ರಾಜ್ಯಸಭೆಗೆ ಗುಜರಾತ್‌ನಿಂದ ಜೆಪಿ ನಡ್ಡಾ, ರಾಜಸ್ಥಾನದಿಂದ ಸೋನಿಯಾ ಗಾಂಧಿ ಅವಿರೋಧ ಆಯ್ಕೆ!

By Suvarna NewsFirst Published Feb 20, 2024, 4:31 PM IST
Highlights

ರಾಜ್ಯಸಭೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ  ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನವದೆಹಲಿ(ಫೆ.20) ರಾಜ್ಯ ಚುನಾವಣೆಗೂ ಮೊದಲೇ ಕೆಲ ನಾಯಕರು ಅವಿರೋಧವವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಹಿಮಾಚಲ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜೆಪಿ ನಡ್ಡಾಗೆ ಈ ಬಾರಿ ಗುಜರಾತ್‌ನಿಂದ ಟಿಕೆಟ್ ನೀಡಲಾಗಿತ್ತು. ಜೆಪಿ ನಡ್ಡಾ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇತ್ತ ರಾಜಸ್ಥಾನದಿಂದ ಸ್ಪರ್ಧಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜೆಪಿ ನಡ್ಡಾ ಹಾಲಿ ಹಾಗೂ ತಮ್ಮದೇ ತವರು ರಾಜ್ಯವಾದ ಹಿಮಾಚಲಪ್ರದೇಶದ ರಾಜ್ಯಸಭೆ ಸದಸ್ಯರಾಗಿದ್ದಾರೆ. ಆದರೆ ಈ ಬಾರಿ ಅವರ ಮರು ಆಯ್ಕೆಗೆ ಅಗತ್ಯವಾದ ಪ್ರಮಾಣದ ಮತಗಳು ಹಿಮಾಚಲ ಪ್ರದೇಶದಲ್ಲಿ ಇಲ್ಲದ ಕಾರಣ ಅವರಿಗೆ ಗುಜರಾತ್‌ನ ಟಿಕೆಟ್‌ ನೀಡಲಾಗಿತ್ತು.  ಇತ್ತ ಸೋನಿಯಾ ಗಾಂಧಿ 2019ರ ಲೋಕಸಭಾ ಚುನಾವಣೆಯಲ್ಲಿ ರಾಯಬರೇಲಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿ ಆರೋಗ್ಯ ಮತ್ತು ವಯಸ್ಸಿನ ಕಾರಣದಿಂದಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸದ ಸೋನಿಯಾ ಗಾಂಧಿ ರಾಜಸ್ಥಾನದಿಂದ ರಾಜ್ಯಸಭೆಗೆ ಟಿಕೆಟ್ ಪಡೆದಿದ್ದರು.

ಸೋನಿಯಾ ಗಾಂಧಿಗೆ ಭಾರತದಲ್ಲಿ ಸ್ವಂತ ಮನೆಯೇ ಇಲ್ಲ, ಕಾರು ಇಲ್ಲ, ಅಫಿಡವಿಟ್‌ನಲ್ಲಿ ಆಸ್ತಿ ಬಹಿರಂಗ

ಕಳೆದ ಅವಧಿಯ ರಾಜ್ಯಸಭಾ ಚುನಾವಣೆ ವೇಳೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರವಿತ್ತು. ಬಿಜೆಪಿ ಬಳಿ ಸಂಖ್ಯಾಬಲವಿದ್ದ ಕಾರಣ ಜೆಪಿ ನಡ್ಡಾ ತಮ್ಮ ತವರು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಆಡಳಿತವಿದೆ. ಬಿಜೆಪಿ ಬಳಿ ಸಂಖ್ಯಾಬಲದ ಕೊರತೆ ಇದೆ ಹೀಗಾಗಿ ರಾಜ್ಯಸಭಾ ಸಂಸದರಾಗಿ ಮರು ಆಯ್ಕೆಗೆ ಜೆಪಿ ನಡ್ಡಾ ಅವರಿಗೆ ಗುಜರಾತ್‌ನಿಂದ ಟಿಕೆಟ್ ನೀಡಲಾಗಿತ್ತು. ಗುಜರಾತ್‌ನಲ್ಲಿ ಬಿಜೆಪಿ ಬಳಿಕ ಸಂಖ್ಯಾಬಲವಿರುವ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಇತ್ತ ಜೆಪಿ ನಡ್ಡಾ ಬಿಜೆಪಿ ಅಧ್ಯಕ್ಷ ಅವಧಿಯನ್ನು 2024ರ ಜೂನ್ ತಿಂಗಳ ವರೆಗೆ ವಿಸ್ತರಿಸಲಾಗಿದೆ. ಲೋಕಸಭಾ ಚುನಾವಣೆ ಮಹತ್ತರ ಜವಾಬ್ದಾರಿ ಜೆಪಿ ನಡ್ಡಾ ಮೇಲಿದೆ. ಚುನಾವಣೆ ಹಿನ್ನಲೆಯಲ್ಲಿ ಅವರ ಅವಧಿಯನ್ನು ವಿಸ್ತರಿಸಲಾಗಿದೆ. 

Rajya Sabha Election: ನಡೆಯಲಿದ್ಯಾ ಅಡ್ಡ ಮತದಾನ..? ಏನಿದು ಮತ ಸಮೀಕರಣ..?

ಫೆಬ್ರವರಿ 27ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ, ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ಗಂಟೆವರೆಗೆ  ಮತದಾನ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದೆ. 

ಇತ್ತ ಸೋನಿಯಾ ಗಾಂಧಿ ರಾಜ್ಯಸಭಾ ಚುನಾವಣೆ ಸ್ಪರ್ಧೆ ಖಚಿತವಾಗುತ್ತಿದ್ದಂತೆ ತಮ್ಮ ರಾಯಬರೇಲಿ ಜನತೆಗೆ ಪತ್ರದ ಮೂಲಕ ಸಂದೇಶ ರವಾನಿಸಿದ್ದರು. ವಯಸ್ಸು, ಆರೋಗ್ಯ ಕಾರಣ ರಾಯಬರೇಲಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.  ನೀವು ಸದಾ ನನ್ನ ಮನದಲ್ಲಿರುತ್ತೀರಿ. ಮುಂದೆಯೂ ಗಾಂಧಿ ಕುಟುಂಬವನ್ನು ಹರಸಿ ಎಂದು ಕ್ಷೇತ್ರದ ಜನತೆಗೆ ಸೋನಿಯಾ ಗಾಂಧಿ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.


 

click me!