
ತಮಿಳುನಾಡು(ಎ.02): ಸುಳ್ಳು ವಿಡಿಯೋ, ತಪ್ಪು ಮಾಹಿತಿ ಪೋಸ್ಟ್ ಮಾಡಿ ಸತ್ಯ ಬಯಲಾದಾಗ ಡಿಲೀಟ್ ಮಾಡುವ ಕಾಂಗ್ರೆಸ್ ಪದ್ದತಿ ಮುಂದುವರಿದಿದೆ. ಇಷ್ಟೇ ಅಲ್ಲ ಮತ್ತೆ ಮುಖಭಂಗಕ್ಕೆ ಒಳಗಾಗಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋವನ್ನು ಎಡಿಟ್ ಮಾಡಿ ಪೋಸ್ಟ್ ಮಾಡಿದೆ. ಈ ಮೂಲಕ ಮೋದಿ ಫೋಟೋಗಾಗಿ ಜನರೇ ಇಲ್ಲದ ಕಡೆ ಕೈಬೀಸುತ್ತಿದ್ದಾರೆ ಎಂದು ಬಿಂಬಿಸಲು ಹೋಗಿ ಟೀಕೆಗೆ ಗುರಿಯಾಗಿದೆ.
ಗುರುವಾರ(ಎ.01) ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಮಧುರೈಗೆ ತೆರಳಿದ್ದರು. ಎಪ್ರಿಲ್ 2 ರಂದು ಮುಧುರೈನಲ್ಲಿನ ಚುನಾವಣಾ ಪ್ರಚಾರಕ್ಕಾಗಿ ತೆರಳಿದ್ದರು. ಈ ವೇಳೆ ಮಧುರೈ ಬಂದಿಳಿದ ಮೋದಿಗೆ ಅಧ್ದೂರಿ ಸ್ವಾಗತ ಸಿಕ್ಕಿತ್ತು. ಜನರು ಮೋದಿ, ಮೋದಿ ಎಂದು ಘೋಷವಾಕ್ಯಗಳನ್ನು ಕೂಗಿ ಸ್ವಾಗತಿಸಿದ್ದರು. ಈ ವೇಳೆ ಮೋದಿ, ತಮ್ಮ ಎಂದಿನ ಶೈಲಿಯಲ್ಲಿ ಜನರತ್ತ ಕೈಬೀಸಿದ್ದರು. ಈ ವಿಡಿಯೋವನ್ನು ಕಾಂಗ್ರೆಸ್ ಎಡಿಟ್ ಮಾಡಿ ಪೋಸ್ಟ್ ಮಾಡಿತ್ತು.
ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ!.
ಮೋದಿ ವಿಡಿಯೋ ಎಡಿಟ್ ಮಾಡಿದ ಕಾಂಗ್ರೆಸ್, ದೂರದಲ್ಲಿದ್ದ ಜನರನ್ನು ಬ್ಲರ್ ಮಾಡಿದೆ. ಇನ್ನು ಜನರ ಘೋಷಣೆಗಳನ್ನು ಮ್ಯೂಟ್ ಮಾಡಿದೆ. ಬಳಿಕ ಕಾಂಗ್ರಸ್ ತನ್ನ ಅಧೀಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಇನ್ನು ಕಾಂಗ್ರೆಸ್ ನಾಯಕ ಪವನ್ ಖೆರ ಸೇರಿದಂತೆ ಹಲವರು ಈ ವಿಡಿಯೋ ಪೋಸ್ಟ್ ಮಾಡಿ, ನಿಮಗೇನಾದರು ಕಾಣುತ್ತಿದೆಯಾ ಎಂದು ವ್ಯಂಗ್ಯವಾಡಿದ್ದಾರೆ. ಸತ್ಯ ಅರಿವಾಗುತ್ತಿದ್ದಂತೆ ಡಿಲೀಟ್ ಮಾಡಿದ್ದಾರೆ.
ಆದರೆ ಕಾಂಗ್ರೆಸ್ ವಿಡಿಯೋಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಇಷ್ಟೇ ಅಲ್ಲ ಅಸಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿತ್ತು. ಈ ವೇಳೆ ಹಲವು ಕಾಂಗ್ರೆಸ್ಸಿಗರು ಎಡಿಟ್ ಮಾಡಿದ ಮೋದಿ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಇತ್ತ ಕಾಂಗ್ರೆಸ್ ಅಧೀಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದ ಈ ವಿಡಿಯೋ ಕೂಡ ಡಿಲೀಟ್ ಮಾಡಲಾಗಿದೆ
ಕಾಂಗ್ರೆಸ್ ಸುಳ್ಳು ಹೇಳಲು ಹೋಗಿ ಮತ್ತೊಮ್ಮೆ ಬಟಾ ಬಯಲಾಗಿದೆ. ಈಗಾಗಲೇ ಹಲವು ಬಾರಿ ಈ ರೀತಿ ಮುಖಭಂಗ ಕಾಂಗ್ರೆಸ್ ಎದುರಿಸಿದೆ. ಬಳಿಕ ಶಿಶಿ ತರೂರ್ ಅಂಥಾ ಕೆಲ ನಾಯಕರು ಕ್ಷಮೆ ಕೇಳಿದ್ದರೆ, ಉಳಿದವರೆಲ್ಲಾ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ಮುಂದೆ ಸಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ