ಪಾಕ್‌ಗೆ ಪಾಠ ಕಲಿಸುವ ಸಮಯ, CWC ಸಭೆಯಲ್ಲಿ ಪೆಹಲ್ಗಾಂ ದಾಳಿ ಕುರಿತು ಕಾಂಗ್ರೆಸ್ ನಿರ್ಣಯ

Published : May 03, 2025, 02:56 PM ISTUpdated : May 03, 2025, 03:51 PM IST
ಪಾಕ್‌ಗೆ ಪಾಠ ಕಲಿಸುವ ಸಮಯ, CWC ಸಭೆಯಲ್ಲಿ ಪೆಹಲ್ಗಾಂ ದಾಳಿ ಕುರಿತು ಕಾಂಗ್ರೆಸ್ ನಿರ್ಣಯ

ಸಾರಾಂಶ

ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಇದು ಸೂಕ್ತ ಸಮಯ. ಭಾರತದ ನಿರ್ಧಾರದಿಂದ ಭಯೋತ್ಪಾದನೆ ನಾಶವಾಗಬೇಕು ಎಂದು ಕಾಂಗ್ರೆಸ್ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಣಯ ಏನು?

ನವದೆಹಲಿ(ಮೇ.03) ಪೆಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರ ತೀರಿಸಲು ಭಾರತೀಯರು ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ದಾಳಿಗೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದೀಗ ಕಾಂಗ್ರೆಸ್ ತನ್ನ ವರ್ಕಿಂಗ್ ಕಮಿಟಿಯಲ್ಲಿ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಪೆಹಲ್ಗಾಂ ಉಗ್ರ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ನಾಯಕರು, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಸಮಯ ಇದು. ಭಾರತೀಯರು ಎಲ್ಲರು ಒಗ್ಗಟ್ಟಾಗಿದ್ದಾರೆ. ಭಾರತದ ಪ್ರತೀಕಾರಕ್ಕೆ ಸಂಪೂರ್ಣ ಬೆಂಬಲ ಇದೆ ಎಂದಿದೆ.

ಈ ಬಾರಿ ಭಾರತ ತೆಗೆದುಕೊಳ್ಳುವ ನಿರ್ಧಾರ, ಪಾಕಿಸ್ತಾನದ ಭಯೋತ್ಪಾದನ ಸಂಪೂರ್ಣ ನಾಶವಾಗಬೇಕು. ಈ ದಾಳಿ ಹಿಂದಿನ ಮಾಸ್ಟರ್‌ಮೈಂಡ್, ಬೆಂಬಲ ನೀಡಿದವರು ಎಲ್ಲರಿಗೂ ತಕ್ಕ ಪಾಠ ಕಲಿಸಬೇಕು ಎಂದು ಕಾಂಗ್ರೆಸ್ ವರ್ಕಿಂಗ್ ಕಮಿಟಿ ನಿರ್ಣಯ ಅಂಗೀಕಿರಿಸಿದೆ. ಇದು ರಾಜಕೀಯ ಮಾಡುವ ಸಮಯವಲ್ಲ.  ಈ ಬಾರಿ ಭಾರತ ದೇಶದ ಮೇಲಿನ ದಾಳಿಗೆ ಒಗ್ಗಟ್ಟಾಗಿ ತಕ್ಕ ಪಾಠ ಕಲಿಸುವ ಸಂದೇಶ ನೀಡಬೇಕಿದೆ ಎಂದುCWG ಸಭೆಯ ನಿರ್ಣಯಗಳಲ್ಲಿ ಉಲ್ಲೇಖಿಸಿದೆ.

Breaking ಪಾಕಿಸ್ತಾನದ ಎಲ್ಲಾ ಉತ್ಪನ್ನ ಬ್ಯಾನ್, ಆಮದು ಸಂಪೂರ್ಣ ಸ್ಥಗಿತಗೊಳಿಸಿದ ಭಾರತ

ಇದೇ ವೇಳೆ ದಾಳಿಗೆ ತುತ್ತಾದ ಕುಟುಂಬದ ಜೊತೆ ಪಕ್ಷವಿದೆ. ಇಡೀ ಭಾರತೀಯರು ಕುಟುಂಬದ ಜೊತೆಗಿದ್ದಾರೆ. ಸರ್ಕಾರ ನೀಡುವ ಆರ್ಥಿಕ ಸಹಾಯ ಮಾತ್ರವಲ್ಲ, ಅವರಿಗೆ ಮಾನಸಿಕವಾಗಿ ಧೈರ್ಯ ನೀಡಬೇಕಿದೆ. ಸವಾಲು ಮೆಟ್ಟಿ ನಿಲ್ಲಸು ಶಕ್ತಿ ತುಂಬಬೇಕಿದೆ. ಇಡೀ ಕುಟುಂಬಗಳ ಜೊತೆ ಪಕ್ಷ ನಿಲ್ಲಲಿದೆ ಎಂದು ಕಾಂಗ್ರೆಸ್ ವರ್ಕಿಂಗ್ ಕಮಿಟಿ ನಿರ್ಣಯದಲ್ಲಿ ಹೇಳಲಾಗಿದೆ. ಇದೇ ವೇಳೆ ದೇಶದ ಎಲ್ಲಾ ಜನತೆ ಈ ಕುಟುಂಬದ ಜೊತೆ ನಿಲ್ಲಬೇಕು ಎಂದಿದೆ.

ಈ ಸಭೆಯಲ್ಲಿ ಕಾಂಗ್ರೆಸ್ ಪ್ರಮುಖವಾಗಿ ಭದ್ರತಾ ವೈಫಲ್ಯ ಕುರಿತು ಧ್ವನಿ ಎತ್ತಿದೆ. ಇದು ಭದ್ರತಾ ವೈಫಲ್ಯದಿಂದ ಆಗಿರುವ ಘಟನೆ. ಇದರ ಹೊಣೆ ಯಾರು ಹೊತ್ತುಕೊಳ್ಳಬೇಕು? ಈ ಭದ್ರತಾ ವೈಫಲ್ಯ ಆಗಿದ್ದು ಹೇಗೆ? ಎಲ್ಲಾ ತನಿಖೆ ನಡೆಯಬೇಕು. ತನಿಖೆಯಲ್ಲಿ ಈ ವೈಫಲ್ಯಕ್ಕೆ ಕಾರಣ ಯಾರು ಅನ್ನೋದು ಗೊತ್ತಾಗಲಿದೆ ಎಂದು ಕಾಂಗ್ರೆಸ್ ಹೇಳಿದೆ. ಕೇಂದ್ರ ಸರ್ಕಾರ ದೃಢ ನಿರ್ಧಾರದಿಂದ ಮುನ್ನಗ್ಗಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಪಾಕಿಸ್ತಾನ ವಿರುದ್ದ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಹೇಳಿದೆ.

ಇತ್ತ ಭಾರತ ಸರ್ಕಾರ ಈಗಾಗಲೇ ಹಲವು ಒಪ್ಪಂದಗಳನ್ನು ರದ್ದು ಮಾಡಿದೆ. ಪಾಕಿಸ್ತಾನದಿಂದ ಆಮದು ನಿಷೇಧಿಸಿದೆ. ಸಿಂಧೂ ನದಿ ಒಪ್ಪಂದ ರದ್ದು, ವಾಘ ಗಡಿ ಸ್ಥಗಿತಗೊಳಿಸಿದೆ. 

ಯುಪಿ ಹೆದ್ದಾರಿಯಲ್ಲಿ IAF ಯುದ್ಧ ವಿಮಾನ ಲ್ಯಾಂಡಿಂಗ್, ಟೇಕ್ಆಫ್ ನಡೆಸಿದ್ದೇಕೆ?
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು