ಶ್ರಾವಣದಲ್ಲಿ ಅಶ್ಲೀಲ ವಿಡಿಯೋ ನೋಡುದಿಲ್ಲವೇ? ತಿರುಗೇಟು ನೀಡಿ ಪೇಚಿಗೆ ಸಿಲುಕಿದ INDIA ಮೈತ್ರಿ ಪಕ್ಷ!

By Suvarna NewsFirst Published Sep 5, 2023, 6:27 PM IST
Highlights

ಬಿಜೆಪಿ ನಾಯಕನಿಗೆ ತಿರುಗೇಟು  ನೀಡುವ ಭರದಲ್ಲಿ ಶ್ರಾವಣ ಮಾಸದಲ್ಲಿ ನೀವು ಪೋರ್ನ್ ವಿಡಿಯೋ ನೋಡುದಿಲ್ಲವೇ ಎಂದು ಇಂಡಿಯಾ ಮೈತ್ರಿ ಒಕ್ಕೂಟದ ಮುಖಂಡ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ.

ಪಾಟ್ನಾ(ಸೆ.05) ಇಂಡಿಯಾ ಮೈತ್ರಿ ಒಕ್ಕೂಟ  ರಚನೆಯಾದ ಬಳಿಕ ವಾಕ್ಸಮರ ಜೋರಾಗಿದೆ.  ಈ ವಾಕ್ಸಮರದಲ್ಲಿ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಲು ಹೋದ ಇಂಡಿಯಾ  ಮೈತ್ರಿ ಒಕ್ಕೂಟ ಪಕ್ಷ ಇದೀಗ ಪೇಚಿಗೆ ಸಿಲುಕಿದೆ. ಶ್ರಾವಣ ಮಾಸದಲ್ಲಿ ನೀವು ಅಶ್ಲೀಲ ವಿಡಿಯೋ ನೋಡುವುದಿಲ್ಲವೇ ಎಂದು ಆರ್‌ಜೆಡಿ  ನಾಯಕ ಬಿಜೆಪಿಗೆ ತಿರುಗೇಟು  ನೀಡಿದ್ದಾರೆ. ಆದರೆ ಈ ಹೇಳಿಕೆಗೆ ಬಾರಿ ಆಕ್ಷೇಪ ವ್ಯಕ್ತವಾಗಿದೆ.  ಹಿಂದೂ ಧಾರ್ಮಿಕ ನಂಬಿಕೆ, ಆಚರಣೆಯನ್ನು ಗೇಲಿ ಮಾಡಿ ಕೋಟ್ಯಾಂತರ ಜನರ ನಂಬಿಕೆಯನ್ನೇ ಪ್ರಶ್ನಿಸಿದ್ದೀರಿ ಎಂದು ಆರ್‌ಜೆಡಿ  ನಾಯಕ ಪಪ್ಪು ಯಾದವ್ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದೆ.

ಇತ್ತೀಚೆಗೆ ಲಾಲು ಪ್ರಸಾದ್ ಯಾದವ್ ಹಾಗೂ ರಾಹುಲ್ ಗಾಂಧಿ ಫೋಟೋ ಭಾರಿ ವೈರಲ್ ಆಗಿತ್ತು. ಮಟನ್ ಮಾಂಸಾಹಾರ ತಯಾರಿಸುತ್ತಿದ್ದಈ ಫೋಟೋಗೆ ಪರ ವಿರೋಧಗಳು ವ್ಯಕ್ತವಾಗಿತ್ತು.  ಜನಿವಾರಧಾರಿ ರಾಹುಲ್ ಗಾಂಧಿ ಮಾಂಸಾಹಾರ ಸೇವಿಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿತ್ತು. ಇನ್ನು ಲಾಲೂ ಪ್ರಸಾದ್ ಯಾದವ್ ವಿರುದ್ಧ ಬಿಹಾರ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಆಕ್ರೋಶ ಹೊರಹಾಕಿದ್ದರು. ಶ್ರಾವಣ ಪವಿತ್ರ ಮಾಸದಲ್ಲಿ ಲಾಲೂ ಪ್ರಸಾದ್ ಯಾದವ್ ಮಟನ್ ತಿಂದಿದ್ದಾರೆ.  ಮುಂದಿನ ಚುನಾವಣೆಯಲ್ಲಿ ಇದರ ಫಲ ಅನುಭವಿಸಲಿದ್ದೀರಿ ಎಂದು ಸುಶೀಲ್ ಕುಮಾರ್ ಮೋದಿ ಟೀಕಿಸಿದ್ದರು.

ಸುಪ್ರೀಂನಿಂದ ಬಿಗ್ ರಿಲೀಫ್‌: ರಾಹುಲ್‌ ಗಾಂಧಿಗೆ ಭರ್ಜರಿ ಬಾಡೂಟ ಮಾಡಿ ಬಡಿಸಿದ ಲಾಲೂ ಪ್ರಸಾದ್

ಸುಶೀಲ್ ಕುಮಾರ್ ಆರೋಪಕ್ಕೆ ಕೆರಳಿ ಕೆಂಡವಾದ ಆರ್‌ಜೆಡಿ ನಾಯಕ ಪಪ್ಪು ಯಾದವ್, ತಿರುಗೇಟು ನೀಡಿದ್ದಾರೆ. ಸುಶೀಲ್ ಕುಮಾರ್ ಮೋದಿ, ನೀವು ಮಂಗಳವಾರ, ಬುಧವಾರ ಹಾಗೂ ಶ್ರಾವಣದಲ್ಲಿ ಮಾಂಸಾಹಾರ ತ್ಯಜಿಸಿದ್ದೀರಾ? ರಾಜಕೀಯ ನಾಯಕರು ಅಶ್ಲೀಲ ಚಿತ್ರ ನೋಡುವುದನ್ನು ಬಿಡುತ್ತಾರಾ? ಮದ್ಯ ಸೇವನೆ ಮಾಡುದಿಲ್ಲವೇ? ಮಾಂಸಾಹಾರಕ್ಕೆ ಜಾತಿ ತರುತ್ತಿರುವುದೇಕೆ? ಸುಶೀಲ್ ಭಾಯಿ ನಿಮ್ಮ ಫೋನ್ ಚೆಕ್ ಮಾಡಿ, ನೀವು ಶ್ರಾವಣ ಮಾಸದಲ್ಲಿ ಎಷ್ಟು ಅಶ್ಲೀಲ ವಿಡಿಯೋ ವೀಕ್ಷಿಸಿದ್ದೀರಿ? ಎಂದು ಪಪ್ಪು ಯಾದವ್ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

ಪಪ್ಪು ಯಾದವ್ ಕೇಳಿರುವ ಹಲವು ಪ್ರಶ್ನೆಗಳು ಭಾರಿ ಚರ್ಚೆಯಾಗುತ್ತಿದೆ.  ರಾಜಕೀಯ ನಾಯಕರು ಏನೆಲ್ಲಾ ಮಾಡುತ್ತಾರೆ ಅನ್ನೋದನ್ನು ಪಪ್ಪು ಯಾದವ್ ಬಹಿರಂಗಪಡಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಇತ್ತ ಪರ ವಿರೋಧಗಳು ವ್ಯಕ್ತವಾಗಿದೆ.  ಇದೀಗ ಬಿಜೆಪಿ ಹಾಗೂ ಆರ್‌ಜೆಡಿ ನಡುವೆ ಮಟನ್ ಜಟಾಪಟಿ ನಡೆಯುತ್ತಿದೆ. 

ವೈದ್ಯಕೀಯ ಕಾರಣಕ್ಕೆ ಜಾಮೀನು ಪಡೆದು ಲಾಲೂ ಪ್ರಸಾದ್ ಬ್ಯಾಡ್ಮಿಂಟನ್‌ ಆಟ, ಜಾಮೀನು ರದ್ದತಿಗೆ ಮನವಿ

ಇದಕ್ಕೂ ಮೊದಲು ಬಿಜೆಪಿ, ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿತ್ತು.  ರಾಹುಲ್ ಗಾಂಧಿ ಹಾಗೂ ಲಾಲೂ ಯಾದವ್ ಮಟನ್‌ ಖಾದ್ಯ ತಯಾರಿಸುತ್ತಿರುವ ವಿಡಿಯೋ ಕುರಿತು ಬಿಜೆಪಿ ಕಿಡಿಕಾರಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ವಕ್ತಾರ ಸಂಬಿತ್‌ ಪಾತ್ರ, ‘ಜನಿವಾರ ಧರಿಸಿದ ನಕಲಿ ಬ್ರಾಹ್ಮಣ ರಾಹುಲ್‌ ಗಾಂಧಿ ಅವರ ನಾಟಕ ನೋಡಿ. ಆ.4ರಂದು ಮಟನ್‌ ಮಾಡುವ ವಿಡಿಯೋ ಮಾಡಿ, ಅದನ್ನು ಶ್ರಾವಣ ಮಾಸ ಮುಗಿದ ಬಳಿಕ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಹಿಂದುಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದಾರೆ’ ಎಂದು ಕಿಡಿಕಾರಿದ್ದಾರೆ. ಭಾನುವಾರ ಬಿಡುಗಡೆಯಾದ ಈ ವಿಡಿಯೋದಲ್ಲಿ ರಾಹುಲ್‌ ಗಾಂಧಿ ಹಾಗೂ ಲಾಲು ಪ್ರಸಾದ್‌ ಯಾದವ್‌ ಇಬ್ಬರು ಮಟನ್‌ ಖಾದ್ಯ ತಯಾರಿಸಿದ್ದರು.

click me!