರ್ಚೆಗಳು ನಡೆಯುತ್ತಿದೆ. ಇದರ ನಡುವೆ ಕಾಂಗ್ರೆಸ್ ನಾಯಕ ಭಾರತ್ ಮಾತಾ ಕಿ ಘೋಷಣೆ ನಿಲ್ಲಿಸಿ ಟೀಕೆಗೆ ಗುರಿಯಾಗಿದ್ದಾರೆ. ರಾಜಸ್ಥಾನ ವಿಧಾನಸಭಾ ಚುನಾವಣಾ ಕುರಿತು ನಡೆದ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದಾರೆ. ತಕ್ಷಣವೇ ಮಧ್ಯಪ್ರವೇಶಿಸಿದ ಕೈ ನಾಯಕ ಆರಾಧಾನ ಮಿಶ್ರಾ ಘೋಷಣೆ ನಿಲ್ಲಿಸಲೂ ಸೂಚಿಸಿದ್ದಾರೆ. ಬಳಿಕ ಭಾರತ್ ಮಾತಾ ಕಿ ಬದಲು, ಕಾಂಗ್ರೆಸ್ ಜಿಂದಾಬಾದ್ ಘೋಷಣೆ ಕೂಗಲು ಸೂಚಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ಆಕ್ರೋಶ ಹೊರಹಾಕಿದೆ. ಕಾಂಗ್ರೆಸ್ ಭಾರತ ಮಾತೆ, ಸಂವಿಧಾನ, ಈ ದೇಶಕ್ಕೆ ಯಾವುದೇ ಗೌರವ ನೀಡುವುದಿಲ್ಲ. ಏನಿದ್ದರೂ ಪಕ್ಷ ಹಾಗೂ ಒಂದು ಕುಟುಂಬಕ್ಕೆ ಮಾತ್ರ ಎಂದು ಟೀಕಿಸಿದೆ.
ಆದರ್ಶನ ನಗರದಲ್ಲಿ ಬ್ಲಾಕ್ ಮಟ್ಟದ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ರಾಜಸ್ಥಾನ ಕಾಂಗ್ರೆಸ್ ಪಕ್ಷದ ಚುನಾವಣಾ ವೀಕ್ಷಕರಾಗಿರುವ ಆರಾಧನ ಮಿಶ್ರಾ ಮುಂದೆ ಕಾರ್ಯಕರ್ತರು ತಮ್ಮ ತಮ್ಮ ನಾಯಕರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ಯಾವುದೇ ನಾಯಕರ ಪರ ಘೋಷಣೆ ಕೂಗದಂತೆ ಕಾರ್ಯಕರ್ತರಿಗೆ ಆರಾಧನ ಮಿಶ್ರಾ ಸೂಚಿಸಿದ್ದಾರೆ.
ಅತೀ ಹೆಚ್ಚು ಹೆಸರಿನಿಂದ ಗುರುತಿಸಿಕೊಂಡಿರುವ ಏಕೈಕ ದೇಶ ಭಾರತ, ಇಲ್ಲಿದೆ ಇಂಡಿಯಾದ 7 ಹೆಸರು!
ಈ ಸೂಚನೆ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದಾರೆ. ಈ ಘೋಷಣೆ ಕೇಳುತ್ತಿದ್ದಂತೆ ಆರಾಧನಾ ಮಿಶ್ರಾ ಉರಿದು ಬಿದ್ದಿದ್ದಾರೆ. ಭಾರತ್ ಮಾತಾ ಕಿ ಜೈ ಘೋಷಣೆ ನಿಲ್ಲುಸುವಂತೆ ಸೂಚಿಸಿದ್ದಾರೆ. ಕಾರ್ಯಕರ್ತರು ಘೋಷಣೆ ನಿಲ್ಲಿಸಿದ ಬಳಿಕ ಕಾಂಗ್ರೆಸ್ ಜಿಂದಾಬಾದ್ ಘೋಷಣೆ ಕೂಗುವಂತೆ ಸೂಚಿಸಿದ್ದಾರೆ. ಬಳಿಕ ಕಾರ್ಯಕರ್ತರು ಕಾಂಗ್ರೆಸ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ.
ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್‌ಗೆ ಈ ದೇಶ, ಸಂವಿಧಾನದ ಮೇಲೆ ಗೌರವ ಇಲ್ಲ. ಸಂವಿಧಾನಿಕ ಸಂಸ್ಥೆಗಳ ಮೇಲೆ ಎಳ್ಳಷ್ಟು ಗೌರವವಿಲ್ಲ. ಕಾಂಗ್ರೆಸ್ ಯಾಕೆ ಭಾರತ್ ಮಾತಾ ಕೀ ಘೋಷಣೆಯನ್ನು ವಿರೋಧಿಸುತ್ತದೆ? ಎಂದು ಜೆಪಿ ನಡ್ಡಾ ಪ್ರಶ್ನಿಸಿದ್ದಾರೆ.
Viral video: ಪಾಕ್ ಪರ ಘೋಷಣೆ: ಐದಕ್ಕೂ ಹೆಚ್ಚು ಜನರ ವಿರುದ್ಧ ಕೇಸು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ