
ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಹೌದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಉದ್ಯಮಿ ರಾಬರ್ಟ್ ವಾದ್ರಾ ಪುತ್ರ ರೈಹಾನ್ ವಾದ್ರಾ ( Raihan Vadra ), ತಮ್ಮ ಬಹುಕಾಲದ ಗೆಳತಿ ಅವಿವ ಬೇಗ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ರೈಹಾನ್ ವಾದ್ರಾ ಅವರಿಗೆ 25 ವರ್ಷ. ಈಗ ಅವರು ಮದುವೆ ಆಗುತ್ತಿದ್ದಾರೆ. ಕಳೆದ ಏಳು ವರ್ಷಗಳ ಹಿಂದೆ ಈ ಜೋಡಿ ಪ್ರೀತಿ ಮಾಡುತ್ತಿದ್ದರು. ಅಂದರೆ 18ನೇ ವಯಸ್ಸಿಗೆ ಲವ್‌ನಲ್ಲಿ ಬಿದ್ದಿದ್ದರು. ಅವಿವ ಬೇಗ್ ಜೊತೆ ಇತ್ತೀಚೆಗೆ ಮದುವೆಯಾಗುವ ಪ್ರಸ್ತಾವನೆ ಇಟ್ಟಿದ್ದರು. ಈ ಮದುವೆಗೆ ಎರಡೂ ಕುಟುಂಬಸ್ಥರು ಕೂಡ ಒಪ್ಪಿಗೆ ಸೂಚಿಸಿದ್ದಾರೆ.
ಪ್ರಿಯಾಂಕಾ ಗಾಂಧಿ, ರಾಬರ್ಡ್ ವಾದ್ರಾ ಮದುವೆಯಾಗಿ 28 ವರ್ಷಗಳು ಕಳೆದಿವೆ. ಅಂದಹಾಗೆ ರಾಹುಲ್ ಗಾಂಧಿ ಅವರು 55 ವರ್ಷವಾದರೂ ಮದುವೆ ಆಗಿಲ್ಲ. ಈಗ ಇವರ ಅಳಿಯ ರೈಹಾನ್ ಮದುವೆ ಆಗುತ್ತಿದ್ದಾರೆ. ಅಂದಹಾಗೆ ರೈಹಾನ್-ಅವಿವ ಅವರ ಪ್ರೀತಿಯನ್ನು ಎರಡೂ ಕುಟುಂಬಗಳು ಒಪ್ಪಿವೆ. ಅವಿವ ಬೇಗ್ ಮತ್ತು ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದೆ, ಈಗಾಗಲೇ ಎರಡೂ ಕುಟುಂಬಗಳ ನಡುವೆ ಒಳ್ಳೆಯ ಬಾಂಧವ್ಯವಿದೆ ಎನ್ನಲಾಗಿದೆ.
ರೈಹಾನ್ ವಾದ್ರಾ ಒಬ್ಬ ವಿಷ್ಯುವಲ್ ಆರ್ಟಿಸ್ಟ್ (ದೃಶ್ಯ ಕಲಾವಿದ). ಹತ್ತು ವರ್ಷ ಇದ್ದಾಗಲೇ ಅವರಿಗೆ ಕ್ಯಾಮರಾ ಮೇಲೆ ಆಸಕ್ತಿ ಇತ್ತು. ಕ್ಯಾಮರಾದಲ್ಲಿ ಅವರು ಫೋಟೋಗಳನ್ನು ಸೆರೆ ಹಿಡಿಯುತ್ತಿದ್ದರು. ಮುಂಬೈನ ಕೊಲಾಬಾದಲ್ಲಿರುವ 'ಎಪಿಆರ್ಇ ಆರ್ಟ್ ಹೌಸ್' (APRE Art House) ಎಂಬ ಕಲಾ ಗ್ಯಾಲರಿಯಲ್ಲಿ ರೈಹಾನ್ ಅವರ ಪೋರ್ಟ್‌ಫೋಲಿಯೊ ವನ್ಯಜೀವಿ, ಬೀದಿ, ವಾಣಿಜ್ಯ ಫೋಟೋಗಳಿವೆ.
2021 ರಲ್ಲಿ ನವದೆಹಲಿಯ ಬಿಕಾನೇರ್ ಹೌಸ್‌ನಲ್ಲಿ 'ಡಾರ್ಕ್ ಪರ್ಸೆಪ್ಶನ್' ಹೆಸರಿನ ಏಕವ್ಯಕ್ತಿ ಪ್ರದರ್ಶನವನ್ನು ನೀಡಿದ್ದರು. ಇದು 'ಕಾಲ್ಪನಿಕ ಸ್ವಾತಂತ್ರ್ಯ'ದ ವಿಷಯವನ್ನು ಒಳಗೊಂಡಿತ್ತು. 2017 ರಲ್ಲಿ ಶಾಲಾ ಕ್ರಿಕೆಟ್ ಪಂದ್ಯದಲ್ಲಿ ಅವರ ಕಣ್ಣಿಗೆ ಗಾಯವಾಗಿತ್ತು. ಆಮೇಲೆ ಅನುಭವಿಸಿದ ನೋವನ್ನು ಅವರು ದೃಶ್ಯದ ಮೂಲಕ ಪ್ರದರ್ಶನ ಮಾಡಿದ್ದರು.
“ನನ್ನ ಕಣ್ಣಿಗೆ ಗಾಯ ಆದ್ಮೇಲೆ ನಾನು ಕಪ್ಪು, ಬಿಳಿಪು ಫೋಟೋಗಳನ್ನು ತೆಗೆಯಲು ಶುರು ಮಾಡಿದೆ. ಒಂದು ವಿಷಯವನ್ನು ಒಬ್ಬರು ಹೇಗೆ ಗ್ರಹಿಸುತ್ತಾರೆ? ಬೆಳಕನ್ನು ಹೇಗೆ ಹುಡುಕುತ್ತಾರೆ? ಕತ್ತಲೆಯನ್ನು ಹೇಗೆ ಬಳಸಿಕೊಳ್ತಾರೆ ಎನ್ನೋದನ್ನು ಇವರ ದೃಶ್ಯ ಪ್ರದರ್ಶನ ತಿಳಿಸುವುದು” ಎಂದಿದ್ದರು.
ತಾಯಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಪ್ರೋತ್ಸಾಹ ಕೊಟ್ಟಿದ್ದಕ್ಕೆ ರೈಹಾನ್ ಅವರು ಫೋಟೋಗಳತ್ತ ಹೆಚ್ಚಿನ ಆಸಕ್ತಿ ಹೊಂದಿದ್ದರು. ರೈಹಾನ್ ಅಜ್ಜ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೂಡ ಫೋಟೋಗಳನ್ನು ತುಂಬ ಇಷ್ಟಪಡುತ್ತಿದ್ದರು. ರೈಹಾನ್ ಕೂಡ ತಾತನ ಫೋಟೋಗ್ರಫಿ ಕೆಲಸಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ.
ರೈಹಾನ್ ಭಾವಿ ಪತ್ನಿ ಅವಿವ ಬೇಗ್ ಕೂಡ ಫೋಟೋಗ್ರಾಫರ್, ಪ್ರೊಡ್ಯೂಸರ್ ಅಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ