
ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು. ಟ್ವಿಟರ್‌ನಲ್ಲಿ ಶುಭಾಶಯ ಕೋರಿ ತರೂರ್ ಪೋಸ್ಟ್ ಮಾಡಿದ್ದರು. ಆದರೆ ತರೂರ್ ಒಂದು ಮೆಸ್ಟೇಕ್ಸ್ ಮಾಡಿದ್ದರು. ಇದನ್ನು ಬಳಕೆದಾರರೊಬ್ಬರ ಕಣ್ಣಿಗೆ ಬಿದ್ದಿದ್ದು ಅವರು ಮಾಡಿರುವ ತಪ್ಪನ್ನ ಎತ್ತಿ ತೋರಿಸಿದ್ದಾರೆ.
ತರೂರ್ ಅವರು Preposition) ಬಳಕೆಯಲ್ಲಿ ತಪ್ಪು ಮಾಡಿದ್ದರು. on his 76th birthday ಎಂದು ಬರೆಯುವ ಬದಲು in his 76th birthday ಎಂದು ಬರೆದಿದ್ದರು. Warm greetings to Prime Minister @narendramodi in his 76th birthday. Wishing him a very happy day and a healthy and fulfilling year ahead. My best wishes to him on this occasion for continued public service to our beloved nation ಎಂದು ತರೂರ್ ಬರೆದಿದ್ದರು. ಒಬ್ಬ ಬಳಕೆದಾರರು ತರೂರ್ ಅವರನ್ನು ಟ್ಯಾಗ್ ಮಾಡಿ ಶಶಿ ಜಿ ವ್ಯಾಕರಣ ತಪ್ಪು ಮಾಡಿದ್ದಾರೆ ಎಂದು ಹೇಳಿದ್ದರು.
Warm greetings to Prime Minister @narendramodi in his 76th birthday. Wishing him a very happy day and a healthy and fulfilling year ahead. My best wishes to him on this occasion for continued public service to our beloved nation. 🇮🇳 https://t.co/baftZnQSRA
— Shashi Tharoor (@ShashiTharoor) September 17, 2026
ಅದಕ್ಕೆ ಪ್ರತಿಕ್ರಿಯಿಸಿರುವ ತರೂರ್.. ಹೌದು, on ಬರೆಯುವ ಬದಲು in ಆಗಿದೆ. ಅಯ್ಯೋ, ಇದು ಸದಾ ನಡೆಯುತ್ತಲೇ ಇರುತ್ತದೆ.. ಎಂದು ನಗೆಯ ಚಟಾಕಿ ಹಾರಿಸಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ತರೂರ್ ಇಂಗ್ಲಿಷ್ ಭಾಷೆಯ ಪಾಂಡಿತ್ಯ ಮತ್ತು ಕಠಿಣ ಪದಗಳ ಬಳಕೆಗೆ ಹೆಸರುವಾಸಿ. ಅವರು ಈ ಹಿಂದೆಯೂ ತಮ್ಮ ಪದಗಳ ಬಳಕೆಗಾಗಿ ಸುದ್ದಿಯಲ್ಲಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಾಮೆಂಟ್ ಮಾಡಿ ಕಾಲೆಳೆಯುತ್ತಿದ್ದಾರೆ.
@ShashiTharoor @narendramodi 🧐🧐- Shashi ji made a grammar mistake !!! even if it is fat finger !!! https://t.co/gGq1qjBC4K
— Laniakea (@lineakea007) September 17, 2026
If shashi Tharoor can make a mistake in English grammar then we are also no exception..!
@ShashiTharoor https://t.co/jAwFUNh0fi
— Lalit Lonari (@lalit491923334) September 18, 2026
ನೇಪಾಳ ಪ್ರವಾಹದ ಸಂದರ್ಭದಲ್ಲಿ ನಾಟಕ ಎಂದು ಬರೆದು ಟೀಕೆಗೆ ಗುರಿಯಾಗಿದ್ದರು. ನೇಪಾಳ ದುರಂತದ ಸಮಯದಲ್ಲಿ ಸೋಶಿಯಲ್ ಮೀಡಿಯಾದಲಿ ಡ್ರಾಮಾ ಎಂಬ ಪದವನ್ನು ಬರೆದಿದ್ದರು. ನಂತರ ತರೂರ್ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳನ್ನು ಎದುರಿಸಿದರು. ನಿನ್ನೆ ಕಠ್ಮಂಡುವಿಗೆ ಹೊರಟೆ.. ಪರ್ವತಗಳಲ್ಲಿನ ನಾಟಕ ಮತ್ತು ಅದು ಉಂಟುಮಾಡಿದ ವಿನಾಶದ ಬಗ್ಗೆ ಸರಿಯಾದ ಮಾಹಿತಿ ತಿಳಿದಿಲ್ಲ ಎಂದು ಬರೆದಿದ್ದರು.
ಸಾಮಾಜಿಕ ಮಾಧ್ಯಮ ಬಳಕೆದಾರರು ಡ್ರಾಮಾ ಎಂಬ ಪದದ ಬಳಕೆಯನ್ನು ಪ್ರಶ್ನಿಸಿದ್ದಾರೆ. ಒಬ್ಬ ಬಳಕೆದಾರರು ಅಂತಹ ಪರಿಸ್ಥಿತಿಗೆ ಆ ಪದ ಸೂಕ್ತವೇ ಎಂದು ಕೇಳಿದರು. ನಂತರ ತರೂರ್ ಅವರು ಆ ಪದದ ಬಳಕೆಯನ್ನು ಸಮರ್ಥಿಸಿಕೊಂಡು ಸ್ಪಷ್ಟೀಕರಣ ನೀಡಿದರು. ಅದೇ ರೀತಿ ಜುಲೈ 2025 ರಲ್ಲಿ ಒಂದು ಪೋಸ್ಟ್ ಮಾಡಿದ್ದರು. "ನಾನು ಅನಿವಾರ್ಯ ಪ್ರಶ್ನೆಯನ್ನು ಕೇಳುತ್ತಿದ್ದೆ" ಎಂದು ಬರೆದಿದ್ದಾರೆ. ಆಗಲೂ ಬಳಕೆದಾರರು ವ್ಯಾಕರಣ ದೋಷವನ್ನು ಎತ್ತಿ ತೋರಿಸಿದರು. ಪೋಸ್ಟ್ ಅನ್ನು ತಾವೇ ಡಿಕ್ಟೇಟ್ ಮಾಡಿರುವುದಾಗಿ ತರೂರ್ ಸ್ಪಷ್ಟಪಡಿಸಿದ್ದಾರೆ. ಧ್ವನಿ ಪ್ರತಿಲೇಖನವು "asked an" ಬದಲಿಗೆ "asking" ಎಂದು ತಪ್ಪಾಗಿ ಓದಿದೆ. ಅವರು ತಮ್ಮ ಆತುರದಲ್ಲಿ ಪೋಸ್ಟ್ ಅನ್ನು ಪ್ರೂಫ್ ರೀಡ್ ಮಾಡಲು ವಿಫಲರಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ