
ಗುಜರಾತ್(ಜೂ.24) ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಟೆಕ್ಕಿ ಅಂಡರ್‌ಪಾಸ್ ನೀರಿನಲ್ಲಿ ಸಿಲುಕಿ ಮೃತಪಟ್ಟ ಘಟನೆ ಆತಂಕ ತಂದಿತ್ತು. ಇದೀಗ ಇದೇ ರೀತಿ ಭಾರಿ ಮಳೆಗೆ ಕಾಲೇಜು ಬಸ್ ಅಂಡರ್ ಪಾಸ್‌ನಲ್ಲಿ ಸಿಲುಕಿದ ಘಟನೆ ಗುಜರಾತ್‌ನ ನಡಿಯಾಡ್‌ನಲ್ಲಿ ನಡೆದಿದೆ. ತಕ್ಷಣವೇ ಸ್ಥಳೀಯರು ಕಾರ್ಯಪ್ರವೃತ್ತರಾಗಿ ಬಸ್ ಕಿಟಕಿ ಮೂಲಕ ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ವಿದ್ಯಾರ್ಥಿಗಳನ್ನು ತುಂಬಿದ್ದ ಬಸ್ ಸಂಚರಿಸುತ್ತಿದ್ದ ದಾರಿಯಲ್ಲಿ ಅಂಡರ್ ಪಾಸ್ ಏಕಾಏಕಿ ನೀರಿನಿಂದ ತುಂಬಿದೆ. ಇದರಿಂದ ಬಸ್ ನೀರಿನಲ್ಲಿ ಸಿಲುಕಿದೆ. ಮುಂದೆಕ್ಕೆ ಚಲಿಸದೆ ಬಸ್ ಕೆಟ್ಟು ನಿಂತಿದೆ. ಇತ್ತ ನೀರು ಬಸ್ಸಿನೊಳ ಪ್ರವೇಶಿಸುತ್ತಿದ್ದಂತೆ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಚೀರಾಡಿದ್ದಾರೆ. ತಕ್ಷಣೇ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಬಸ್ ಕಿಟಕಿ ಮೂಲಕ ವಿದ್ಯಾರ್ಥಿಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ.
ರಾಜಸ್ಥಾನದಲ್ಲಿ ಪ್ರವಾಹ, ಉತ್ತರ ಗುಜರಾತ್‌ನಲ್ಲಿ ಭಾರಿ ಮಳೆ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಜರಾತ್‌ನ ಹಲವು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಬಿಪೊರ್‌ಜಾಯ್ ಚಂಡಮಾರುತದಿಂದ ಗುಜರಾತ್‌ನ ಹಲವು ಕರಾವಳಿ ಭಾಗದಲ್ಲಿ ಭೀಕರ ಮಳೆಯಾಗುತ್ತಿದೆ. ಇದರಿಂದ ಜನಜೀವನವೂ ಅಸ್ತವ್ಯಸ್ತಗೊಂಡಿದೆ. ಇದೇ ಮಳೆಗೆ ವಿದ್ಯಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಬಸ್ ಮಳೆ ನೀರಿನಲ್ಲಿ ಸಿಲುಕಿ ಆತಂಕ ಸೃಷ್ಟಿಸಿತ್ತು.
ಇತ್ತೀಚೆಗೆ ಬೆಂಗಳೂರಿನಲ್ಲಿ ಇದೇ ರೀತಿ ನಡೆದ ಘಟನೆಯಲ್ಲಿ ಟೆಕ್ಕಿ ಮೃತಪಟ್ಟಿದ್ದಳು. ವಿಧಾನಸೌಧದ ಕೂಗಳತೆ ದೂರದಲ್ಲಿರುವ ಕೆ.ಆರ್.ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಕಾರು ಮುಳುಗಿ ಅದರೊಳಗಡೆ ಕುಳಿತಿದ್ದ ಆಂಧ್ರದ ಯುವತಿಯೊಬ್ಬಳು ಉಸಿರುಗಟ್ಟಿಮೃತಪಟ್ಟ ಘಟನೆ ನಡೆದಿತ್ತು. ಯುವತಿಯನ್ನು ಇಸ್ಫೋಸಿಸ್ ಉದ್ಯೋಗಿ ಭಾನುರೇಖಾ (23) ಈ ಅವಘಡದಲ್ಲಿ ಮೃತಪಟ್ಟಿದ್ದಳುು. ಭಾರೀ ಮಳೆಗೆ ಕೆ.ಆರ್.ಸರ್ಕಲ್ ಬಳಿಯ ಅಂಡರ್ ಪಾಸ್‌ನಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಈ ನೀರಿನಲ್ಲಿಯೇ ಚಾಲಕ ಹರೀಶ್‌ನ ಕಾರು ಚಲಾಯಿಸಲು ಮುಂದಾದಾಗ ಕಾರಿನೊಳಗೆ ನೀರು ತುಂಬಿ ಮುಳುಗಿತ್ತು. ಈ ವೇಳೆ ಕಾರಿನೊಳಗೆ ಇದ್ದ ಏಳು ಮಂದಿ ಪೈಕಿ ಆರು ಮಂದಿಯನ್ನು ರಕ್ಷಿಸಲಾಗಿತ್ತು. ಆಂಧ್ರಪ್ರದೇಶ ಮೂಲ ಟೆಕ್ಕಿ ಭಾನುರೇಖಾ(24) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
ಬಿಪೊರ್‌ಜೊಯ್ ಸವಾಲು ಗೆದ್ದ ಗುಜರಾತ್: ಅಪಾಯ ತಪ್ಪಿಸಿಕೊಂಡಿದ್ದು ಹೀಗೆ..
ಭಾನುರೇಖಾ ಎಲೆಕ್ಟ್ರಾನಿಕ್ ಸಿಟಿಯ ಪ್ರಗತಿಗರದಲ್ಲಿ ನೆಲೆಸಿದ್ದರು. ಆಂಧ್ರಪ್ರದೇಶದಿಂದ ಬಂದಿದ್ದ ಕುಟುಂಬ ಸದಸ್ಯರಿಗೆ ಬೆಂಗಳೂರು ಸುತ್ತಾಡಿಸಲು ಖಾಸಗಿ ಟ್ರಾವೆಲ್ಸ್‌ನಲ್ಲಿ ಕಾರು ಬುಕ್ ಮಾಡಿದ್ದರು. ಕಬ್ಬನ್ ಪಾರ್ಕ್ಗೆ ಹೋಗಿ ವಾಪಸ್ ಎಲೆಕ್ಟ್ರಾನಿಕ್ ಸಿಟಿಯ ಮನೆಗೆ ಕಡೆಗೆ ಹೋಗುವಾಗ ಕಾರು ಚಾಲಕ ಕೆ.ಆರ್.ಸರ್ಕಲ್ ಬಳಿಯ ಅಂಡರ್‌ಪಾಸ್‌ನಲ್ಲಿ ಕಾರು ಚಲಾಯಿಸಿದಾಗ ಕಾರು ನೀರಿನಲ್ಲಿ ಮುಳುಗಿತ್ತು. ಈ ವೇಳೆ ಈ ದುರಂತ ನಡೆದಿತ್ತು.
ಇದೀಗ ಗುಜರಾತ್‌ನಲ್ಲಿ ಬಸ್ ಸಿಲುಕಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಮಳೆ ಕಡಿಮೆಯಾದ ಕಾರಣ ಹಾಗೂ ತಕ್ಷಣವೇ ಸ್ಥಳೀಯರ ನೆರವಿನಿಂದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿತ್ತು. ಇದೀಗ ಗುಜರಾತ್‌ನಲ್ಲಿ ಅಂಡರ್ ಪಾಸ್ ಪರಿಸ್ಥಿಗಳ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಭಾರಿ ಮಳೆ ಸಂದರ್ಭದಲ್ಲಿ ಅಂಡರ್ ಪಾಸ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನಿರ್ಬಂಧಿಸಲು ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ