
ಲಕ್ನೋ(ಫೆ.28): ಡಿಂಪಲ್ ಯಾದವ್ ಹೇಳಿಕೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ. ಟ್ವೀಟ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಯೋಗಿ ಆದಿತ್ಯನಾಥ್, ಹೌದು ನಾನು ಕೇಸರಿಧಾರಿ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಕೇವಲ ಕೇಸರಿ ಬಗ್ಗೆ ಮಾತನಾಡಿದ್ದಾರೆ. ವೇದಿಕೆಯ ಇನ್ನೊಂದು ಬದಿಯಲ್ಲಿ ನಿಂತಿದ್ದವರೂ ಈ ಬಗ್ಗೆ ಉತ್ಸುಕರಾಗಿದ್ದರು.
ಹೌದು, ನಾನು ಕೇಸರಿಧಾರಿ
ವಿಡಿಯೋದಲ್ಲಿ ಸಿಎಂ ಯೋಗಿ ಒಂದು ವಿಷಯ ನನಗೆ ತುಂಬಾನೇ ತಟ್ಟಿದೆ. ಎಸ್ಪಿಯ ಕೆಲವರ ಹೇಳಿಕೆಗಳನ್ನು ನೀವು ಕೇಳಿರಬೇಕು. ಆ ಹೇಳಿಕೆ ವಿಶ್ವಕ್ಕೆ ಮಾಡಿದ ಅವಮಾನವೂ ಹೌದು. ಇದು ಸನಾತನ ಧರ್ಮ ಮತ್ತು ಸಂತ ಸಮಾಜಕ್ಕೆ ಮಾಡಿದ ಅವಮಾನವೂ ಹೌದು. ಅವರು ಮ್ಮ ಹೇಳಿಕೆಯಲ್ಲಿ ಕೇಸರಿಯನ್ನು ಯುದ್ಧದೊಂದಿಗೆ ಸಂಯೋಜಿಸಿದ್ದಾರೆ. ಆದರೆ ನಾನು ಕೇಸರಿಧಾರಿ ಎಂದು ಹೇಳಬಹುದು. ಪ್ರತಿ ಉತ್ತರ ಪ್ರದೇಶದ ನಿವಾಸಿಗಳು ನಾವು ಕೇಸರಿಗರು ಎಂದು ಹೇಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಕೇಸರಿಯು ಬ್ರಹ್ಮಾಂಡದ ಶಕ್ತಿಯ ಬಣ್ಣವಾಗಿದೆ. ಸೂರ್ಯೋದಯವಾದಾಗ ಸೂರ್ಯನ ಕಿರಣಗಳು ಮತ್ತು ಸೂರ್ಯದೇವನ ಬಣ್ಣವೂ ಕೇಸರಿ. ಎಲ್ಲಾ ಶಕ್ತಿಗೂ ಕಾರಣವಾದ ಬೆಂಕಿಯ ಬಣ್ಣವೂ ಕೇಸರಿ. ಸ್ವಾಮಿ ವಿವೇಕಾನಂದರು ಜಾಗತಿಕ ವೇದಿಕೆಯಲ್ಲಿ ನಾವು ಹೆಮ್ಮೆಯಿಂದ ಹಿಂದೂ ಎಂದು ಹೇಳಿದ್ದರು. ಅಂದರೆ ಅವರೂ ಕೇಸರಿಗರು ಎಂದರ್ಥ. ಇದಾದ ಬಳಿಕ ಮಾತನಾಡಿದ ಸಿಎಂ ಯೋಗಿ, ನೀವೆಲ್ಲರೂ ನಾನು ಕೇಸರಿಗ, ಕೇಸರಿಯೇ ನನ್ನ ಗುರುತು ಎಂದಿದ್ದಾರೆ.
ಕೇಸರಿ ಬಗ್ಗೆ ಡಿಂಪಲ್ ಯಾದವ್ ಕಾಮೆಂಟ್
ಡಿಂಪಲ್ ಯಾದವ್ ಸಿರತು ಸಾರ್ವಜನಿಕ ಸಭೆಯೊಂದರಲ್ಲಿ ಕೇಸರಿ ಬಗ್ಗೆ ಟೀಕೆ ಮಾಡಿದ್ದರು. ಯುದ್ಧದ ಬಣ್ಣವೇ ಸಿಎಂ ಬಟ್ಟೆಯ ಬಣ್ಣ ಎಂದು ವೇದಿಕೆಯನ್ನುದ್ದೇಶಿಸಿ ಹೇಳಿದರು. ಅಂತಹ ತುಕ್ಕು ಹಿಡಿದ ಎಂಜಿನ್ ಅನ್ನು ತೆಗೆದುಹಾಕಬೇಕಾಗಿದೆ ಎಂದಿದ್ದರು.
ಯುಪಿ ಚುನಾವಣಾ ಮಾಹಿತಿ
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2022 ರಲ್ಲಿ 403 ವಿಧಾನಸಭಾ ಸ್ಥಾನಗಳಿಗೆ ಮೊದಲ ಹಂತದ ಮತದಾನ ಫೆಬ್ರವರಿ 10 ರಂದು, ಎರಡನೇ ಹಂತ ಫೆಬ್ರವರಿ 14 ರಂದು, ಮೂರನೇ ಹಂತ ಫೆಬ್ರವರಿ 20 ರಂದು, ನಾಲ್ಕನೇ ಹಂತ ಫೆಬ್ರವರಿ 23 ರಂದು, ಐದನೇ ಹಂತ ಫೆಬ್ರವರಿ 27 ರಂದು, ಆರನೇ ಮಾರ್ಚ್ 3 ರಂದು ಹಂತ ಮತ್ತು ಕೊನೆಯ ಹಂತ ಮಾರ್ಚ್ 7 ರಂದು ಮತದಾನ. ಯುಪಿಯಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ