
ನವದೆಹಲಿ (ಅ.05) ಕಾಂಗ್ರೆಸ್ ಹಾಗೂ ಎನ್‌ಡಿಎ ನಡುವೆ ಭಾರಿ ವಾಕ್ಸಮರ ಶುರುವಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭಾಷಣದ ವಿಡಿಯೋ ಒಂದನ್ನು ಕಾಂಗ್ರೆಸ್ ರಿಪೋಸ್ಟ್ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ರಾಂಗ್ ಪೋಸ್ಟ್ ಎಂದು ನಿರ್ಮಾಲಾ ಸೀತಾರಾಮನ್ ಹಾಗೂ ಆಂಧ್ರ ಪ್ರದೇಶದ ಎನ್‌ಡಿಎ ಮೈತ್ರಿ ಸರ್ಕಾರ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದೆ. ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ನಡೆದ ಕಾರ್ಯಕ್ರಮದ ವಿಡಿಯೋ ತುಣುಕನ್ನು ಕಾಂಗ್ರೆಸ್ ನಾಯಕ ಜಯರಾಮ್ ರಮೇಶ್ ಹಂಚಿಕೊಂಡಿದ್ದಾರೆ. ಇದೇ ಕೋಲಾಹಲಕ್ಕೆ ಕಾರಣವಾಗಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿರ್ಮಲಾ ಸೀತಾರಾಮನ್ ಭಾಷಣದ ನಡುವೆ ನಡೆದ ಘಟನೆಯೆ ವಿಡಿಯೋ ಒಂದನ್ನು ಸುಲೆಮಾನ್ ಖಾನ್ ಅನ್ನೋ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಬಳಿಕ ಈ ವಿಡಿಯೋ ಕುರಿತು ಕೆಲ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ನಿರ್ಮಾಲಾ ಸೀತಾಮಾನ್ ಭಾಷಣದ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರು ಉದ್ಯೋಗದ ಬೇಡಿಕೆ ಇಟ್ಟಿದ್ದಾರೆ. ಸಾರ್ವಜನಿಕರ ಬೇಡಿಕೆ ತೀವ್ರಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಧ್ಯಪ್ರವೇಶಿಸಿ ಸಾರ್ವಜನಿಕರ ಗದ್ದಲವನ್ನು ಸೈಲೆಂಟ್ ಮಾಡಿದ್ದಾರೆ. ನಿರ್ಮಾಲಾ ಸೀತಾರಾಮನ್‌ಗೆ ಯುವ ಸಮೂಹದ ಉದ್ಯೋಗ ಬೇಡಿಕೆ ಬಿಸಿ ತಟ್ಟಿದೆ ಎಂದು ಬರೆದುಕೊಳ್ಳಲಾಗಿತ್ತು.
ಸುಲೆಮಾನ್ ಖಾನ್ ಹಂಚಿಕೊಂಡ ವಿಡಿಯೋವನ್ನು ಕಾಂಗ್ರೆಸ್ ನಾಯಕ ಜಯರಾಮ್ ರಮೇಶ್ ಹಂಚಿಕೊಂಡು ನಿರ್ಮಾಲಾ ಸೀತಾರಾಮನ್ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ದೇಶದ ಪರಿಸ್ಥಿತಿ, ಉದ್ಯೋಗ ಸಮಸ್ಯೆಗಳ ಕುರಿತು ಜಯರಾಮ್ ರಮೇಶ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಜಯರಾಮ್ ರಮೇಶ್ ಹಂಚಿಕೊಂಡ ಈ ಪೋಸ್ಟ್‌ಗೆ ಟಿಡಿಪಿ ನೇತೃತ್ವದ ಆಂಧ್ರ ಪ್ರದೇಶದ ಎನ್‌ಡಿಎ ಸರ್ಕಾರದ ನಾಯಕರು ತಿರುಗೇಟು ನೀಡಿದ್ದಾರೆ. ಇದೀಗ ಸ್ವತಃ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಹಾಗೂ ನಾಯಕ ಜಯರಾಮ್ ರಮೇಶ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ತಪ್ಪು ಪೋಸ್ಟ್ ಮಾಡಿ ಜನರನ್ನು ದಾರಿ ತಪ್ಪಿಸು ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ನಿರ್ಮಾಲಾ ಸೀತಾರಾಮನ್ ಭಾಷಣದ ವೇಳೆ ಸೇರಿದ್ದ ಜನರು ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಅವರ ಜೊತೆ ಸಂವಾದ ನಡೆಸಲು ಬಯಸಿ ಗದ್ದಲ ಆರಂಭಿಸಿದ್ದರು. ಹೀಗಾಗಿ ನಿರ್ಮಲಾ ಸೀತಾರಾಮ್ ಮನವಿ ಮಾಡಿದರೂ ಕಾರ್ಯಕ್ರಮದಲ್ಲಿದ್ದ ಜನರು ನೆಚ್ಚಿನ ಸಿಎಂ ನಾಯ್ಡು ಹಾಗೂ ಪವನ್ ಕಲ್ಯಾಣ್ ಮಾತುಗಳನ್ನು ಕೇಳಲು ಬಯಸಿದ್ದರು. ಹೀಗಾಗಿ ಮುಖ್ಯಮಂತ್ರಿ ಮಧ್ಯಪ್ರವೇಶಿಸಿ, ಸದ್ಯ ಕೇಂದ್ರ ಸಚಿವರ ಸಂದೇಶ ಅತ್ಯಂತ ಮುಖ್ಯವಾಗಿದೆ. ಈ ಕಾರ್ಯಕ್ರಮದ ಬಳಿಕ ನಾನು ಹಾಗೂ ಪವನ್ ಕಲ್ಯಾಣ್ ಇಬ್ಬರು ನಿಮ್ಮೊಂದಿಗೆ ಮಾತನಾಡುತ್ತೇವೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಹೀಗಾಗಿ ದಯವಿಟ್ಟು ಕೇಂದ್ರ ಸಚಿವರ ಮಾತುಗಳನ್ನು ಕೇಳಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು. ಈ ವಿಡಿಯೋವನ್ನು ಕೇವಲ 30 ಸೆಕೆಂಡ್ ಪೋಸ್ಟ್ ಮಾಡಿ ತಿರುಚಲಾಗಿದೆ ಎಂದು ಟಿಡಿಪಿ ನಾಯಕರು ಅಸಲಿ ಮಾಹಿತಿ ನೀಡಿ ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ