Farmers Protest:ಸಂಸತ್ ಚಲೋ ಟ್ರಾಕ್ಟರ್ ರ‍್ಯಾಲಿ ಮುಂದೂಡಿಕೆ, ಹೋರಾಟ ನಿರಂತರ ಎಂದ ರೈತ ಸಂಘಟನೆ!

By Suvarna NewsFirst Published Nov 27, 2021, 6:19 PM IST
Highlights
  • ಕೃಷಿ ಮಸೂದೆ ಹಿಂಪಡೆದರೂ ಹೊಸ ಬೇಡಿಕೆ ಮುಂದಿಟ್ಟು ರೈತರ ಹೋರಾಟ
  • ನ. 29 ರ ಸಂಸತ್ ಚಲೋ ಟ್ರಾಕ್ಟರ್  ರ‍್ಯಾಲಿ ಮುಂದೂಡಿದ ರೈತ ಸಂಘಟನೆ
  • ಹೋರಾಟ ನಿಲ್ಲಿಸುವುದಿಲ್ಲ ಎಂದ ಸಂಯುಕ್ಕ ಕಿಸಾನ್ ಮೋರ್ಚಾ

ದೆಹಲಿ(ನ.27):   ಕೇಂದ್ರ ಸರ್ಕಾರ ವಿವಾದಿಕ ಮೂರು ಕೃಷಿ ಕಾಯ್ದೆಗಳನ್ನು(Farm Laws) ಹಿಂಪಡೆದಿದೆ. ಆದರೆ ರೈತ ಸಂಘಟನೆಗಳು ಕಳೆದೊಂದು ವರ್ಷದಿಂದ ಮಾಡಿಕೊಂಡು ಬರುತ್ತಿರುವ ಹೋರಾಟ(Farmers Protest) ಅಂತ್ಯಗೊಂಡಿಲ್ಲ.  ಕೃಷಿ ಕಾಯ್ದೆ ವಿರೋಧಿ ನವೆಂಬರ್ 29 ರಂದು ಸಂಸತ್ ಚಲೋ ಟ್ರಾಕ್ಟರ್  ರ‍್ಯಾಲಿ(Parliament march tractor rally) ಹಮ್ಮಿಕೊಳ್ಳಲಾಗಿತ್ತು. ಇದೀಗ ಈ ಹೋರಾಟವನ್ನು ಸಂಯುಕ್ತ ಕಿಸಾನ್ ಮೋರ್ಚಾ ಮುಂದೂಡಿದೆ. ಆದರೆ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದೆ.

ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಚಳಿಗಾಲದ(Winter session) ಅಧಿವೇಶನಕ್ಕೆ ಮುತ್ತಿಗೆ ಹಾಕಲು ರೈತರು ಬಹುದೊಡ್ಡ ಟ್ರಾಕ್ಟರ್  ರ‍್ಯಾಲಿ ಹಮ್ಮಿಕೊಂಡಿತ್ತು. ಆದರೆ ಕೇಂದ್ರ ಸರ್ಕಾರ ದಿಢೀರ್ ಕೃಷಿ ಮಸೂದೆ ವಾಪಸ್ ಪಡೆದುಕೊಂಡಿತ್ತು. ಇದರ ಪರಿಣಾಮ ಇದೀಗ ನವೆಂಬರ್ 29ರ ಟ್ರಾಕ್ಟರ್  ರ‍್ಯಾಲಿ ಮುಂದೂಡಿಕೆ ಮಾಡಿದೆ. ಆದರೆ ಹೊಸ ಬೇಡಿಕೆ ಮುಂದಿಟ್ಟುಕೊಂಡು ರೈತರು ಹೋರಾಟ ಮುಂದುವರಿಸಿದ್ದಾರೆ. ಕೇಂದ್ರ ಸರ್ಕಾರ ರೈತರ ಎಲ್ಲಾ ಬೇಡಿಕೆ ಈಡೇರಿಸುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಸಂಘಟನೆಗಳು ಎಚ್ಚರಿಸಿದೆ.

Farm Laws Repeal: ಕೃಷಿ ಕಾಯ್ದೆ ರದ್ದು ನಿರ್ಧಾರ ಸರಿ, ಮೋದಿ ಸರ್ಕಾರ ರೈತಪರ : ಸಮೀಕ್ಷೆ!

ಕೇಂದ್ರ ಸರ್ಕಾರದ ಮುಂದೆ ರೈತ ಸಂಘಟನೆಗಳು ಹೊಸ 6 ಬೇಡಿಕೆ ಮುಂದಿಟ್ಟಿದೆ. ಟ್ರಾಕ್ಟರ್ ರ್ಯಾಲಿ, ರೈಲು ತಡೆ, ರಸ್ತೆ ತಡೆ, ಪೋಲೀಸರ ಮೇಲೆ ಹಲ್ಲೆ ಸೇರಿದಂತೆ ರೈತ ಪ್ರತಿಭಟನೆ ವೇಳೆ ರೈತ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿದೆ. ಇನ್ನು ರೈತರು ಬೆಳೆ ಕೊಯ್ಲಿನ ಬಳಿಕ ಉಳಿದಿರುವ ಕಳೆಗೆ ಬೆಂಕಿ ಹಚ್ಚುತ್ತಾರೆ. ಪಂಜಾಬ್ ಹಾಗೂ ಹರ್ಯಾಣ ಭಾಗದ ರೈತರ ಈ ಕ್ರಮ ದೆಹಲಿ ವಾಯುಮಾಲಿನ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ರೈತರು ಕಳೆಗೆ ಬೆಂಕಿ ಹಚ್ಚುವುದು ಅಪರಾಧ ಎಂದು ಕೇಂದ್ರ ಸರ್ಕಾರ ಕಾನೂನು ತಂದಿತ್ತು. ಈ ಕಾನೂನು ರದ್ದುಗೊಳಿಸುವಂತೆ ರೈತರು ಆಗ್ರಹಿಸಿದ್ದಾರೆ. ಈ ಕುರಿತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈತರ ಬೇಡಿಕೆಗಳಲ್ಲಿ ಒಂದಾದ ಹುಲ್ಲು ಸುಡುವುದನ್ನು ಕೇಂದ್ರವು ಅಪರಾಧವಲ್ಲ ಪರಿಗಣಿಸಿದೆ ಎಂದಿದ್ದರು. ಆದರೆ ರೈತ ಸಂಘಟನೆಗಳು ಬರಿ ಮಾತಿನಿಂದ ಹೇಳಿದರೆ ಸಾಲದು ಲಿಖಿತ ರೂಪದಲ್ಲಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದೆ.

ಬೆಳೆಗೆ ಕನಿಷ್ಛ ಬೆಂಬಲ ಬೆಲೆ ಘೋಷಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇನ್ನು ಉತ್ತರ ಪ್ರದೇಶದ ಲಂಖೀಪುರ ಖೇರಿಯಲ್ಲಿ ನಡೆದ ಘಟನೆಗೆ ಕಾರಣರಾದ ಕೇಂದ್ರ ಸಚಿವ ಅಜಯ್ ಮಿಶ್ರಾ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.  ರೈತ ಪ್ರತಿಭಟನೆಯಲ್ಲಿ 700 ರೈತರು ಸಾವಿಗೀಡಾಗಿದ್ದಾರೆ. ಇವರಿಗೆ ಪರಿಹಾರ ನೀಡಬೇಕು ಎಂದು ರೈತರು ಬೇಡಿಕೆ ಮುಂದಿಟ್ಟಿದ್ದಾರೆ.ಈ ಪ್ರಮುಖ 6 ಬೇಡಿಕೆ ಈಡೇರುವವರೆಗೆ ರೈತ ಹೋರಾಟ ನಿಲ್ಲುವುದಿಲ್ಲ ಎಂದು ರೈತ ಸಂಘಟನೆಗಳು ಎಚ್ಚರಿಸಿದೆ.

Farm Laws Repeal: ಹೋರಾಟ ಸದ್ಯಕ್ಕೆ ನಿಲ್ಲಲ್ಲ : ಪ್ರಧಾನಿ ಮೋದಿಗೆ ಕಿಸಾನ್‌ ಮೋರ್ಚಾ ಬಹಿರಂಗ ಪತ್ರ!

ಕೃಷಿ ಮಸೂದೆ ಹಿಂಪಡೆದ ಪ್ರಧಾನಿ ನರೇಂದ್ರ ಮೋದಿ, ರೈತರು ಹೋರಾಟ ನಿಲ್ಲಿಸಿ ಮನೆಗೆ ತೆರಳಬೇಕು. ಹೊಸ ಬದಕು ಆರಂಭಿಸಬೇಕು ಎಂದು ಮನವಿ ಮಾಡಿದ್ದರು. ಆದರೆ ರೈತರು ಹೋರಾಟ ನಿಲ್ಲಿಸಿಲ್ಲ. ಇನ್ನು ನರೇಂದ್ರ ಸಿಂಗ್ ತೋಮರ್ ಕೂಡ ರೈತರು ಪ್ರತಿಭಟನೆ ಅಂತ್ಯಗೊಳಿಸಲು ಮನವಿ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ರೈತ ಪ್ರತಿಭಟನೆ ವರ್ಷಾಚರಣೆಗೆ ರೈತ ಸಂಘಟನೆಗಳು ಅತೀ ದೊಡ್ಡ ಪ್ಲಾನ್ ಮಾಡಿಕೊಂಡಿತ್ತು. ಭಾರತದ ಪ್ರಮಖ ನಗರ, ಜಿಲ್ಲೆ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ಮುಂದಾಗಿತ್ತು. ಈ ಮೂಲಕ ಕೇಂದ್ರ ಸರ್ಕಾರವನ್ನು ಇಕ್ಕಿಟ್ಟಿಗೆ ಸಿಲುಕಿಸಲು ಮುಂದಾಗಿತ್ತು. ಆದರೆ ರೈತ ಸಂಘಟನೆಗಳ ಪ್ಲಾನ್ ಉಲ್ಟಾ ಆಗಿದೆ. ಕೃಷಿ ಮಸೂದೆ ವಾಪಸ್ ಪಡೆಯುವ ಮೂಲಕ ಸಂಘಟನೆಗಳಿಗೆ ಕೇಂದ್ರ ಶಾಕ್ ನೀಡಿತ್ತು. ಆದರೆ ರೈತ ಸಂಘಟನೆಗಳು ರೈತ ಪ್ರತಿಭಟನೆ ವರ್ಷಾಚರಣೆ ಆಚರಿಸಿದ್ದಾರೆ. 
 

click me!