ಕಿರುಕುಳ ನೀಡಿದ ವ್ಯಕ್ತಿಗೆ ನಡುರಸ್ತೆಯಲ್ಲಿಯೇ ಬೆಲ್ಟ್‌ನಲ್ಲಿ ಬಾರಿಸಿದ ಡೇರ್‌ಡೆವಿಲ್‌ ಅಕ್ಕ-ತಂಗಿ!

Published : Jun 24, 2023, 04:07 PM IST
ಕಿರುಕುಳ ನೀಡಿದ ವ್ಯಕ್ತಿಗೆ ನಡುರಸ್ತೆಯಲ್ಲಿಯೇ ಬೆಲ್ಟ್‌ನಲ್ಲಿ ಬಾರಿಸಿದ ಡೇರ್‌ಡೆವಿಲ್‌ ಅಕ್ಕ-ತಂಗಿ!

ಸಾರಾಂಶ

ಗುಜರಾತ್‌ನ ಅಹಮದಾಬಾದ್‌ನಲ್ಲಿ ವ್ಯಕ್ತಿಯೊಬ್ಬ ನಡುರಸ್ತೆಯಲ್ಲಿ ಶಾಲಾ ಬಾಲಕಿಗೆ ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದ. ಅಕ್ಕನೊಂದೊಗೆ ಸೇರಿ ಆಕೆ  ಬೆಲ್ಟ್‌ನಲ್ಲಿ ಹೊಡೆದು ಥಳಿಸಿದ ಘಟನೆ ನಡೆದಿದೆ.  

ನವದೆಹಲಿ (ಜೂ.24): ಗುಜರಾತ್‌ನ ಅಹಮದಾಬಾದ್‌ನಲ್ಲಿ ಹೆಣ್ಣುಮಕ್ಕಳಿಬ್ಬರ ಶೌರ್ಯದ ಘಟನೆ ವರದಿಯಾಗಿದೆ. 17 ವರ್ಷದ ಬಾಲಕಿ ಹಾಗೂ ಆಕೆಯ 19 ವರ್ಷದ ಅಕ್ಕ ಸೇರಿಕೊಂಡು, ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯೊಬ್ಬನಿಗೆ ನಡುರಸ್ತೆಯಲ್ಲಿಯೇ ಶಾಲೆಯ ಬೆಲ್ಟ್‌ ಬಿಚ್ಚಿಕೊಂಡು ಬಾರಿಸಿದ ಘಟನೆ ನಡೆದಿದೆ. ಆರೋಪಿಯು ಶಾಲೆಗೆ ಹೋಗುವಾಗ ಕಿರಿಯ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಮಾಹಿತಿ ಸಿಕ್ಕಿತ್ತು. ಅದರ ಬೆನ್ನಲ್ಲಿಯೇ ಸಿಟ್ಟಿಗೆದ್ದಆಕೆ ತನ್ನ ಅಕ್ಕನ ಜೊತೆ ಸೇರಿಕೊಂಡು ನಡುರಸ್ತೆಯಲ್ಲಿಯೇ ಆತನನ್ನು ನೆಲಕ್ಕೆ ಉರುಳಿಸಿ, ತಾವೇ  ಧರಿಸಿದ್ದ ಬೆಲ್ಟ್‌ಅನ್ನು ಬಿಚ್ಚಿ ಬಾರಿಸಿದ್ದಾರೆ. ಈ ವೇಳೆ ಇಬ್ಬರು ಸಹೋದರಿಯರಿಗೆ ಶಾಲೆಯ ಇತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೂಡ ಕೈಜೋಡಿಸಿದ್ದಾರೆ. ಆ ಮೂಲಕ ದೌರ್ಜನ್ಯ ನಡೆಸಿದ ಆರೋಪಿಯನ್ನು ಮನಸೋಇಚ್ಛೆ ಥಳಿಸಿದ್ದಾರೆ. ಆತ ನೋವಿನಿಂದ ನರುಳುತ್ತಿರುವುದು ಹಾಗೂ ಅವಮಾನದಿಂದ ಮುಖಮುಚ್ಚಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡ ಬೆನ್ನಲ್ಲಿಯೇ ಇದು ವೈರಲ್‌ ಆಗಿದೆ.

ವರದಿಯ ಪ್ರಕಾರ, 17 ವರ್ಷದ ಶಾಲಾ ಬಾಲಕಿ, ಶಾಲೆಗೆ ಸೈಕಲ್‌ನಲ್ಲಿ ಹೋಗುತ್ತಿರುವಾಗ, ಆರೋಪಿಯಾಗಿರುವ ವಿಜಯ್‌ ಸರ್ಕಾಟೆ ಎದುರಾಗಿದ್ದಾನೆ. ಗುರುವಾರ ಬೆಳಗ್ಗೆ 6.45ರ ಸುಮಾರಿಗೆ ಬಾಲಕಿಗೆ ಎದುರಾದ ವಿಜಯ್‌ ಸರ್ಕಾಟೆ, ಒತ್ತಾಯಪೂರ್ವಕವಾಗಿ ಆಕೆಯ ಕೈ ಹಿಡಿದಿದ್ದ. ಅದಲ್ಲದೆ, ಆಕೆಗೆ ಗಿಫ್ಟ್‌ ನೀಡುವ ಪ್ರಯತ್ನವನ್ನೂ ಮಾಡಿದ್ದ. ಇದಕ್ಕೆ ಆಕೆ ನಿರಾಕರಿಸಿದಾಗ, ಗಿಫ್ಟ್‌ಅನ್ನು ಆಕೆಯ ಶಾಲೆಯ ಬ್ಯಾಗ್‌ನಲ್ಲಿ ಇರಿಸಿದ್ದಲ್ಲದೆ, ಕಿಸ್‌ ನೀಡಿ, ದೌರ್ಜನ್ಯ ಎಸಗಿವ ಪ್ರಯತ್ನವನ್ನೂ ಮಾಡಿದ್ದ. ಆ ದಿನ ಮನೆಗೆ ಬಂದ ಆಕೆ ತನ್ನ ತಾಯಿಗೆ ಆಗಿರುವ ಎಲ್ಲಾ ವಿಚಾರ ತಿಳಿಸಿದ್ದು, ಶಾಲೆಗೆ ಹೋಗುವಾಗ ಆಗುವ ಸಮಸ್ಯೆ ಬಗ್ಗೆ ತಿಳಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ತಾಯಿ, ನ್ಯಾಯ ಸಿಗಬೇಕು ಎನ್ನುವ ಕಾರಣಕ್ಕೆ ಹಿರಿಯ ಪುತ್ರಿಗೆ ಈ ವಿಷಯ ತಿಳಿಸಿ, ಆತನಿಗೆ ಬುದ್ಧಿ ಕಲಿಸುವಂತೆ ಹೇಳಿದ್ದಳು.

ಆರೋಪಿಗೆ ಬೆಂಡೆತ್ತಿದ್ದ ಧೀರ ಸಹೋದರಿಯರು: ವಿಜಯ್‌ ಸರ್ಕಾಟೆ ಎಂದಿನಂತೆ ಶುಕ್ರವಾರವೂ ಬಾಲಕಿಯ ದಾರಿಗೆ ಅಡ್ಡ ಬಂದಿದ್ದಾನೆ. ಆಕೆಯ ಕೈ ಹಿಡಿದು ಎಳೆದಾಡಿದ್ದಾನೆ. ಈ ವೇಳೆ ಪಕ್ಕದಲ್ಲಿಯೇ ನಿಂತು ಇದೆಲ್ಲವನ್ನು ನೋಡುತ್ತಿದ್ದ ಅಕ್ಕ ಮಧ್ಯಪ್ರವೇಶಿಸಿದ್ದಾಳೆ. ಆತನನ್ನು ಹಿಡಿದ ಆಕೆ ನೆಲಕ್ಕೆ ದೂಡಿದ್ದಾಳೆ. ಅದರ ಬೆನ್ನಿಗೆ 17 ವರ್ಷದ ಶಾಲಾ ಬಾಲಕಿ ತನ್ನ ಬೆಲ್ಟ್‌ ಬಿಚ್ಚಿ ಆತನಿಗೆ ಬಾರಿಸಲು ಆರಂಭಿಸಿದ್ದಾರೆ. ಅವರ ಶಾಲೆಯ ಇತರ ವಿದ್ಯಾರ್ಥಿಗಳು ಮತ್ತು ದಾರಿಹೋಕರು ಸೇರಿಕೊಂಡು ಆತನನ್ನು ಥಳಿಸಿದ್ದಾರೆ. ಬಾಲಕಿಯ ಪೋಷಕರು ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿ ಸರ್ಕಾಟೆ ವಿರುದ್ಧ ದೂರು ದಾಖಲಿಸಿದ್ದಾರೆ.


KSRTC ಬಸ್‌ನಲ್ಲಿ ನಟಿ ಮುಂದೆ ಹಸ್ತಮೈಥುನ ಮಾಡ್ಕೊಂಡ ಯುವಕನಿಗೆ ಜೈಲಿನ ಬಳಿ ಅದ್ಧೂರಿ ಸ್ವಾಗತ!

ಘಟನೆಯ ಮಾಹಿತಿ ನೀಡಿದ ಪೊಲೀಸ್‌: ಕಗ್ಡಾಪಿತ್ ಪೊಲೀಸರಿಗೆ ಸಲ್ಲಿಸಿದ ಎಫ್‌ಐಆರ್ ಪ್ರಕಾರ, ಶಾಲೆಗೆ ಹೋಗಲು ತನ್ನಿಬ್ಬರು ಹೆಣ್ಣು ಮಕ್ಕಳು ತೆರಳಿದ ಕೆಲವೇ ಹೊತ್ತಿನಲ್ಲಿ ಹಿರಿಯ ಮಗಳು ಕರೆ ಮಾಡಿ, ಆಗಿರುವ ಘಟನೆಯ ಬಗ್ಗೆ ತಿಳಿಸಿದ್ದಾಳೆ. ತಾವೇ ಆತನಿಗೆ ಪಾಠ ಕಲಿಸಿದ್ದಾಗಿ ತಿಳಿಸಿದ್ದರು. ತಂಗಿಯನ್ನು ಹಿಂಬಾಲಿಸುತ್ತಿದ್ದ ಆತನಿಗೆ ಇಬ್ಬರೂ ಸೇರಿ ಥಳಿಸಿರುವುದಾಗಿ ಹೇಳಿದ್ದರು ಎಂದು ಇಬ್ಬರೂ ಬಾಲಕಿಯರ ತಾಯಿ ತಿಳಿಸಿದ್ದಾರೆ. ಭುಲಾಭಾಯಿ ಪಾರ್ಕ್ ಬಸ್ ನಿಲ್ದಾಣದಲ್ಲಿನ ಘಟನಾ ಸ್ಥಳಕ್ಕೆ ಬಂದಾಗ, ತನ್ನ ಮಕ್ಕಳು ಇತರ ವ್ಯಕ್ತಿಗಳೊಂದಿಗೆ ಸೇರಿ ಆತನನ್ನು ಥಳಿಸುತ್ತಿರುವುದನ್ನು ನೋಡಿದ್ದೆ ಎಂದಿದ್ದಾರೆ.

ಅಬ್ಬಬ್ಬಾ...! ಎರಡಂತಸ್ತಿನ ಕಟ್ಟಡದಿಂದ ಬಾಲಕಿಯ ಕೆಳಗೆ ತಳ್ಳಿದ ಮೂವರು ದುಷ್ಟರು!

ಕಾಗ್ದಪಿತ್ ಪೊಲೀಸರು ಸರ್ಕಾಟೆ ವಿರುದ್ಧ ಭಾರತೀಯ ದಂಡ ಸಂಹಿತೆಯ ಪ್ರಕಾರ ಕಿರುಕುಳ ಮತ್ತು ಹಿಂಬಾಲಿಸುವ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ, ಜೊತೆಗೆ ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಆರೋಪಗಳನ್ನು ಹೊರಿಸಿದ್ದಾರೆ. ವಿಜಯ್‌ ಸರ್ಕಾಟೆ 19 ವರ್ಷದ ವ್ಯಕ್ತಿಯಾಗಿದ್ದು, ಯಾವುದೇ ಕೆಲಸದಲ್ಲಿ ಇದ್ದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?