Constitution Day: ವಸಾಹತುಶಾಹಿ ಮನಸ್ಥಿತಿಗಳಿಂದ ದೇಶದ ಅಭಿವೃದ್ಧಿಗೆ ಅಪಾಯ: ಪ್ರಧಾನಿ ಕಳವಳ

Suvarna News   | Asianet News
Published : Nov 27, 2021, 06:51 PM IST
Constitution Day: ವಸಾಹತುಶಾಹಿ ಮನಸ್ಥಿತಿಗಳಿಂದ ದೇಶದ ಅಭಿವೃದ್ಧಿಗೆ ಅಪಾಯ: ಪ್ರಧಾನಿ ಕಳವಳ

ಸಾರಾಂಶ

ಸಂವಿಧಾನ ದಿನದ ಪ್ರಯುಕ್ತ ಸುಪ್ರೀಂಕೋರ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ, ದೇಶದೊಳಗೆ ಅಸ್ತಿತ್ವದಲ್ಲಿರೋ ವಸಾಹತುಶಾಹಿ ಮನಸ್ಥಿತಿಗಳಿಂದ ದೇಶದ ಅಭಿವೃದ್ಧಿಗೆ ಅಡ್ಡಿಯುಂಟಾಗುತ್ತಿರೋ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ನವದೆಹಲಿ (ನ.27): ಅಭಿವ್ಯಕ್ತಿ ಸ್ವಾತಂತ್ರ್ಯ(freedom of expression) ಸೇರಿದಂತೆ ಭಾರತದ ಪ್ರಗತಿ (Growth) ಕಥೆಗೆ ವಸಾಹತುಶಾಹಿ(colonial ) ಮನಸ್ಥಿತಿಗಳು(mindset ) ಅಡ್ಡಿಪಡಿಸುತ್ತಿವೆ ಎಂದು ಪ್ರಧಾನಿ(Prime Minister) ನರೇಂದ್ರ ಮೋದಿ (Narendra Modi) ಹೇಳಿದರು. ನವದೆಹಲಿಯಲ್ಲಿ ಸುಪ್ರೀಂ ಕೋರ್ಟ್ (Supreme Court) ಆಯೋಜಿಸಿದ್ದ ಸಂವಿಧಾನ ದಿನದಲ್ಲಿ ಮಾತನಾಡಿದ ಪ್ರಧಾನಿ, ಭಾರತದಲ್ಲಿವಸಾಹತುಶಾಹಿ ಆಡಳಿತ ಹಲವು ವರ್ಷಗಳ ಹಿಂದೆಯೇ ಕೊನೆಗೊಂಡಿದ್ದರೂ ವಸಾಹತುಶಾಹಿ ಮನಸ್ಥಿತಿಗಳು ಮಾತ್ರ ಇನ್ನೂಅಸ್ತಿತ್ವದಲ್ಲಿವೆ ಎಂದರು. ಈ ಶಕ್ತಿಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರೋ ದೇಶದ ಪ್ರಗತಿಗೆ ಮಾರಕವಾಗಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. 

ಹೊಸ ಕೋವಿಡ್ ರೂಪಾಂತರಿ ತಳಿ ಆತಂಕ, ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ!

'ಪರಿಸರಕ್ಕೆ ಸಂಬಂಧಿಸಿದ ಪ್ಯಾರೀಸ್ ಒಪ್ಪಂದದ ಗುರಿಗಳನ್ನು ಮುಟ್ಟಲು ಪ್ರಯತ್ನಿಸುತ್ತಿರೋ ಏಕೈಕ ರಾಷ್ಟ್ರ ಭಾರತವಾಗಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಒತ್ತಡಗಳನ್ನು ಹೇರಲಾಗುತ್ತಿದೆ. ಇದಕ್ಕೆಲ್ಲ ವಸಾಹತುಶಾಹಿ ಮನಸ್ಥಿತಿಯೇ ಕಾರಣ' ಎಂದು ಪ್ರಧಾನಿ ಹೇಳಿದರು. ನಮ್ಮ ದೇಶದೊಳಗೆ ಕೂಡ ಇಂಥ ಕೆಲವು ಮನಸ್ಥಿತಿಗಳು ಅಸ್ತಿತ್ವದಲ್ಲಿದ್ದು, ದೇಶದ ಬೆಳವಣಿಗೆಗೆ ನಿರಂತರ ಅಡ್ಡಿಯುಂಟು ಮಾಡುತ್ತಿರೋದು ನಿಜಕ್ಕೂ ದುರಾದೃಷ್ಟಕರ ಎಂದರು. ಸರ್ಕಾರ ಹಾಗೂ ನ್ಯಾಯಾಂಗ ಎರಡೂ ಸಂವಿಧಾನದ ಕೂಸುಗಳಾಗಿರೋ ಕಾರಣ ಇವೆರಡೂ ಅವಳಿಗಳೆಂದರು. 

ಸರ್ಕಾರ ಸಂವಿಧಾನಕ್ಕೆ ಬದ್ಧವಾಗಿದ್ದು, ಅಭಿವೃದ್ಧಿ ವಿಷಯಕ್ಕೆ ಬಂದಾಗ ಅನೇಕ ಸಂದರ್ಭಗಳಲ್ಲಿ ನಾವು ಅದನ್ನು ನಿರೂಪಿಸಿದ್ದೇವೆ ಕೂಡ ಎಂದು ಮೋದಿ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ ಅವರು, ಆರೋಗ್ಯವಂತ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ಅತ್ಯಂತ ದೊಡ್ಡ ಅಪಾಯವೆಂದ್ರೆ ಒಂದು ಪಕ್ಷವನ್ನು ಒಂದು ಕುಟುಂಬ ತಲೆಮಾರುಗಳಿಂದ ನಿಯಂತ್ರಿಸುತ್ತ ಬಂದಿರೋದು. ಆ ಪಕ್ಷದ ಇಡೀ ವ್ಯವಸ್ಥೆ ಆ ಕುಟುಂಬದ ಕಪಿಮುಷ್ಠಿಯಲ್ಲಿದೆ ಎಂದು ಮೋದಿ ಆರೋಪಿಸಿದರು. 

ಚಿದಂಬರಂ ಪುತ್ರ ಕಾರ್ತಿಗೆ ಮತ್ತೆ ಕಂಟಕ, ಸಮನ್ಸ್ ಜಾರಿ!

ಸಂಸತ್ತಿನಲ್ಲಿ ಸಂವಿಧಾನ ದಿನ
ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಯಾವುದೇ ಹೆಸರನ್ನು ಪ್ರಸ್ತಾಪಿಸದೆ ಕುಟುಂಬ ರಾಜಕಾರಣ ಮಾಡುತ್ತಿರೋ ಪಕ್ಷಗಳನ್ನು ಟೀಕಿಸಿದರು. ಈ ಪಕ್ಷಗಳನ್ನು 'ಕುಟುಂಬಕ್ಕಾಗಿ ಪಕ್ಷ, ಕುಟುಂಬದಿಂದ ಪಕ್ಷ' ಎಂದು ಲೇವಾಡಿ ಮಾಡಿದ ಅವರು, ಈ ಕುರಿತು ನಾನು ಇದಕ್ಕಿಂತ ಜಾಸ್ತಿ ಏನೂ ಹೇಳೋದಿಲ್ಲ ಎಂದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಭಾರತೀಯ ಕಮ್ಯುನಿಸ್ಟ್ ಪಕ್ಷ(ಎಂ) ಹಾಗೂ ಭಾರತೀಯ ಕಮ್ಯುನಿಸ್ಟ್ ಪಕ್ಷ ಸೇರಿದಂತೆ 15 ಪಕ್ಷಗಳು ಪಾಲ್ಗೊಂಡಿರಲಿಲ್ಲ. ಲೋಕಸಭಾ ಕಾರ್ಯದರ್ಶಿ ಹಾಗೂ ಸ್ಪೀಕರ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಎನ್ ಡಿಎ ಮೈತ್ರಿಕೂಟದ ಮಿತ್ರ ಪಕ್ಷಗಳಾದ ಬಿಜು ಜನತಾ ದಳ, ವೈಎಸ್ಆರ್ ಕಾಂಗ್ರೆಸ್, ತೆಲಂಗಣ ರಾಷ್ಟ್ರ ಸಮಿತಿ, ಬಹುಜನ ಸಮಾಜ ಪಾರ್ಟಿ ಹಾಗೂ ತೆಲುಗು ದೇಶಂ ಪಾರ್ಟಿಗಳು ಭಾಗವಹಿಸಿದ್ದವು. ಪ್ರತಿಪಕ್ಷಗಳ ಗೈರುಹಾಜರಿ ಬಗ್ಗೆ ಪ್ರಸ್ತಾಪಿಸಿದ ಮೋದಿ 'ಈ ಕಾರ್ಯಕ್ರಮವನ್ನು ಸರ್ಕಾರ ಅಥವಾ ಯಾವುದೇ ರಾಜಕೀಯ ಪಕ್ಷ ಅಥವಾ ಪ್ರಧಾನಿ ಆಯೋಜಿಸಿಲ್ಲ. ಸ್ಪೀಕರ್ ಸಂಸತ್ತಿನ ಹೆಮ್ಮೆ. ಈ ಹುದ್ದೆಗೆ ಘನತೆಯಿದೆ. ಇದು ಅಂಬೇಡ್ಕರ್ ಅವರ  ಘನತೆ ಪ್ರಶ್ನೆ, ಸಂವಿಧಾನದ  ಘನತೆ ಪ್ರಶ್ನೆ ಎಂದರು. ಅಂಬೇಡ್ಕರ್ ಅವರ 125ನೇ ಜನ್ಮವಾರ್ಷಿಕೋತ್ಸವದ ಸಂದರ್ಭದಲ್ಲಿ ಅಂಬೇಡ್ಕರ್ ಅವರು ದೇಶಕ್ಕೆ ನೀಡಿರೋ ಕೊಡುಗೆಗಿಂತ ಶುಭವಾದ ಸಂದರ್ಭ ಬೇರೆ ಯಾವುದೂ ಇಲ್ಲ ಎಂಬುದು ನಮಗೆಲ್ಲ ಅರ್ಥವಾಗಿದೆ. ನಾವೆಲ್ಲರೂ ಅವರ ಕೊಡುಗೆಯನ್ನು ಸ್ಮೃತಿ ಗ್ರಂಥದ ಮಾದರಿಯಲ್ಲಿ ನೆನಪಿಟ್ಟುಕೊಳ್ಳಬೇಕು ಎಂದರು. ಅಂಬೇಡ್ಕರ್, ರಾಜೇಂದ್ರ ಪ್ರಸಾದ್, ಮಹಾತ್ಮ ಗಾಂಧಿ ಸೇರಿದಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಯಾರೆಲ್ಲ ತ್ಯಾಗ ಮಾಡಿದರು ಅವರಿಗೆ ನಮನ ಸಲ್ಲಿಸೋ ನಿಟ್ಟಿನಲ್ಲಿ ಸಂವಿಧಾನ ದಿನವನ್ನು ಹುಟ್ಟು ಹಾಕಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ದು ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಉಪಸ್ಥಿತರಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ