ಚಂದ್ರಯಾನ ಲ್ಯಾಂಡ್‌ ವೇಳೆ ಟಿವಿಯಲ್ಲಿ ಮೋದಿ ಕಾಣಿಸಿಕೊಂಡಿದ್ದಕ್ಕೆ ಕಾಂಗ್ರೆಸ್‌ ಕಿಡಿ

By Kannadaprabha NewsFirst Published Aug 25, 2023, 7:06 AM IST
Highlights

ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ ಇಳಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟೀವಿಯಲ್ಲಿ ಪದೇ ಪದೇ ಕಾಣಿಸಿಕೊಂಡಿದ್ದಕ್ಕೆ ಕಾಂಗ್ರೆಸ್‌ ತರಾಟೆಗೆ ತೆಗೆದುಕೊಂಡಿದೆ.

ನವದೆಹಲಿ:  ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ ಇಳಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟೀವಿಯಲ್ಲಿ ಪದೇ ಪದೇ ಕಾಣಿಸಿಕೊಂಡಿದ್ದಕ್ಕೆ ಕಾಂಗ್ರೆಸ್‌ ತರಾಟೆಗೆ ತೆಗೆದುಕೊಂಡಿದೆ. ಚಂದ್ರಯಾನದ ಯಶಸ್ಸು ಅದರ ಹಿಂದೆ ಇದ್ದ ವಿಜ್ಞಾನಿಗಳ ಸಾಧನೆ. ಆದರೆ ಪ್ರಧಾನಿ ಮೋದಿ ಅವರು ಅದರ ಶ್ರೇಯವನ್ನು ಪಡೆಯಲು ಯತ್ನಿಸಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಟೀಕಿಸಿದ್ದಾರೆ.

‘ಲ್ಯಾಂಡಿಂಗ್‌ ವೇಳೆ ಪದೇಪದೇ ಟೀವಿಯಲ್ಲಿ ಮೋದಿ ಬರುತ್ತಾರೆ. ಆದರೆ ಚಂದ್ರಯಾನ-3ಕ್ಕಾಗಿ ದುಡಿದ ಹೆವಿ ಎಂಜಿನಿಯರಿಂಗ್‌ ಕಾರ್ಪೋರೇಷನ್‌(Heavy Engineering Corporation (HEC)ಎಂಜಿನಿಯರ್‌ಗಳಿಗೆ ಕಳೆದ 17 ತಿಂಗಳಿಂದ ಸಂಬಳ ಕೊಟ್ಟಿಲ್ಲ. ಮಹತ್ವದ ಬಾಹ್ಯಾಕಾಶ ಯೋಜನೆಗಳ (space projects) ಬಜೆಟ್‌ ಅನ್ನು ಮೋದಿ ಸರ್ಕಾರ ಶೇ.32ರಷ್ಟು ಕಡಿತಗೊಳಿಸಿದೆ. ಆದರೂ ಆ ಹೀರೋಗಳು ವಿಶ್ವದರ್ಜೆಯ ಬಾಹ್ಯಾಕಾಶ ಸಂಶೋಧನಾ ಕಾರ್ಯಕ್ರಮ ನಡೆಸಿದ್ದಾರೆ. ಮೋದಿ ಅವರಿಗೆ ಆ ವಿಜ್ಞಾನಿಗಳ ಪ್ರತಿಭೆ ಹಾಗೂ ಪರಿಶ್ರಮದ ಬಗ್ಗೆ ಗೌರವವೇ ಇಲ್ಲ. ಇದೆಲ್ಲದರ ನಡುವೆ ವಿಜ್ಞಾನಿಗಳ ಸಾಧನೆ ವೇಳೆ ಪ್ರಚಾರ ಪಡೆದುಕೊಂಡಿದ್ದಾರೆ’ ಎಂದು ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಂದ್ರಯಾನ-3 ಆರಂಭ ಮಾತ್ರ, ಇಸ್ರೋದ ಮುಂದಿನ ಪ್ರಾಜೆಕ್ಟ್‌ಗಳನ್ನು ಕಂಡು ಅಚ್ಚರಿ ಪಟ್ಟ ವಿಶ್ವ!

ಚಂದ್ರಯಾನ-3 ಯಶಸ್ಸಿಗೆ ಗೂಗಲ್‌ ಡೂಡಲ್‌ ವಿಶಿಷ್ಟಗೌರವ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ಯಶಸ್ವಿಯಾಗಿ ಚಂದ್ರಯಾನ-3 ನೌಕೆ ಸಾಫ್‌್ಟಲ್ಯಾಂಡಿಂಗ್‌ ಮಾಡಿದ್ದಕ್ಕೆ ಗೂಗಲ್‌ ಗುರುವಾರ ತನ್ನ ಡೂಡಲ್‌ನಲ್ಲಿ ವಿಶೇಷ ಗೌರವ ಸೂಚಿಸಿದೆ. ಡೂಡಲ್‌ನಲ್ಲಿ ‘ಗೂಗಲ್‌’ ಎಂಬ ಅಕ್ಷರಗಳು ಬಾಹ್ಯಾಕಾಶದಲ್ಲಿ ತೇಲುತ್ತಿರುವ ಹಾಗೆ ಮಾಡಲಾಗಿದೆ. ಇದರ ಮಧ್ಯದಲ್ಲಿ ಎರಡನೇ ‘ಒ’ ಅಕ್ಷರವನ್ನು ನಗುವ ಚಂದ್ರನಂತೆ ಆ್ಯನಿಮೇಟೆಡ್‌ನಲ್ಲಿ ಚಿತ್ರಿಸಲಾಗಿದೆ. ಈ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ ಸಾಫ್ಟ್ ಲ್ಯಾಂಡಿಂಗ್‌ ಮಾಡುತ್ತಿರುವುದನ್ನು ಚಿತ್ರಿಸಲಾಗಿದೆ. ಅದರಲ್ಲಿ ಮನೆಯೊಂದನ್ನು ಸಹ ಚಿತ್ರಿಸಲಾಗಿದೆ. ಇದರ ಸುತ್ತಲೂ ನಕ್ಷತ್ರಗಳು ಮಿನುಗುವಂತೆ ಮಾಡಲಾಗಿದೆ.

ಭಾರತಕ್ಕೆ ನೆರವು ನಿಲ್ಲಿಸಿ ಎಂದ ಯುಕೆ ಪತ್ರಕರ್ತೆ; ಕೊಹಿನೂರ್ ವಜ್ರ, 45 ಟ್ರಿಲಿಯನ್ ಡಾಲರ್ ವಾಪಸ್‌ ಕೊಡಿ ಎಂದ ನೆಟ್ಟಿಗರು

click me!