
ನವದೆಹಲಿ (ಜುಲೈ 9): ಜಪಾನ್ (Japan) ಪ್ರಧಾನಿ ಶಿಂಜೋ (shinzo abe) ಅಬೆ ಹತ್ಯೆಯನ್ನು ಕೇಂದ್ರ ಸರ್ಕಾರದ ಅಗ್ನಿಪಥ್(agneepath scheme)ಸೇನಾ ನೇಮಕಾತಿ ಯೋಜನೆಗೆ ಲಿಂಕ್ ಮಾಡುವ ಮೂಲಕ ಕಾಂಗ್ರೆಸ್ ನಾಯಕ ಸುರೇಂದ್ರ ರಜಪೂತ್ (surendra rajput) ವಿವಾದ ಎಬ್ಬಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ವಕ್ತಾರನಾಗಿರುವ ಸುರೇಂದ್ರ ರಜಪೂತ್, ಶಿಂಜೋ ಅಬೆ ಅವರನ್ನು ಹತ್ಯೆ ಮಾಡಿದ ಘಟನೆಯ ಕುರಿತಾಗಿ ಟ್ವೀಟ್ ಮಾಡಿದ್ದಾರೆ. ಶೂಟರ್ ಆಗಿರುವ ತೆತ್ಸುಯಾ ಯಮಗಾಮಿ ಜಪಾನ್‌ನ ಸ್ವರಕ್ಷಣಾ (ಎಸ್‌ಡಿಎಫ್) ಪಡೆಯಲ್ಲಿ ಸೇವೆ ಸಲ್ಲಿಸಿದವ. ಈ ಎಸ್‌ಡಿಎಫ್ ಪಡೆಗಳಿಗೆ ಯಾವುದೇ ಪಿಂಚಣಿಯನ್ನು ಜಪಾನ್ ಸರ್ಕಾರ ನೀಡುವುದಿಲ್ಲ. "ಶಿಂಜೋ ಅಬೆಯನ್ನು ಶೂಟ್ ಮಾಡಿರುವ ತೆತ್ಸುಯಾ ಯಮಗಾಮಿ ಜಪಾನ್‌ನ ಎಸ್‌ಡಿಎಫ್‌ನಲ್ಲಿ ಕೆಲಸ ಮಾಡಿದವ. ಈ ಸೇನೆಗೆ ಜಪಾನ್‌ನಲ್ಲಿ ಪಿಂಚಣಿ ವ್ಯವಸ್ಥೆಯಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.
ಇದರ ಬೆನ್ನಲ್ಲಿಯೇ ಬಿಜೆಪಿಯ ನಾಯಕ ಶೆಹಜಾದ್ ಪೂನಾವಾಲಾ (shehzad poonawalla), ಶಿಂಜೋ ಅಬೆ ಹತ್ಯೆಯನ್ನು ಅಗ್ನಿಪಥ್ ಯೋಜನೆಗೆ ಲಿಂಕ್ ಮಾಡಿದ ಸುರೇಂದ್ರ ರಜಪೂತ್ ವಿರುದ್ಧ ಕಿಡಿಕಾರಿದ್ದಾರೆ. ಒಂದು ದುರಂತ ಸಾವಿನ ಸಮಯದಲ್ಲಿ ಇಂಥ ಹೀನ ರಾಜಕೀಯ ಮಾಡಲಾಗುತ್ತಿದೆ ಎಂದಿದ್ದಾರೆ. ಈ ಕುರಿತಾಗಿ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಪೂನಾವಾಲಾ, "ಕಾಂಗ್ರೆಸ್ ಪಕ್ಷದ ಅಧಿಕೃತ ವಕ್ತಾರ ಶಿಂಜೋ ಅಬೆಯ ಸಾವಿನಲ್ಲೂ ಕೆಟ್ಟ ರಾಜಕಾರಣವನ್ನು ಮಾಡುತ್ತಿದ್ದಾರೆ' ಎಂದು ಬರೆದಿದ್ದಾರೆ.
"ನೀವು ಮತ್ತು ಕಾಂಗ್ರೆಸ್ ಪಕ್ಷವವು, ನೈತಿಕತೆ ಮತ್ತು ಸಭ್ಯತೆಯ ಎಲ್ಲಾ ಎಲ್ಲೆಯನ್ನೂ ಮೀರಿದ್ದೀರಿ. ಪ್ರಧಾನಿಯ ಸಾವು, ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್, ವಿದೇಶದಲ್ಲಿ ಭಾರತಕ್ಕೆ ಅವಮಾನ ಮಾಡವುದು, ಬಿಪಿನ್ ರಾವತ್‌ರಂಥ ವ್ಯಕ್ತಿಯನ್ನು ಬೀದಿ ರೌಡಿ ಎಂದು ಹೇಳುವುದು ನಿಮ್ಮ ಸಂಸ್ಕೃತಿ. ಆದರೆ, ಶಿಂಜೋ ಅಬೆಯಂಥ ಜಾಗತಿಕ ನಾಯಕನನ್ನು ನಿಮ್ಮ ರಾಜಕೀಯದಿಂದ ದೂರವಿಡಿ' ಎಂದು ಪೂನಾವಾಲಾ ಬರೆದಿದ್ದಾರೆ. ನೀವು ಬರೀ ಭಾರತದ ಬಗ್ಗೆ ಯೋಚನೆ ಮಾಡಿದರೆ ಸಾಕು ಎಂದು ಇನ್ನೊಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಶಿಂಜೋ ಅಬೆಯ ಹತ್ಯೆ ಮಾಡಿದ ತೆತ್ಸುಯಾ ಯಮಗಾಮಿ ಯಾರು?
ಮೂಲಗಳ ಪ್ರಕಾರ, 41 ವರ್ಷದ ತೆತ್ಸುಯಾ ಯಮಗಾಮಿ (Tetsuya Yamagami), ಜಪಾನ್‌ನ ನೌಕಾ ಸೇನೆಯ ಸ್ವರಕ್ಷಣಾ ಪಡೆಯಲ್ಲಿ(SDF) 2000 ಇಸವಿಯಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನಾರಾದಲ್ಲಿ ಶುಕ್ರವಾರ ಅಬೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರ ಹಿಂದಿನಿಂದ ಬಂದು ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಸ್ಥಳದಲ್ಲಿಯೇ ಈತನ್ನು ಬಂಧಿಸಿ, ಆತನ ಬಳಿಯಿದ್ದ ಶಾಟ್‌ಗನ್ ಅನ್ನುವಶಪಡಿಸಿಕೊಳ್ಳಲಾಗಿದೆ. ಶಿಂಜೋ ಅಬೆಯ ಕೆಲಸಗಳಿಂದ ತೃಪ್ತನಾಗದ ಯಮಗಾಮಿ, ಆ ಕಾರಣಕ್ಕಾಗಿ ಅಬೆಯನ್ನು ಶೂಟ್ ಮಾಡಿದ್ದಾಗಿ ಹೇಳಿದ್ದಾನೆ. ದೇಸೀ ಗನ್‌ನ ಮೂಲಕ ಮಾಜಿ ಪ್ರಧಾನಿಯ ಮೇಲೆ ಗುಂಡು ಹಾರಿಸಿದ್ದಾನೆ. ಅದಲ್ಲದೆ, ಯಮಗಾಮಿಯ ಮನೆಯಲ್ಲಿ ಸ್ಫೋಟಕ ವಸ್ತುಗಳೂ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Shinzo Abe Death; ಪ್ರೀತಿಯ ಗೆಳೆಯನನ್ನು ಕಳೆದುಕೊಂಡಿದ್ದೇನೆ, ಮೋದಿ ಭಾವುಕ ಲೇಖನ
ಪ್ರತ್ಯಕ್ಷದರ್ಶಿಯ ಹೇಳಿಕೆಯ ಪ್ರಕಾರ, ಯಮಗಾಮಿ ಸ್ಥಳೀಯ ನಾರಾದ ನಿವಾಸಿಯಾಗಿದ್ದು, ಶಿಂಜೋ ಅಬೆಯ ಮೇಲೆ ಶೂಟ್ ಮಾಡಿದ ಬಳಿಕ ತಪ್ಪಿಸಿಕೊಳ್ಳಲು ಯತ್ನ ನಡೆಸಲಿಲ್ಲ. ಕೇವಲ ತಮ್ಮ ಬಂದೂಕನ್ನು ಕೆಳಗಿರಿಸಿ ಸ್ಥಳದಲ್ಲಿಯೇ ನಿಂತುಕೊಂಡಿದ್ದು, ಬಳಿಕ ಭದ್ರತಾ ಸಿಬ್ಬಂದಿಗಳು ಈತನ ಬಳಿ ಬಂದು ಬಂಧನ ಮಾಡಿದ್ದಾರೆ.
ಇದನ್ನೂ ಓದಿ: ಶಿಂಜೋ ಅಬೆ to ಇಂದಿರಾ ಗಾಂಧಿ, ಗುಂಡೇಟಿಗೆ ಬಲಿಯಾದ ಜನಪ್ರಿಯ ನಾಯಕರು!
ಶಿಂಜೋ ಅಬೆ ಮೇಲೆ ಗುಂಡಿನ ದಾಳಿ ನಡೆದ ಬೆನ್ನಲ್ಲಿಯೇ ಅವರನ್ನು ಮೆಡಿಕಲ್ ಹೆಲಿಕಾಪ್ಟರ್ ಬಳಸಿ, ಏರ್‌ಲಿಫ್ಟ್ ಮಾಡಲಾಗಿತ್ತು. ವೈದ್ಯರ ಅತೀವ ಪ್ರಯತ್ನದ ನಡುವೆಯೂ ಸಂಜೆಯ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು ಎಂದು ಜಪಾನ್ ಸರ್ಕಾರ ತಿಳಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ