ಮನಮೋಹನ ಸಿಂಗ್ ನಿಧನದ 7 ದಿನಗಳ ಶೋಕಾಚರಣೆ ವೇಳೆ ಈಗ ಹೊಸ ವರ್ಷಾಚರಣೆಗೆ ರಾಹುಲ್ ವಿಯೆಟ್ನಾಂಗೆ ತೆರಳಿದ್ದಾರೆ. ಇದು ಸರಿಯೆ? ಕಾಂಗ್ರೆಸ್ ಹಾಗೂ ಗಾಂಧಿ ಪರಿವಾರವು ಸಿಖ್ಖರನ್ನು ದ್ವೇಷಿಸುತ್ತದೆ. ಇಂದಿರಾ ಗಾಂಧಿ ಅವರು ತಮ್ಮ ಅವಧಿಯಲ್ಲಿ ಅವರ ಪವಿತ್ರ ಸ್ಥಳವಾದ ದರ್ಬಾರ್ ಸಾಹಿಬ್ ಅನ್ನು ಅಪವಿತ್ರ ಗೊಳಿಸಿದ್ದನ್ನು ಮರೆಯಬೇಡಿ ಎಂದ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ
ನವದೆಹಲಿ(ಡಿ.31): ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಗಲಿಕೆಯ ಶೋಕದಲ್ಲಿ ದೇಶ ಮುಳುಗಿದ್ದರೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತ್ರ ಹೊಸ ವರ್ಷದ ಆಚರಣೆಗೆ ವಿಯೆಟ್ನಾಂಗೆ ತೆರಳಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.
ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮಾತನಾಡಿ, 'ಸಿಂಗ್ ಸಾವಿನಲ್ಲೂ ರಾಹುಲ್ ರಾಜಕೀಯ ಮಾಡಿದ್ದರು. ಸಿಂಗ್‌ಗೆ ಕೇಂದ್ರ ಸರ್ಕಾರ ಆಗೌರವ ತೋರಿದೆ ಎಂದಿದ್ದರು.
'ಕೇರಳ ಮಿನಿ ಪಾಕಿಸ್ತಾನ, ಅದಕ್ಕೆ ರಾಹುಲ್-ಪ್ರಿಯಾಂಕಾ ಗೆಲ್ತಿದ್ದಾರೆ..' ಮಹಾರಾಷ್ಟ್ರ ಮಂತ್ರಿಯ ವಿವಾದಾತ್ಮಕ ಹೇಳಿಕೆ
ಆದರೆ ಮನಮೋಹನ ಸಿಂಗ್ ನಿಧನದ 7 ದಿನಗಳ ಶೋಕಾಚರಣೆ ವೇಳೆ ಈಗ ಹೊಸ ವರ್ಷಾಚರಣೆಗೆ ರಾಹುಲ್ ವಿಯೆಟ್ನಾಂಗೆ ತೆರಳಿದ್ದಾರೆ. ಇದು ಸರಿಯೆ? ಕಾಂಗ್ರೆಸ್ ಹಾಗೂ ಗಾಂಧಿ ಪರಿವಾರವು ಸಿಖ್ಖರನ್ನು ದ್ವೇಷಿಸುತ್ತದೆ. ಇಂದಿರಾ ಗಾಂಧಿ ಅವರು ತಮ್ಮ ಅವಧಿಯಲ್ಲಿ ಅವರ ಪವಿತ್ರ ಸ್ಥಳವಾದ ದರ್ಬಾರ್ ಸಾಹಿಬ್ ಅನ್ನು ಅಪವಿತ್ರ ಗೊಳಿಸಿದ್ದನ್ನು ಮರೆಯಬೇಡಿ' ಎಂದಿದ್ದಾರೆ.
ಪ್ರಧಾನಿ ಸಿಂಗ್‌ಗೆ ಅಗೌರವ ತೋರಿದ ರಾಹುಲ್ ಗಾಂಧಿ ವಜಾ ಆಗಿಲ್ಲ, ಪ್ರಣಬ್ ಪುತ್ರಿ ಆಕ್ರೋಶ!
ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಮುಖಂಡ ಮಾಣಿಕ್ಯಂ ಟ್ಯಾಗೋರ್, 'ರಾಹುಲ್ ವಿದೇಶಕ್ಕೆ ವೈಯಕ್ತಿಕ ಪ್ರವಾಸ ಕೈಗೊಂಡಿದ್ದಾರೆ. ಇದು ಬಿಜೆಪಿಗೇಕೆ ಸಮಸ್ಯೆಯುಂಟು ಮಾಡುತ್ತಿದೆ? ಹೊಸ ವರ್ಷದಲ್ಲಾದರೂ ಸಂಘಿಗಳು ಇಂಥ ರಾಜಕೀಯ ಬಿಡಬೇಕು' ಎಂದಿದ್ದಾರೆ. ಈ ಮೊದಲು, ಅಂತ್ಯಸಂಸ್ಕಾರದ ಬಳಿಕ ಸಿಂಗ್ ಅವರ ಅಸ್ಥಿಯನ್ನು ಸಂಗ್ರಹಿಸಲೂ ಗಾಂಧಿ ಪರಿವಾರ ಬರಲಿಲ್ಲ ಎಂದು ಬಿಜೆಪಿ ಆಪಾದಿಸಿತ್ತು.
ಕಾರ್ಯಕ್ರಮಗಳನ್ನೇ ರದ್ದುಗೊಳಿಸಿದ್ದ ಪಿಎಂ ಮೋದಿ: ಬಿಜೆಪಿಗರು
ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನರಾದ ಮರುದಿನ ಅಂದರೆ ಡಿ.27ರಂದು ಪ್ರಧಾನಿ ಮೋದಿ ಅವರು ತಮ್ಮ ಅಧಿಕೃತ ಕಾರ್ಯಕ್ರಮವನ್ನೇ ರದ್ದುಗೊಳಿಸಿದ್ದರು. ತನ್ಮೂಲಕ ಡಾ। ಮಹಮೋಹನ ಸಿಂಗ್ ಅವರಿಗೆ ಗೌರವ ಸಲ್ಲಿಸಿದ್ದರು. ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳುವ ಮೂಲಕ ಅಗೌರವ ತೋರಿದ್ದಾರೆ ಎಂದು ಬಿಜೆಪಿಗರು ಟೀಕಿಸಿದ್ದಾರೆ.