ಕಾಂಗ್ರೆಸ್‌ನ ‘ಒಂದು ಕುಟುಂಬ, ಒಂದು ಟಿಕೆಟ್‌’ ಈ ಪ್ರಮುಖ ಐವರಿಗೆ ಅನ್ವಯವಾಗಲ್ಲ!

By Suvarna News  |  First Published May 14, 2022, 10:19 AM IST

* ‘ಒಂದು ಕುಟುಂಬ, ಒಂದು ಟಿಕೆಟ್‌’ ಅನೇಕರಿಗೆ ಅನ್ವಯಿಸಲ್ಲ

* ರಾಹುಲ್‌, ಪ್ರಿಯಾಂಕಾ, ಖರ್ಗೆ, ಚಿದು ಕುಟುಂಬಕ್ಕೆ ಅನ್ವಯವಿಲ್ಲ

* ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲು ಚಿಂತನೆ


ನವದೆಹಲಿ(ಮೇ.14): ‘ಒಂದು ಕುಟುಂಬ ಒಂದು ಟಿಕೆಟ್‌’ ಎಂಬ ಕಾಂಗ್ರೆಸ್‌ನ ಸಂಭಾವ್ಯ ಹೊಸ ನೀತಿ, ಹಾಲಿ ಜನಪ್ರತಿನಿಧಿಗಳಾಗಿರುವ ಹಾಗೂ ಪಕ್ಷದಲ್ಲಿ ಹುದ್ದೆಗಳನ್ನು ಹೊಂದಿರುವ ಹಲವಾರು ಪ್ರಭಾವಿಗಳ ಕುಟುಂಬಕ್ಕೆ ಅನ್ವಯ ಆಗುವುದಿಲ್ಲ ಎಂಬ ವಿಷಯ ಗಮನಾರ್ಹವಾಗಿದೆ.

‘ಪಕ್ಷಕ್ಕೆ ಸೇರಿದ ತಕ್ಷಣ ಏಕಾಏಕಿ ಟಿಕೆಟ್‌ ನೀಡುವುದಿಲ್ಲ. ಆದರೆ ಪಕ್ಷ ಸೇರಿ ಕನಿಷ್ಠ 5 ವರ್ಷ ಉತ್ತಮ ಸೇವೆ ಸಲ್ಲಿಸಿದವರಿಗೆ ಟಿಕೆಟ್‌ ನೀಡಲಾಗುತ್ತದೆ’ ಎಂಬುದು ‘ಒಂದು ಕುಟುಂಬ ಒಂದು ಟಿಕೆಟ್‌ ನೀತಿ’ಯ ಪ್ರಮುಖಾಂಶ. ಹೀಗಾಗಿ ಈಗಾಗಲೇ ಪಕ್ಷ ಸೇರಿ ಹಲವಾರು ವರ್ಷ ಸೇವೆ ಸಲ್ಲಿಸಿರುವ ಗಾಂಧಿ ಕುಟುಂಬದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೆ ಈ ನೀತಿ ಅನ್ವಯಿಸುವುದಿಲ್ಲ.

Tap to resize

Latest Videos

ಮಲ್ಲಿಕಾರ್ಜುನ ಖರ್ಗೆ-ಪ್ರಿಯಾಂಕ್‌ ಖರ್ಗೆ, ಪಿ. ಚಿದಂಬರಂ-ಕಾರ್ತಿ ಚಿದಂಬರಂ, ಡಿ.ಕೆ. ಶಿವಕುಮಾರ್‌-ಡಿ.ಕೆ. ಸುರೇಶ್‌ ಹೀಗೆ ಅನೇಕರಿಗೆ ಇದು ಅನ್ವಯಿಸುವುದಿಲ್ಲ.

Ramya Politics ರಮ್ಯಾ ರಾಜಕೀಯ ರೀ-ಎಂಟ್ರಿ ಮುನ್ಸೂಚನೆ?

ಆದರೆ, ಹೊಸದಾಗಿ ಈ ಕುಟುಂಬದ ಸದಸ್ಯರು ಪಕ್ಷ ಸೇರಿದ ತಕ್ಷಣ ಟಿಕೆಟ್‌ ಬಯಸಿದರೆ ಅವರಿಗೆ ಟಿಕೆಟ್‌ ದೊರಕುವುದಿಲ್ಲ.

ಒಂದು ಕುಟುಂಬ ಒಂದು ಟಿಕೆಟ್ ನೀತಿ ಏಕೆ?

ಕಾಂಗ್ರೆಸ್‌ ಪಕ್ಷದಲ್ಲಿ ವಂಶಪಾರಂಪರ್ಯ ರಾಜಕೀಯ ನಡೆಸಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಲು ಪಕ್ಷ ಈ ಕ್ರಮ ಕೈಗೊಳ್ಳುತ್ತಿದೆ. ಆದರೆ ಪಕ್ಷದಲ್ಲಿ ಕನಿಷ್ಠ 5 ವರ್ಷ ಕಾಲ ಅಪ್ರತಿಮ ಸೇವೆ ಸಲ್ಲಿಸಿದವರಿಗೆ ‘ಒಂದು ಕುಟುಂಬ, ಒಂದು ಟಿಕೆಟ್‌’ ನೀತಿಯಿಂದ ವಿನಾಯ್ತಿ ಸಿಗಲಿದ್ದು, ಇಂಥವರು ಒಂದೇ ಕುಟುಂಬದಲ್ಲಿದ್ದರೂ ಟಿಕೆಟ್‌ ಗಿಟ್ಟಿಸಬಹುದಾಗಿದೆ.

ಇದೇ ವೇಳೆ, 50-60 ವರ್ಷದಿಂದ ನಿಂತ ನೀರಾಗಿದ್ದ ಪಕ್ಷ ಸಂಘಟನೆಯಲ್ಲಿ ವ್ಯಾಪಕ ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ. ಈಗಿರುವ ಬೂತ್‌ ಹಾಗೂ ಬ್ಲಾಕ್‌ ಮಟ್ಟದ ಸಮಿತಿಗಳ ಮಧ್ಯದಲ್ಲಿ ‘ಮಂಡಲ ಕಮಿಟಿ’ಗಳನ್ನು ರಚಿಸುವ ಪರಿಶೀಲನೆ ನಡೆದಿದೆ. ಯುವಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪಕ್ಷದ ಎಲ್ಲ ಕಮಿಟಿಗಳಲ್ಲಿ 50 ವರ್ಷಕ್ಕಿಂತ ಕೆಳಗಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಪಕ್ಷದಲ್ಲಿ ಯಾವುದಾದರೂ ಸ್ಥಾನ ಬೇಕು ಎಂದರೆ ಪಕ್ಷದಲ್ಲಿ ಆತ ಕನಿಷ್ಠ 3ರಿಂದ 5 ವರ್ಷ ದುಡಿದಿರಬೇಕು. ಪಕ್ಷದಲ್ಲಿನ ಪದಾಧಿಕಾರಿಗಳ ಸಾಧನೆ ಅಳೆದು ಅವರಿಗೆ ಪದೋನ್ನತಿ ನೀಡಲು ‘ಮೌಲ್ಯಮಾಪನ ವಿಭಾಗ’ ಹಾಗೂ ಜನರ ನಾಡಿಮಿಡಿತ ಅರಿಯಲು ‘ಸಾರ್ವಜನಿಕ ದೂರದೃಷ್ಟಿವಿಭಾಗ’ ರಚನೆ ಮಾಡಬೇಕು ಎಂಬ ಪ್ರಸ್ತಾವಗಳೂ ಚಿಂತನ ಶಿಬಿರದಲ್ಲಿವೆ.

Anti Conversion Bill ಮತಾಂತರ ನಿಷೇಧ ಸುಗ್ರೀವಾಜ್ಞೆ ತಿರಸ್ಕಾರಕ್ಕೆ ಸಿದ್ದು ಆಗ್ರಹ!

ಜೊತೆಗೆ ರಾಜ್ಯಸಭೆಗೆ ಗರಿಷ್ಠ 2-3 ಬಾರಿ ಮಾತ್ರ ಆಯ್ಕೆ ಮಾಡುವ ನಿಯಮ, ನಿಗದಿತ ವಯೋಮಿತಿ ಮೀರಿದವರನ್ನು ಪಕ್ಷದ ಯಾವುದೇ ಹುದ್ದೆಗಳಿಗೂ ನೇಮಕ ಮಾಡದೇ ಇರುವ, ಸಂಘಟನೆಯಲ್ಲಿನ ಎಲ್ಲಾ ಹಂತದ ಹುದ್ದೆಗಳಿಗೂ ವಿವಿಧ ವಯೋಮಿತಿ ನಿಗದಿ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಉದಾಹರಣೆಗೆ ಇದೀಗ ಬಿಜೆಪಿಯಲ್ಲಿ 70-75 ವರ್ಷದ ವಯೋಮಿತಿ ಹಾಕಲಾಗಿದೆ. ಕಾಂಗ್ರೆಸ್‌ನಲ್ಲೂ ಇಂಥದ್ದೇ ನೀತಿ ಜಾರಿಗೆ ಮುಂದಾಗಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಅಜಯ್‌ ಮಾಕನ್‌, ‘ಬದಲಾದ ಸಮಯದಲ್ಲಿ ಇಂಥ ದೊಡ್ಡ ಬದಲಾವಣೆ ಮಾಡಲು ಪಕ್ಷ ಮುಂದಾಗಿದೆ’ ಎಂದರು.

click me!