ಸಂಸತ್ತಿನಲ್ಲೂ ಕೊರೋನಾ ಎಫೆಕ್ಟ್, ಮಾಸ್ಕ್ ಧರಿಸಿಯೇ ಅಬ್ಬರಿಸಿದ ಸಂಸದೆ!

First Published Mar 5, 2020, 5:06 PM IST

ಚೀನಾದಿಂದ ಹಬ್ಬಿದ ಕೊರೋನಾ ವೈರಸ್ ಸದ್ಯ ಜಗತ್ತಿನ 70ಕ್ಕೂ ಅಧಿಕ ದೇಶಗಳಿಗೆ ವ್ಯಾಪಿಸಿದೆ. ಸುಮಾರು 95 ಸಾವಿರ ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗೂ 3283 ಮಂದಿ ಈ ಮಾರಕ ವೈರಸ್ ಗೆ ಬಲಿಯಾಗಿದ್ದಾರೆ. ಕೇವಲ ಚೀನಾದಲ್ಲೇ 3 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇನ್ನು ಇರಾನ್ ನಲ್ಲಿ ಈವರೆಗೂ 92 ಮಂದಿ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ. ಸದ್ಯ ಭಾರತದಲ್ಲೂ ಈ ಮಾರಕ ವೈರಸ್ ಹರಡಲಾರಂಭಿಸಿದ್ದು, ಈವರೆಗೂ 29 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ. ಗುರುವಾರ ನಡೆದ ಸಂಸತ್ ಅಧಿವೇಶನದಲ್ಲೂ ಕೊರೋನಾ ವೈರಸ್ ಎಫೆಕ್ಟ್ ಕಂಡು ಬಂದಿದ್ದು, ಅನೇಕ ಮಂದಿ ಸಂಸದರು ಮಾಸ್ಕ್ ಧರಿಸಿಕೊಂಡೇ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ.

ಅಮರಾವತಿಯ ಪಕ್ಷೇತರ ಸಂಸದೆ ನವನೀತ್ ರಾಣಾ ಕೌರ್ ಕೂಡಾ ಸಂಸತ್ತಿಗೆ ಮಾಸ್ಕ್ ಧರಿಸಿ ಬಂದಿದ್ದರು. ಪ್ರಶ್ನೋತ್ತರ ಅವಧಿಯಲ್ಲಿ ಅವರು ಹಲವಾರು ಪ್ರಶ್ನೆಗಳನ್ನೂ ಕೇಳಿದ್ದಾರೆ
undefined
ಅವರನ್ನು ಹೊರತುಪಡಿಸಿ ಲಡಾಖ್ ನ ಬಿಜೆಪಿ ಸಂಸದ ಜಾಮ್ಯಾಂಗ್ ಸೆರಿಂಗ್ ನಾಮ್ ಗ್ಯಾಲ್ ಕೂಡಾ ಮಾಸ್ಕ್ ಧರಿಸಿ ಅಧಿವೇಶನಕ್ಕೆ ಆಗಮಿಸಿದ್ದರು.
undefined
ನವನೀತ್ ಈ ಹಿಂದೆ ಬುಧವಾರದಂದೂ ಮಾಸ್ಕ್ ಧರಿಸಿಯೇ ಸಂಸತ್ತಿಗೆ ಆಗಮಿಸಿದ್ದರು.
undefined
ನವನೀತ್ ಸಂಸದೆಯಾಗುವುದಕ್ಕೂ ಮುನ್ನ ಮಾಡೆಲ್ ಆಗಿಯೂ ಕೆಲಸ ಮಾಡಿದ್ದಾರೆ. ಪಂಜಾಬಿ ಸಿನಿ ಕ್ಷೇತ್ರದಲ್ಲಿ ಅವರು ತಮ್ಮ ವೃತ್ತಿ ಬದುಕು ಕಟ್ಟಿಕೊಳ್ಳಲು ಬಯಸಿದ್ದರು.
undefined
ಆದರೆ 2011ರಲ್ಲಿ ಶಾಸಕ ರವಿ ರಾಣಾರೊಂದಿಗೆ ನವನೀತ್ ಅವರ ವಿವಾಹವಾಯ್ತು. ಬಳಿಕ ಅವರು ರಾಜಕೀಯಕ್ಕೆ ಎಂಟ್ರಿ ನೀಡಿದರು.
undefined
ದಕ್ಕೂ ಮುನ್ನ ವರು 2014ರಲ್ಲಿ NCP ಪಕ್ಷದಿಂದ ಸ್ಪರ್ಧಿಸಿದ್ದರು. ದುರಾದೃಷ್ಟವಶಾತ್ ಸೋಲನುಭವಿಸಿದರು. ಬಳಿಕ 2019ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರ ಭ್ಯರ್ಥುಇಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ.
undefined
ಮೊದಲ ಬಾರಿ ನವನೀತ್ ಸಂಸತ್ತು ಪ್ರವೇಶಿಸಿದ್ದಾಗ ಅವರು ಸಂಸತ್ತಿನ ಮೆಟ್ಟಿಲಿಗೆ ನಮಸ್ಕರಿಸಿ ಪ್ರವೇಶಿಸಿದ್ದರು.
undefined
ನವನೀತ್ ಓರ್ವ ಸಕ್ರಿಯ ಸಂಸದೆ. ನಿರಂತರವಾಗಿ ಸಂಸತ್ತಿನಲ್ಲಿ ಎದ್ದು ಪ್ರಶ್ನಿಸುತ್ತಿರುತ್ತಾರೆ. ಇದಕ್ಕೂ ಮುನ್ನ ಆರ್ಟಿಕಲ್ 370 ರದ್ದುಗೊಳಿಸಿದ್ದಾಗ ಅವರು ಬಿಜೆಪಿಯನ್ನು ಸಮರ್ಥಿಸಿದ್ದರು.
undefined
click me!