ಮೀರಾ ಬಾಯಿಯಾಗಿ ಮಸೀದಿ ಮುಂದೆ ಯುವತಿಯಿಂದ ಭಜನೆ; ಮುಸ್ಲಿಮರು ಹೇಳಿದ್ದೇನು? ವಿಡಿಯೋ

Published : Oct 05, 2026, 11:18 AM IST
Video

ಸಾರಾಂಶ

ಯುವತಿಯೊಬ್ಬಳು ಮೀರಾಬಾಯಿ ವೇಷ ಧರಿಸಿ ಮಸೀದಿ ಮುಂದೆ ಕೃಷ್ಣ ಭಜನೆ ಮಾಡುತ್ತಾ ಸಾಮಾಜಿಕ ಪ್ರಯೋಗ ಮಾಡಿದ್ದಾಳೆ. 13 ಮಿಲಿಯನ್ ವೀಕ್ಷಣೆ ಪಡೆದಿರುವ ಈ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಯುವತಿಗೆ ಸವಾಲು ಸಹ ಹಾಕಿದ್ದಾರೆ.

ನವದೆಹಲಿ: ಯಾರು ಮತ್ತು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕಾದ್ರೆ ಅವರ ಜೊತೆ ಒಡನಾಟ ಅಥವಾ ವ್ಯವಹಾರಿಸಬೇಕಾಗುತ್ತದೆ. ಅದೇ ರೀತಿ ಮುಸ್ಲಿಮರು ಯಾವ ರೀತಿ ಎಂದು ಕಂಡುಕೊಳ್ಳಲು ಯುವತಿಯೊಬ್ಬಳು, ಮೀರಾಬಾಯಿ ವೇಷ ಧರಿಸಿಕೊಂಡು ಮಸೀದಿ ಮುಂದಿನ ರಸ್ತೆಯಲ್ಲಿ ಶ್ರೀಕೃಷ್ಣನ ಭಜನೆ ಮಾಡಿದ್ದಾಳೆ. ಈ ಎಲ್ಲಾ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದುಕೊಂಡು, ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಳ್ಳುವ ತಮ್ಮ ಅನುಭವಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾಳೆ.

13 ಮಿಲಿಯನ್ ಪಡೆದಿರುವ ವೈರಲ್ ವಿಡಿಯೋ

vishalvishnu_priye ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಜನರು ನಮಾಜ್‌ನಿಂದ ಹೊರಗೆ ಬರುವ ಸರಿಯಾದ ಸಮಯಕ್ಕೆ ಮಸೀದಿ ಮುಂದೆ ತೆರಳಿದ್ದಾಳೆ. ಕೇಸರಿ ವಸ್ತ್ರ ಧರಿಸಿ, ತಂಬೂರಿ ಜೊತೆ ಬರಿಗಾಲಿನಲ್ಲಿ ಮಸೀದಿ ಮುಂದೆ ಓಡಾಟ ನಡೆಸಿದ್ದಾಳೆ. ಈ ವೇಳೆ ಮುಸ್ಲಿಮರು ತಮ್ಮೊಂದಿಗೆ ಹೇಗೆ ವರ್ತಿಸಿದ್ರು ಎಂದು ವಿವರವಾಗಿ ವಿಡಿಯೋ ಸಹಿತ ವಿವರಿಸಿದ್ದಾಳೆ. ವೈರಲ್ ವಿಡಿಯೋಗೆ 13 ಮಿಲಿಯನ್‌ಗೂ ಅಧಿಕ ವ್ಯೂವ್ ಬಂದಿವೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಕ್ಯಾಮೆರಾ ಇಲ್ಲದಿದ್ರೆ ನನಗೆ ಮುಸ್ಲಿಮರ ಅಸಲಿಯತ್ತೂ ನಿಜಕ್ಕೂ ಗೊತ್ತಿರಲಿಲ್ಲ ಎಂಬ ಹಿನ್ನೆಲೆ ಧ್ವನಿಯೊಂದಿಗೆ ವಿಡಿಯೋ ಆರಂಭವಾಗುತ್ತದೆ. ಯುವತಿ ಸನ್ಯಾಸಿಯಂತೆ ಮಸೀದಿ ರಸ್ತೆಯಲ್ಲಿ ಭಜನೆ ಹೇಳುತ್ತಾ ಓಡಾಡುತ್ತಿರುತ್ತಾಳೆ. ಆದ್ರೆ ಅಲ್ಲಿದ್ದ ಯಾರೂ ಸಹ ಯುವತಿಗಾಗಲಿ ಅಥವಾ ಆಕೆಯ ಭಜನೆಗಳಿಗೆ ವಿರೋಧ ವ್ಯಕ್ತಪಡಿಸಿಲ್ಲ. ಅಂತೆಯೇ ಯಾವ ವ್ಯಕ್ತಿಯೂ ಯುವತಿಯೊಂದಿಗೆ ಮಾತನಾಡಲು ಸಹ ಮುಂದಾಗಿಲ್ಲ.

ಯುವತಿ ಇಲ್ಲಿಗೆ ಸುಮ್ಮನಾಗಲ್ಲ. ತನಗೆ ಹಸಿವು ಆಗಿದ್ದಾಗ ಏನಾದ್ರೂ ಕೊಡಿಸುವಂತೆ ಅಲ್ಲಿದ್ದ ಜನರ ಬಳಿ ಮನವಿ ಮಾಡಿಕೊಳ್ಳುತ್ತಾಳೆ. ಆರಂಭದಲ್ಲಿ ಇಬ್ಬರು ಯುವತಿಗೆ ಧನ ಸಹಾಯ ಮಾಡಲ್ಲ. ಮುಂದೆ ಸೈಕಲ್‌ ಜೊತೆ ಬಂದ ಮುಸ್ಲಿಂ ವ್ಯಕ್ತಿ, ಹಣ ಬೇಕಾ ಎಂದು ಕೇಳುತ್ತಾನೆ. ಆದ್ರೆ ಯುವತಿ ಹಣ ಬೇಡ, ತಿನ್ನಲು ಏನಾದ್ರು ಕೊಡಿಸುವಂತೆ ಮನವಿ ಮಾಡಿಕೊಳ್ಳುತ್ತಾಳೆ. ಆದ್ರೆ 50 ರೂಪಾಯಿ ನೋಟ್ ನೀಡಿ, ನೀನೇ ಆಹಾರ ಖರೀದಿಸಿಕೊಳ್ಳುವಂತೆ ಹೇಳಿ ಅಲ್ಲಿಂದ ಹೊರಡಲು ಮುಂದಾಗುತ್ತಾರೆ.

ಅಷ್ಟರಲ್ಲಿಯೇ ಯುವತಿ ಹಣ ಹಿಂದಿರುಗಿ ನೀಡಲು ಮುಂದಾಗುತ್ತಾಳೆ. ಆನಂತರ ಅಲ್ಲಿ ಕ್ಯಾಮೆರಾ ಇದೆ ಎಂದು ತೋರಿಸುತ್ತಾಳೆ. ನಾನು ಕೇವಲ social experiment ಮಾಡುತ್ತಿದ್ದೇನೆ, ಹಣ ಬೇಡ ಎಂದು ಹೇಳುತ್ತಾಳೆ. ಆದ್ರೆ ಆ ವ್ಯಕ್ತಿ, ಹಣ ನಿಮಗೆ ಕೊಟ್ಟಾಯ್ತು ನನಗೆ ಬೇಡ ಎಂದು ಹೇಳುತ್ತಾರೆ. ನಂತರ ಬೇಕರಿ ಬಳಿಗೆ ತೆರಳಿದಾಗ ಅಲ್ಲಿಯ ವ್ಯಕ್ತಿ ಉಚಿತವಾಗಿ ತಿಂಡಿಯನ್ನು ನೀಡುತ್ತಾರೆ.

ಯುವತಿಗೆ ನೆಟ್ಟಿಗರು ಸವಾಲ್

ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದುವೇ ನಮ್ಮ ಭಾರತ. ಪ್ರೀತಿ ಚಿರಾಯುವಾಗಲಿ. ಭಾರತ ಸಮೃದ್ಧಿಯಾಗಲಿ. ಒಳ್ಳೆಯದಾಗಲಿ ಸೋದರಿ. social experiment ಚೆನ್ನಾಗಿದೆ ಎಂದಿದ್ದಾರೆ. ಹಾಗೆಯೇ ಕೆಲವರು ಬುರ್ಖಾ ಧರಿಸಿ ಕೈಯಲ್ಲಿ ಖುರಾನ್ ಹಿಡಿದುಕೊಂಡು ದೇವಸ್ಥಾನದ ಬಳಿ ಓಡಾಡಿ ವಿಡಿಯೋ ಮಾಡುವಂತೆ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

6 ಬಾರಿ UPSC ಕೈಕೊಟ್ಟರೂ ಕುಗ್ಗಲಿಲ್ಲ; 30ರ ವಯಸ್ಸಿನಲ್ಲಿ ಹೊಸ ಆರಂಭ, 900 ಮಕ್ಕಳ ಬದುಕಿಗೆ ಬೆಳಕಾದ ಯುವತಿ!
"ಮನೆಯಿಂದ ಓಡಿಸಿದ ತಂದೆ: 'ಮನೆ ಕೆಲಸಕ್ಕಾದರೂ ಇಟ್ಟುಕೊಳ್ಳಿ' ಎಂದು ನೆರವು ಬೇಡಿದ ಐಐಟಿ ಪದವೀಧರೆ!"