Fact Check: ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಕೀಲರು ಟೋಲ್‌ ಕಟ್ಟಬೇಕಿಲ್ಲ!

By Suvarna NewsFirst Published Dec 14, 2019, 10:09 AM IST
Highlights

ನ್ಯಾಯಾಧೀಶರು ಮತ್ತು ವಕೀಲರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಕಟ್ಟಬೇಕಿಲ್ಲ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜವೇ ಎಂದು ಪರೀಕ್ಷಿಸಿದಾಗ ತಿಳಿದು ಬಂದ ಸತ್ಯಾಂಶವಿದು! 

ನ್ಯಾಯಾಧೀಶರು ಮತ್ತು ವಕೀಲರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಕಟ್ಟಬೇಕಿಲ್ಲ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಸ್ತೆ ಮತ್ತು ಸಾರಿಗೆ ಸಚಿವರ ಖಾಸಗಿ ಸೆಕ್ರೆಟರಿ ಸಂಕೇತ್‌ ಬೋಡ್ವೆ ಅವರ ಹೆಸರಿನಲ್ಲಿ ಪತ್ರವನ್ನು ಪೋಸ್ಟ್‌ ಮಾಡಿ, ‘ವಾವ್‌!! ಭಾರತಾದ್ಯಂತ ವಕೀಲರು ಟೋಲ್‌ ಕಟ್ಟಬೇಕಿಲ್ಲ. ಆದರೆ ಮಾಜಿ ವಕೀಲರಿಗೂ ಇದು ಅನ್ವಯಿಸುತ್ತದೆಯೇ?’ ಎಂದು ಪ್ರಶ್ನಿಸಿ ಒಕ್ಕಣೆ ಬರೆಯಲಾಗಿದೆ. ಇದೀಗ ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ಗಳಲ್ಲಿ ವೈರಲ್‌ ಆಗುತ್ತಿದೆ.

Fact Check| ಭಾರತದಲ್ಲಿ ಅನಕ್ಷರಸ್ಥರೂ ವಿತ್ತಮಂತ್ರಿಯಾಗಬಹುದು ಎಂದ್ರಾ ಪಿಚೈ!

ಆದರೆ ಇದು ನಿಜವೇ ಎಂದು ಪರಿಶೀಲಿಸಿದಾಗ ಡಿಸೆ.ಬರ್‌ 11ರಂದು ಸುದ್ದಿಮಾಧ್ಯಮವೊಂದರ ವರದಿ ಲಭ್ಯವಾಗಿದೆ. ಅದರಲ್ಲಿ ವಕೀಲರು ಮತ್ತು ವೈದ್ಯರು ಟೋಲ್‌ನಿಂದ ವಿನಾಯಿತಿ ನೀಡಬೇಕೆಂದು ಕೋರಿದ್ದಾರೆ ಎಂದಿದೆ. ಚೆನ್ನೈ ಮೂಲದ ವಕೀಲರಾದ ಆರ್‌. ಬಾಸ್ಕರ ದಾಸ್‌ ರಸ್ತೆ ಮತ್ತು ಸಾರಿಗೆ ಸಚಿವಾಲಯಕ್ಕೆ ಟೋಲ್‌ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು.

Fact Check: ಮೋದಿಗೆ ಕೆಟ್ಟಹೆಸರು ತರಲು ಈರುಳ್ಳಿ ಟ್ರಕ್‌ ತಡೆದ್ರಾ ಮಮತಾ?

ಈ ಬಗ್ಗೆ ಸಚಿವಾಲಯವು ಪರಿಶೀಲಿಸುವುದಾಗಿ ತಿಳಿಸಿ ಪತ್ರ ಬರೆದಿತ್ತು. ಪ್ರೆಸ್‌ ಇನ್‌ಫಾರ್ಮೇಶನ್‌ ಬ್ಯೂರೋ ಆಫ್‌ ಇಂಡಿಯಾ ಈ ಪತ್ರವನ್ನು ಟ್ವೀಟ್‌ ಮಾಡಿತ್ತು. ಇದೇ ಪತ್ರವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿ ಸುಳ್ಳು ಸುದ್ದಿ ಹರಡಲಾಗುತ್ತಿದೆ.

ಅಲ್ಲದೆ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವೂ ಸ್ಪಷ್ಟನೆ ನೀಡಿ, ‘ವಕೀಲರಿಗೆ ಯಾವುದೇ ವಿನಾಯಿತಿ ನೀಡಿಲ್ಲ’ ಎಂದಿದೆ. ಅಲ್ಲದೆ ಭೋಪಾಲ ಮೂಲದ ವಕೀಲರ ಫೇಸ್ಬುಕ್‌ ನಲ್ಲಿ ವೈರಲ್‌ ಆಗಿರುವ ಪತ್ರಕ್ಕೆ ಸಾಮ್ಯತೆ ಇರುವ ಪತ್ರವೊಂದು ಲಭ್ಯವಾಗಿದೆ. ಅದರಲ್ಲಿ ಬೋಡ್ವೆ ಅವರ ಸಹಿ ಇದೆ. ಮದ್ರಾಸ್‌ ಹೈಕೋರ್ಟ್‌ ವಕೀಲ ಆರ್‌.ಬಾಸ್ಕರ ದಾಸ್‌ ಅವರ ಪತ್ರಕ್ಕೆ ಪ್ರಕ್ರಿಯೆಯಾಗಿ ಈ ಪತ್ರ ಬರೆಯಲಾಗಿತ್ತು. ಇದೇ ಪತ್ರವನ್ನು ಎಡಿಟ್‌ ಮಾಡಿ ಸುಳ್ಳು ಸುದ್ದಿ ಹರಡಲಾಗಿದೆ.

NHAI clarifies that the user fee collection on National Highways is governed by NH fee rules. As per these rules, Advocates are not exempted from paying user fee (Toll) in NH Fee plazas.

— NHAI (@NHAISocialmedia)

- ವೈರಲ್ ಚೆಕ್  

click me!