ಕಾಂಗ್ರೆಸ್ ಪಕ್ಷವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೆಸರಿನಲ್ಲಿ ಫೆಲೋಶಿಪ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಆಧುನಿಕ ಭಾರತ ನಿರ್ಮಾಣದ ಉದ್ದೇಶದಿಂದ ರಾಜಕೀಯಕ್ಕೆ ಬರಲು ಬಯಸುವ ವೃತ್ತಿಪರರಿಗೆ ಇದು ಅವಕಾಶ ನೀಡುತ್ತದೆ.
ನವದೆಹಲಿ (ಏ.5): ಆಧುನಿಕ, ಜಾತ್ಯತೀತ ಮತ್ತು ಪ್ರಗತಿಪರ ಭಾರತ ನಿರ್ಮಿಸುವ ಉದ್ದೇಶದಿಂದ ರಾಜಕೀಯಕ್ಕೆ ಬರುವ ವ್ಯಕ್ತಿಗಳಿಗೆ ಕಾಂಗ್ರೆಸ್ ಪಕ್ಷವು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಹೆಸರಿನಲ್ಲಿ ಫೆಲೋಶಿಪ್ ಕಾರ್ಯಕ್ರಮ ಜಾರಿಗೆ ತಂದಿದೆ.
ವೃತ್ತಿ ಜೀವನದ ನಡುವಿನಲ್ಲಿರುವ ಅಂದರೆ ಕನಿಷ್ಠ 10 ವರ್ಷದಿಂದ ವೃತ್ತಿಜೀವನದಲ್ಲಿರುವ 50 ವೃತ್ತಿಪರರನ್ನು ಈ ಫೆಲೋಶಿಪ್‌ಗೆ ಆಯ್ಕೆ ಮಾಡಲಾಗುವುದು. ಪಕ್ಷದಲ್ಲಿನ ವೃತ್ತಿಪರ ಹಿನ್ನೆಲೆ ಹೊಂದಿರುವ ಹಿರಿಯ ಮುಖಂಡರು ಇವರಿಗೆ ರಾಜಕೀಯದ ಮಾರ್ಗದರ್ಶನ ನೀಡಲಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಭಾರತದ ಪ್ರಖರ ಬುದ್ಧಿಮತ್ತೆ ಹೊಂದಿಉರವ ವ್ಯಕ್ತಿಗಳನ್ನು ರಾಜಕೀಯಕ್ಕೆ ಕರೆತರುವ ಸಮಯ ಬಂದಿದೆ ಎಂದು ಹೇಳಿದರು.
ಇದೇ ವೇಳೆ ಅವರು ಈ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸುವ ಲಿಂಕ್ ಅನ್ನೂ ಹಂಚಿಕೊಂಡಿದ್ದಾರೆ.
ಕಠಿಣ ಆಯ್ಕೆ ಪ್ರಕ್ರಿಯೆಗಳ ಮೂಲಕ ಪಕ್ಷಧ ಉನ್ನತ ಸಮಿತಿಯು ದೇಶಾದ್ಯಂತ 50 ಮಂದಿಯನ್ನು ಫೆಲೋಶಿಫ್‌ಗೆ ಆಯ್ಕೆ ಮಾಡಲಿದ್ದು, ಕಾಂಗ್ರೆಸ್ ಪಕ್ಷದೊಳಗೆ ಅವರಿಗೆ ವಿವಿಧ ಪ್ರಾಜೆಕ್ಟ್‌ಗಳನ್ನು ನೀಡಿ ತರಬೇತಿ ನೀಡಲಾಗುವುದು ಎಂದು ಹೇಳಲಾಗಿದೆ.