60ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಂಗ್ರೆಸ್‌ ಹಿರಿಯ ನಾಯಕ!

First Published | Mar 9, 2020, 2:38 PM IST

ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ತಮ್ಮ 60ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಅಚ್ಚರಿ ಮೂಡಿಸಿದ್ದಾರೆ. ಇವರ ವಿವಾಹಕ್ಕೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಸಾಕ್ಷಿಯಾದರು. ಯಾರು ಆ ನಾಯಕ..?

ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅವರು 60ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
undefined
ನವದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ನಡೆದ ವಿವಾಹಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್, ಕರ್ನಾಟಕದ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಾಕ್ಷಿಯಾಗಿ, ಶುಭ ಹಾರೈಸಿದ್ದಾರೆ.
undefined

Latest Videos


ತಮ್ಮ ಬಹುಕಾಲದ ಗೆಳತಿ ರವೀನಾ ಖುರಾನಾ ಅವರನ್ನ ಮುಕುಲ್  ವಾಸ್ನಿಕ್ ಭಾನುವಾರ ವರಿಸಿದ್ದಾರೆ.
undefined
ದಲಿತ ರಾಜಕಾರಣಿಯಾಗಿರು ಮುಕುಲ್ ವಾಸ್ನಿಕ್ 2009ರಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
undefined
ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವಾ ಮುಕುಲ್‌ ವಾಸ್ನಿಕ್‌ ಮತ್ತು ರವೀನಾ ಖುರಾನಾ ಅವರಿಗೆ ಅಭಿನಂದನೆಗಳು. ಮುಂದಿನ ನಿಮ್ಮ ಬದುಕು ಸಂತೋಷದಿಂದ ಕೂಡಿರಲಿ ಎಂದು ಅಶೋಕ್ ಗೆಹ್ಲೋಟ್ ಟ್ವಿಟ್ಟರ್‌ನಲ್ಲಿ ಶುಭಾಶಯ ಕೋರಿದ್ದಾರೆ.
undefined
1988-90 ರಲ್ಲೇ ಭಾರತೀಯ ಯೂತ್ ಕಾಂಗ್ರೆಸ್ ಸೇರಿದ್ದ ಮುಕುಲ್, ಕಾಂಗ್ರೆಸ್ ನಲ್ಲಿ ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
undefined
2009 ರಲ್ಲಿ ಮಹಾರಾಷ್ಟ್ರದ ರಾಮ್ತೇಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುಕುಲ್ ಬಾಲಕೃಷ್ಣ ವಾಸ್ನಿಕ್ ಕೇಂದ್ರ ಸಚಿವನಾಗಿಯೂ ಗುರುತಿಸಿಕೊಂಡಿದ್ದರು.
undefined
ಪ್ರಸ್ತುತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಮುಕುಲ್ ಬಾಲಕೃಷ್ಣ ವಾಸ್ನಿಕ್
undefined
ಕಾಂಗ್ರೆಸ್ ನಲ್ಲಿ ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದ ಮಹಾರಾಷ್ಟ್ರದ ಬಾಲಕೃಷ್ಣ ರಾಮಚಂದ್ರ ವಾಸ್ನಿಕ್ ರವರ ಪುತ್ರ ಈ ಮುಕುಲ್ ಬಾಲಕೃಷ್ಣ ವಾಸ್ನಿಕ್.
undefined
click me!