
ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಜೋಡಿಗಳ ಮೈಮರೆತ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ತಾವು ಸಾರ್ವಜನಿಕ ಪ್ರದೇಶದಲ್ಲಿದ್ದೇವೆ ಅನ್ನೋದನ್ನು ಮರೆತು ಅಸಭ್ಯವಾಗಿ ವರ್ತಿಸುತ್ತಿರುತ್ತಾರೆ. ಅದರಲ್ಲಿಯೂ ಮಹಾನಗರಗಳಲ್ಲಿ ಇಂತಹ ದೃಶ್ಯಗಳು ಅಧಿಕವಾಗಿಯೇ ಕಂಡ ಬರುತ್ತಿರುತ್ತವೆ. ಪಾರ್ಕ್, ಮೆಟ್ರೋ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಅನ್ನೋದರ ಅರಿವು ಇಲ್ಲದೇ ಇಂದಿನ ಯುವ ಜೋಡಿಗಳು ನಡೆದಿಕೊಳ್ಳುತ್ತಿರುತ್ತಾರೆ. ಇಂತಹವುದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಕಾರ್‌ನಲ್ಲಿಯೇ ಜೋಡಿ ಎಲ್ಲಾ ಕೆಲಸಗಳನ್ನು ಮುಗಿಸಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳಂತೆ ಕಾಣುವ ಇವರನ್ನು ಕಂಡು ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಆದ್ರೆ ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಬಹುತೇಕ ನೆಟ್ಟಿಗರು, ಇದು ದಹೆಲಿ ಅಥವಾ ನೊಯ್ಡಾ ಭಾಗದ ವಿಡಿಯೋ ಎಂದು ಕಮೆಂಟ್ ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋವನ್ನು ಮನೋಜ್ ಶರ್ಮಾ ಲಕ್ನೋ ಯುಪಿ ( @ManojSh28986262) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. 25ನೇ ಡಿಸೆಂಬರ್ 2024ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, 8 ಲಕ್ಷಕ್ಕೂ ಅಧಿಕ ವ್ಯೂವ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಮಹಿಳೆಯರು ಸ್ವತಂತ್ರ ಮತ್ತು ಮಾಡರ್ನ್ ಆದಾಗಿನಿಂದ ನಮ್ಮ ದೇಶದ ಸಂಸ್ಕೃತಿಯನ್ನು ಮರೆಯುತ್ತಿರೋದಕ್ಕೆ ಈ ವಿಡಿಯೋ ತಾಜಾ ಉದಾಹರಣೆಯಾಗಿದೆ ಎಂದಿದ್ದಾರೆ. ದೆಹಲಿ, ನೋಯ್ಡಾ, ಗುರುಗ್ರಾಮ ನಗರಗಳಲ್ಲಿ ಈ ರೀತಿ ಸ್ವೇಚ್ಛಾರದ ವರ್ತನೆಗಳು ಸಾಮಾನ್ಯವಾಗಿ ಕಂಡಿ ಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪುರುಷನಿಗೆ ಹೆಣ್ಣಿನ ಜೊತೆ ಸಂಬಂಧವಿದ್ದರೆ, ವೇಶ್ಯಾಗೃಹಕ್ಕೆ ಹೋದರೆ, ನಾಲ್ಕೈದು ಜನ ಗೆಳತಿಯರಿದ್ದರೆ ಯಾರು ಏನು ಅನ್ನೋದಿಲ್ಲ. ಅದೇ ಈ ಕೆಲಸವನ್ನು ಮಹಿಳೆಯರು ಮಾಡಿದ್ರೆ ಸಂಸ್ಕೃತಿಯನ್ನು ಗುತ್ತಿಗೆ ಪಡೆದುಕೊಂಡವರು ಓಡೋಡಿ ಬರುತ್ತಾರೆ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಈ ರೀತಿಯ ಬೇರೆಯವರ ಖಾಸಗಿ ವಿಡಿಯೋ ಹರಿಬಿಡೋದು ತಪ್ಪು ಅಂದ್ರೆ ಕೆಲವರು ಖಾಸಗಿ ಕೆಲಸವನ್ನು ನಾಲ್ಕು ಗೋಡೆಯ ಮಧ್ಯೆ ಮಾಡಬೇಕೇ ಹೊರತು ಪಬ್ಲಿಕ್ ಪ್ಲೇಸ್‌ನಲ್ಲಿ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ರಸ್ತೆಯಲ್ಲಿ ಕನ್ನಡ ಮಾತಾಡಿದ ಜಮ್ಮು-ಕಾಶ್ಮೀರದ ಹುಡುಗಿ! ಹಿಂದಿ ಭಾಷಿಕರಿಗೆ ಚಳಿ ಬಿಡಿಸಿದ್ದೇ ಅದ್ಭುತ!
ವೈರಲ್ ವಿಡಿಯೋದಲ್ಲಿ ಏನಿದೆ?
ಕಾರ್ ಒಂದು ರಸ್ತೆ ಬದಿ ಪಾರ್ಕ್ ಮಾಡಲಾಗಿರುತ್ತದೆ. ಹಿಂಬದಿಯ ಡೋರ್‌ನಿಂದ ಯುವತಿ ಹೊರ ಬರುತ್ತಾಳೆ. ಕಾರ್ ಪಕ್ಕದಲ್ಲಿಯೇ ನಿಂತಿದ್ದ ಗೆಳತಿಯೊಂದಿಗೆ ಮಾತನಾಡುತ್ತಾ ತನ್ನ ಡ್ರೆಸ್ ಸರಿ ಮಾಡಿಕೊಳ್ಳುತ್ತಿರುತ್ತಾರೆ. ಕಾರ್‌ನಲ್ಲಿದ್ದ ಯುವಕನೋರ್ವ ಬಟ್ಟೆ ಹಾಕಿಕೊಳ್ಳುತ್ತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದು. ಈ ವಿಡಿಯೋ ಪೋಸ್ಟ್ ಮಾಡಿಕೊಂಡಿರುವ ಮನೋಜ್ ಶರ್ಮಾ, ನೋಡಿ, ಇಲ್ಲಿ ಒಬ್ಬ ಹುಡುಗಿ ಕಾರಿನಿಂದ ಇಳಿದು ಹೊರಗೆ ಬಂದು ಸ್ನೇಹಿತೆಯೊಂದಿಗೆ ಮಾತನಾಡುತ್ತಿರುವುದನ್ನು ನೋಡಬಹುದು, ಕೆಲಸ ಹೇಗೆ ನಡೆಯಿತು ಎಂದು ಕೇಳುತ್ತಾಳೆ. ಕಾರಿನೊಳಗಿರೋ ಯುವಕ ಬಟ್ಟೆ ಹಾಕಿಕೊಳ್ಳುತ್ತಿದ್ದಾನೆ.
ಈ ಘಟನೆ ದೆಹಲಿಯಲ್ಲೋ ಅಥವಾ ದೆಹಲಿಯ ಸುತ್ತಮುತ್ತಲೋ ನಡೆದಿರಬಹುದು ಎಂದು ಮನೋಜ್ ಶರ್ಮಾ ಅನುಮಾನ ವ್ಯಕ್ತಪಡಿಸಿದ್ದಾನೆ. ದೊಡ್ಡ ನಗರಗಳ ಗ್ಲಾಮರ್‌ನಲ್ಲಿ ಬೆಳೆದು, ಕ್ಲಬ್ ಪಾರ್ಟಿಗಳು, ಪಬ್‌ಗಳು ಮತ್ತು ರಾತ್ರಿಯಲ್ಲಿ ಸ್ನೇಹಿತರ ಜೊತೆ ಚೆಲ್ಲಾಟವಾಡುವ ಮಹಿಳೆಯರು, ಹೆಚ್ಚಿನ ಸಂಬಂಧಗಳನ್ನು ಹೊಂದುವುದು ಜೀವನಶೈಲಿಯ ಭಾಗವಾಗಿದೆ. ಅಂತಹ ಮಹಿಳೆಯರನ್ನು ನಂಬುವುದು ಅಥವಾ ಅವರಿಂದ ನಿಷ್ಠೆಯನ್ನು ನಿರೀಕ್ಷಿಸುವುದು ಬರಿಯ ಮೂರ್ಖತನವಲ್ಲದೆ ಮತ್ತೇನಲ್ಲ ಎಂದು ಮನೋಜ್ ಶರ್ಮಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ವಲ್‌ರಸ್‌ಗೆ ಬಿಗ್ ಬರ್ತ್‌ಡೇ ಬ್ಯಾಶ್: ಚೀನಾದ ಝೂ ವೀಡಿಯೋ ಸಖತ್ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ