ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶ ಒಡೆಯುವ ಚಿಂತನೆ; ಮೋದಿ ವಾಗ್ದಾಳಿ!

By Suvarna NewsFirst Published Apr 6, 2024, 10:13 PM IST
Highlights

ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ಸ್ವಾತಂತ್ರ ಕಾಲದಲ್ಲಿ ಮುಸ್ಲಿಂ ಲೀಗ್‌ಗೆ ಇದ್ದ ಆಲೋಚನೆಗಳಾಗಿದೆ. ಇದು ಪ್ರಣಾಳಿಕೆಯಲ್ಲ ದೇಶ ಒಡೆಯುವ ಆಲೋಚನೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಗ್ಯಾರೆಂಟಿ ಮಾಡಿದ ಮೋಡಿ ಇದೀಗ ಲೋಕಸಭೆಯಲ್ಲೂ ಕಮಾಲ್ ಮಾಡಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದ ಕಾಂಗ್ರೆಸ್‌ಗೆ ಭರವಸೆಗಳ ತಲೆನೋವು ಎದುರಾಗಿದೆ 
 

ನಿನ್ನೆಯಷ್ಟೇ ಲೋಕಸಭಾ ಚುನಾವಣೆಗೆ 25 ಗ್ಯಾರಂಟಿಗಳ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಕಾಂಗ್ರೆಸ್ಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.. ಕಾಂಗ್ರೆಸ್ ಪ್ರಣಾಳಿಕೆಗಳ ತುಂಬಾ ದೇಶ ಒಡೆಯುವ ಚಿಂತನೆಗಳೇ ತುಂಬಿದ್ದು, ಸ್ವಾತಂತ್ರ್ಯದ ಸಮಯದಲ್ಲಿ ಮುಸ್ಲಿಂ ಲೀಗ್ ಈ ರೀತಿ ಆಲೋಚನೆ ಹೊಂದಿತ್ತು.. ಈಗ ಕಾಂಗ್ರೆಸ್ ದೇಶ ಒಡೆಯುವ ಆಲೋಚನೆಗಳನ್ನ ಭಾರತದ ಮೇಲೆ ಹೇರುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.. 

25 ಗ್ಯಾರಂಟಿಗಳ ಸಮೇತ ಬೃಹತ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಕರ್ನಾಟಕ ವಿಧಾನಸಭೆ ರೀತಿ ಲೋಕಸಭೆಯಲ್ಲೂ ಕಮಾಲ್ ಮಾಡಲಿದೆ ಅನ್ನೋ ವಿಶ್ವಾಸದಲ್ಲಿದೆ. ಆದರೆ ಕಾಂಗ್ರೆಸ್‌ ಪ್ರಣಾಳಿಕೆಗಳ ತುಂಬಾ ದೇಶ ಒಡೆಯುವ ಆಲೋಚನೆಗಳೇ ತುಂಬಿದೆ ಎಂದು ಪ್ರಧಾನಿ ಮೋದಿ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ. 

ಪ್ರಣಾಳಿಕೆಯಲ್ಲಿ ಥಾಯ್ಲೆಂಡ್-ನ್ಯೂಯಾರ್ಕ್ ಫೋಟೋ ಬಳಕೆ,ಕಾಂಗ್ರೆಸ್ ವಿದೇಶಿ ಪ್ರೀತಿ ಪ್ರಶ್ನಿಸಿದ ಬಿಜೆಪಿ!

ರಾಜಸ್ಥಾನದ ಅಜ್ಮೀರ್ನಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತಾಡಿದ ಮೋದಿ.. ಕಾಂಗ್ರೆಸ್ ನಾಯಕರನ್ನ ತರಾಟೆಗೆ ತೆಗೆದುಕೊಂಡ್ರು.. ಕಾಂಗ್ರೆಸ್ ಬಿಡುಗಡೆ ಮಾಡಿದ್ದು ಪ್ರಣಾಳಿಕೆಯಲ್ಲ, ಸುಳ್ಳಿನ ಸರಮಾಲೆ ಎಂದು ಟೀಕಿಸಿದ್ದಾರೆ. ‘ನಿನ್ನೆ ಕಾಂಗ್ರೆಸ್ ಪಕ್ಷ ಸುಳ್ಳಿನ  ಸರಮಾಲೆ ಬಿಡುಗಡೆ ಮಾಡಿದೆ. ತಮ್ಮ ಪ್ರಣಾಳಿಕೆಯಿಂದಲೇ ಕಾಂಗ್ರೆಸ್ಗೆ ಕೆಡುಕಾಗಲಿದೆ.. ಪ್ರಣಾಳಿಕೆಯ ಪ್ರತಿ ವಿಚಾರದಲ್ಲೂ ಭಾರತವನ್ನ ತುಂಡು ಮಾಡುವ ಉದ್ದೇಶವಿದೆ.. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶ ಒಡೆಯುವ ಆಲೋಚನೆಗಳಿವೆ.. ಇಂಥಾ ಯೋಚನೆಗಳು ಸ್ವಾತಂತ್ರ್ಯ ಕಾಲದಲ್ಲಿ ಮುಸ್ಲಿಂ ಲೀಗ್ನಲ್ಲಿದ್ದವು.. ಮುಸ್ಲಿಂ ಲೀಗ್ನ ಆ ಕಾಲದ ಆಲೋಚನೆಗಳನ್ನ.. ಕಾಂಗ್ರೆಸ್ ಈಗ ಭಾರತದ ಮೇಲೆ ಹೇರುತ್ತಿದೆ’ ಎಂದು ಕಿಡಿ ಕಾರಿದ್ರು. 

ಇದಕ್ಕೂ ಮೊದಲು ಉತ್ತರ ಪ್ರದೇಶದ ಸಹರಾನಪುರದಲ್ಲಿ ಮಾತಾಡಿದ ಮೋದಿ, ಇಂಡಿಯಾ ಕೂಟ ಅಂದ್ರೆ ಕಮಿಷನ್, ಎನ್‌ಡಿಎ ಅಂದ್ರೆ ಮಿಷನ್ ಎಂದ್ರು. ರಾಮಮಂದಿರ ಕೇವಲ ಚುನಾವಣೆ ಘೋಷಣೆಯಲ್ಲ, ನಾವು ಮಾಡಿ ತೋರಿಸಿದ್ದೇವೆ ಎಂದು ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದ್ರು. ‘ಕಾಂಗ್ರೆಸ್ ಎಷ್ಟು ಕಾಲದಲ್ಲಿ ಅಧಿಕಾರದಲ್ಲಿ ಇತ್ತೋ ಆಗೆಲ್ಲಾ ಕಮಿಷನ್ ತಿನ್ನೋದಕ್ಕೆ ಅವರು ಆದ್ಯತೆ ನೀಡಿದ್ರು.. I.N.D.I.A ಕೂಟ ಇರೋದು ಸಹ ಕಮಿಷನ್ಗಾಗಿ, NDA ಹಾಗೂ ಮೋದಿ ಸರ್ಕಾರ ಮಿಷನ್ಗಾಗಿ ಇದೆ.. ಅಯೋಧ್ಯೆಯಲ್ಲಿ ರಾಮಮಂದಿರ  ಬರೇ ಘೋಷಣೆಯಲ್ಲ, ರಾಮಮಂದಿರ ನಮ್ಮ ಮಿಷನ್ ಆಗಿದೆ.. ಈ ವರ್ಷ ರಾಮನವಮಿಯಂದು ನಮ್ಮ ಪ್ರಭು ಶ್ರೀರಾಮ ಟೆಂಟ್ನಲ್ಲಿ ಅಲ್ಲ ಭವ್ಯ ಮಂದಿರದಲ್ಲಿ ದರ್ಶನ ನೀಡಲಿದ್ದಾನೆ. ನಮ್ಮ ಯುವಜನತೆಗೆ ಇದು ಎಂಥಾ ಗೌರವ ಅಲ್ವಾ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಹಿಂತೆಗೆತ ನಮ್ಮ ಮಿಷನ್ ಆಗಿತ್ತು ಅದನ್ನು ಸಾಧಿಸಿದ್ದೇವೆ. ಕಾಶ್ಮೀರದಲ್ಲಿ ಕಲ್ಲು ಹೊಡೆಯುತ್ತಿದ್ರು ಅವರು ಹೊಡೆದ ಕಲ್ಲುಗಳಿಂದಲೇ.. ಮೋದಿ ವಿಕಸಿತ ಕಾಶ್ಮೀರ ನಿರ್ಮಾಣ ಮಾಡಿದ್ದಾರೆ’ ಎಂದರು.

ಅತ್ತ ರಾಜಸ್ಥಾನದ ಜೈಪುರದ ಕಾಂಗ್ರೆಸ್ ಸಮಾವೇಶದಲ್ಲಿ ಮಾತಾಡಿದ ಮಲ್ಲಿಕಾರ್ಜುನ ಖರ್ಗೆ, ಮೋದಿ ಹಾಗೂ ಬಿಜೆಪಿ ವಿರುದ್ಧ ಕಿಡಿ ಕಾರಿದ್ರು. ‘ಆಗ ಇಂದಿರಾ ಗಾಂಧಿಯವರು ಪಾಕಿಸ್ತಾನವನ್ನು ಎರಡು ಭಾಗ ಮಾಡಿ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದ್ದರು.. ಇಂದು ಚೀನಾ ನಿಧಾನವಾಗಿ ನಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಿದೆ.. ಭಾರತದ ಗ್ರಾಮಗಳ ಹೆಸರನ್ನು ಬದಲಾಯಿಸುತ್ತಿದೆ.. ಪಟ್ಟಣದ ಹೆಸರುಗಳನ್ನು ಬದಲಾಯಿಸುತ್ತಿದೆ, ಈ ವಿಚಾರದಲ್ಲಿ ಪ್ರಧಾನಿ  ಮೌನ ವಹಿಸಿದ್ದಾರೆ, ನನಗೆ 56 ಇಂಚಿನ ಎದೆಯಿದೆ ಎಂದು ಹೇಳ್ತಾರೆ.. 56 ಇಂಚಿನ ಎದೆ ನಿಮ್ಮ ಬಳಿಯೇ ಇರಲಿ ನಾವು ಟೇಲರ್ ಕರೆದು ಅಳತೆ ಮಾಡಿಯೇ ಬಿಡೋಣ’ ಎಂದರು.

ಸಾಲಮನ್ನಾ, ಹೆಣ್ಮಕ್ಕಳಿಗೆ ದುಡ್ಡು, ಜಾತಿ ಗಣತಿ, 25 ಲಕ್ಷ ಆರೋಗ್ಯ ವಿಮೆ..ಕಾಂಗ್ರೆಸ್‌ ಪ್ರಣಾಳಿಕೆಯ 10 ಪ್ರಮುಖ ಅಂಶಗಳು!

ಇನ್ನೂ ಇದೇ ಸಮಾವೇಶದಲ್ಲಿ ಮಾತಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ‘ವಿರೋಧ ಪಕ್ಷದ ನಾಯಕರನ್ನು ಬೆದರಿಸಿ ಬಿಜೆಪಿ ಸೇರುವಂತೆ ನಾನಾ ತಂತ್ರ ಮಾಡ್ತಿದ್ದಾರೆ. ಇಂದು ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ.. ಪ್ರಜಾಪ್ರಭುತ್ವ ಸಂಸ್ಥೆಗಳನ್ನೂ ರಾಜಕೀಯ ಅಧಿಕಾರ ಬಳಸಿ ನಾಶ ಮಾಡಲಾಗ್ತಿದೆ.. ಇಷ್ಟು ಮಾತ್ರವಲ್ಲದೆ  ನಮ್ಮ ಸಂವಿಧಾನ ಬದಲಾಯಿಸಲು ಷಡ್ಯಂತ್ರ ನಡೆಸಲಾಗ್ತಿದೆ, ಚುನಾವಣೆಯಲ್ಲಿ ನಾವೆಲ್ಲರೂ ಸರ್ವಾಧಿಕಾರಕ್ಕೆ ಉತ್ತರ ಕೊಡುತ್ತೇವೆ’ ಎಂದು ಕಿಡಿ ಕಾರಿದ್ರು.

ಶಿವರಾಜ್, ಬುಲೆಟಿನ್ ಪ್ರೊಡ್ಯೂಸರ್
 

click me!