CJP: ಹೋರಾಟಕ್ಕೆ ಸಿಕ್ಕಿತು ಬಿಗ್ ಸಕ್ಸಸ್: ಕಾಕ್ರೋಚ್ ಪಾರ್ಟಿಯ ಮೊದಲ ಗೆಲುವಿಗೆ ಖಾಕಿ ಪಡೆ ಶೇಕ್!

Published : Jul 23, 2026, 04:13 PM IST
CJP

ಸಾರಾಂಶ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಆ ವಿಡಿಯೋದಿಂದಾಗಿ ಎದ್ದ ಯುವಜನರ ಆಕ್ರೋಶಕ್ಕೆ ಮಣಿದು ಸರ್ಕಾರ ಈ ಕ್ರಮ ಕೈಗೊಂಡಿದ್ದು, ಇದು ಹೋರಾಟಗಾರರ ಮೊದಲ ಗೆಲುವು ಎಂದು ಬಣ್ಣಿಸಲಾಗಿದೆ. ಈ ಪ್ರಕರಣ ಇದೀಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ರಾಜಧಾನಿ ದೆಹಲಿಯ ಐತಿಹಾಸಿಕ ಜಂತರ್ ಮಂತರ್ ಅಂಗಳದಲ್ಲೀಗ ಜನಶಕ್ತಿಯ ಅಬ್ಬರಕ್ಕೆ ಅಧಿಕಾರದ ಮದ ಇಳಿದಿದೆ. ಕೊಕ್ರೆಚ್ ಜನತಾ ಪಕ್ಷದ ಹೋರಾಟಗಾರರ ಮೇಲೆ ಅತಿಯಾದ ಖಾಕಿ ದೌರ್ಜನ್ಯ ಎಸಗಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈಗ ತಮ್ಮ ಸ್ಥಾನ ಕಳೆದುಕೊಂಡು ಮುಖಭಂಗ ಅನುಭವಿಸಿದ್ದಾರೆ. ಆಡಳಿತದ ಅಹಂಕಾರ ಮತ್ತು ಜನಸಾಮಾನ್ಯರ ಹೋರಾಟದ ನಡುವೆ ನಡೆದ ಈ ಕಾದಾಟದಲ್ಲಿ 'ಕಾಕ್ರೋಚ್ ಪಾರ್ಟಿ'ಗೆ ಬೃಹತ್ ಮೊದಲ ಗೆಲುವು ಸಿಕ್ಕಿದ್ದು, ದೆಹಲಿ ಖಾಕಿ ಪಡೆ ಸಂಪೂರ್ಣ ಶೇಕ್ ಆಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಏನಿದು ಸನ್ನಿವೇಶ?

ಜುಲೈ 20 ರಂದು 'ಕೊಕ್ರೆಚ್ ಜನತಾ ಪಕ್ಷ' ಸಂಘಟನೆಯು ಜಂತರ್ ಮಂತರ್‌ನಿಂದ ಸಂಸತ್ತಿನವರೆಗೆ ಸಂಸದ್ ಚಲೋ ಬೃಹತ್ ಮೆರವಣಿಗೆಯನ್ನು ಆಯೋಜಿಸಿತ್ತು. ಪ್ರತಿಭಟನಾಕಾರರು ಸಂಸತ್ತನ್ನು ತಲುಪಬಾರದೆಂಬ ಕಾರಣಕ್ಕೆ ಪೊಲೀಸರು ಕಬ್ಬಿಣದ ತಡೆಗೋಡೆಗಳನ್ನು ಹಾಕಿ ಭಾರಿ ಭದ್ರತೆ ನಿಯೋಜಿಸಿದ್ದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ಬೆಳೆದು ಪರಿಸ್ಥಿತಿ ಕೈಮೀರಿತು. ಉದ್ವಿಗ್ನತೆ ಶಮನಗೊಳಿಸುವ ಹೆಸರಿನಲ್ಲಿ ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದರು. ಈ ಗೊಂದಲದ ನಡುವೆಯೇ ದೆಹಲಿ ಪೊಲೀಸ್ ಪಡೆಯ ಹೆಚ್ಚುವರಿ ಉಪ ಆಯುಕ್ತ ಸಂದೀಪ್ ಲಂಬಾ, ಪ್ರತಿಭಟನೆಯಲ್ಲಿದ್ದ ಮಹಿಳೆಯೊಬ್ಬರ ಮುಖ ಹಾಗೂ ಕಿವಿಯ ಕೆಳಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ. ಈ ಅಮಾನವೀಯ ಕೃತ್ಯ ಕ್ಯಾಮೆರಾ ಕಣ್ಣಿನಲ್ಲಿ ಸರೆಹಿಡಿಯಲ್ಪಟ್ಟಿತ್ತು.

ಜೆನ್‌ಜಿ ಆಕ್ರೋಶ ಮತ್ತು ಡಿಜಿಟಲ್ ದಂಗೆ!

ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ, ಯುವಜನತೆ, ದೆಹಲಿ ಪೊಲೀಸರ ವಿರುದ್ಧ ಆಕ್ರಮಣಕಾರಿ ಡಿಜಿಟಲ್ ಸಮರ ಸಾರಿದ್ದಾರೆ. ಮಹಿಳೆಯ ಮೇಲೆ ಆಡಳಿತದ ಬಲಪ್ರಯೋಗ ಮಾಡಿದ ಡಿಸಿಪಿ ಸಂದೀಪ್ ಲಂಬಾ ವಿರುದ್ಧ ತಕ್ಷಣವೇ ಅಮಾನತು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕೆಂದು ಲಕ್ಷಾಂತರ ಯುವಕರು ಆನ್‌ಲೈನ್‌ನಲ್ಲಿ ಒತ್ತಡ ಹೇರಿದರು. ಸರ್ಕಾರದ ಮೌನವನ್ನು ಪ್ರಶ್ನಿಸಿ ಯುವಪಡೆ ಎಬ್ಬಿಸಿದ ಈ ಆಕ್ರೋಶದ ಬಿರುಗಾಳಿಗೆ ಕೊನೆಗೂ ಆಡಳಿತ ಮಂಡಿಚಾಚಲೇಬೇಕಾಯಿತು. ಜನರ ತೀವ್ರ ಆಕ್ರೋಶಕ್ಕೆ ಮಣಿದ ಸರ್ಕಾರ ಮತ್ತು ದೆಹಲಿ ಪೊಲೀಸ್ ಆಡಳಿತ, ಸಂದೀಪ್ ಲಂಬಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಂತರ್ ಮಂತರ್‌ನ ವಿಶೇಷ ಪ್ರತಿಭಟನಾ ಕರ್ತವ್ಯದಿಂದ ತೆರವುಗೊಳಿಸಿ, ಅವರ ಮೂಲ ಹುದ್ದೆಗೆ ವಾಪಸ್ ಕಳುಹಿಸಿದೆ. ಈ ಹಠಾತ್ ಕ್ರಮವು ಹೋರಾಟಗಾರರ ಶಕ್ತಿಗೆ ಸಿಕ್ಕ ಮೊದಲ ದೊಡ್ಡ ಜಯವಾಗಿದೆ.

ಖಾಕಿಗೆ ಕಾದಿದೆಯಾ ಕಂಟಕ!

ಈ ಕಾದಾಟ ಕೇವಲ ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗದೆೀಗ ನ್ಯಾಯಾಲಯದ ಅಂಗಳ ತಲುಪಿದೆ. ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಈ ವೈರಲ್ ವೀಡಿಯೊವನ್ನು ದೆಹಲಿ ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ. ಹಿರಿಯ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಮಹಿಳೆಯ ಮೇಲೆ ಕೈ ಎತ್ತಿರುವುದನ್ನು ತೀವ್ರವಾಗಿ ಖಂಡಿಸಿದ ನ್ಯಾಯಾಲಯ, ದೆಹಲಿ ಪೊಲೀಸರಿಗೆ ತಕ್ಷಣವೇ ಉತ್ತರಿಸುವಂತೆ ನೋಟಿಸ್ ನೀಡಿದೆ. ಅಲ್ಲದೆ, ಘಟನೆಗೆ ಸಂಬಂಧಿಸಿದ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ವೀಡಿಯೊ ರೆಕಾರ್ಡಿಂಗ್‌ಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿಡಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಯಾರು ಈ ಸಂದೀಪ್ ಲಂಬಾ?

ಸಂದೀಪ್ ಲಂಬಾ ಅವರು ಡಿಎಎನ್‌ಐಪಿಎಸ್ (ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೊಲೀಸ್ ಸೇವೆ) ಕೇಡರ್‌ನ ಹಿರಿಯ ಅಧಿಕಾರಿಯಾಗಿದ್ದು, ಪ್ರಸ್ತುತ ಈಶಾನ್ಯ ದೆಹಲಿ ಜಿಲ್ಲೆಯಲ್ಲಿ ಹೆಚ್ಚುವರಿ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಹಲವು ಸೂಕ್ಷ್ಮ ಪ್ರಕರಣಗಳನ್ನು ನಿರ್ವಹಿಸಿದ್ದ ಅಧಿಕಾರಿಗೆ, ಈ ಬಾರಿಯ 'ಕಾಕ್ರೋಚ್ ಪಾರ್ಟಿ'ಯ ಹೋರಾಟದ ಕಿಚ್ಚು ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿದೆ. ಅಧಿಕಾರದ ಗರ್ವದಲ್ಲಿದ್ದ ಹಿರಿಯ ಅಧಿಕಾರಿಯನ್ನು ಜಂತರ್ ಮಂತರ್‌ನಿಂದ ಕಾಲ್ಕಿ ಮಾಡುವಂತೆ ಮಾಡಿದ 'ಕಾಕ್ರೋಚ್ ಪಾರ್ಟಿ'ಯ ಈ ಮೊದಲ ಗೆಲುವು, ಶೋಷಿತರ ಮತ್ತು ಯುವಜನರ ಹೋರಾಟಕ್ಕೆ ಹೊಸ ಭರವಸೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಸೋನಮ್‌, ಇಟ್ಸ್‌ ಡನ್‌ ಬ್ರೋ' ವಾಂಗ್ಚುಕ್‌ಗೆ ಸಲ್ಲು ಮನವಿ; ವಿದ್ಯಾರ್ಥಿಗಳಿಗೆ ಪ್ರತಿಭಟನೆ ಅಂತ್ಯಗೊಳಿಸಲು ಹೇಳಿದ ಸಲ್ಮಾನ್‌ ಖಾನ್‌
ಅಂದು 12 ಗಂಟೆ ಕೆಲಸ, ತಿಂಗಳಿಗೆ 15000 ಸಂಬಳ! ಇಂದು 35 ಸಾವಿರ ಸ್ಯಾಲರಿ.. ಇವರು ಮಾಡಿದ ಟ್ರಿಕ್ಸ್ ಏನು?