
ಹೈದರಾಬಾದ್ (ಡಿ.14) ಫುಟ್ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿ ಭಾರತ ಪ್ರವಾಸದಲ್ಲಿದ್ದಾರೆ. ಕೋಲ್ಕತಾಗೆ ಭೇಟಿ ನೀಡಿದ ಬಳಿಕ ಹೈದರಾಬಾದ್‌ಗೆ ತೆರಳಿದ ಲಿಯೋನಲ್ ಮೆಸ್ಸಿ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭೇಟಿಯಾಗಿದ್ದಾರೆ. ಮೆಸ್ಸಿಯನ್ನು ಆತ್ಮೀಯವಾಗಿ ಬರ ಮಾಡಿಕೊಂಡ ರೇವಂತ್ ರೆಡ್ಡಿ ಮೆಸ್ಸಿ ಜೊತೆ ಫುಟ್ಬಾಲ್ ಆಡಿದ್ದಾರೆ. ಮೆಸ್ಸಿಗೆ ಪಾಸ್ ನೀಡಿ ಚಮಕ್ ನೀಡಿದ್ದಾರೆ. ರೇವಂತ್ ರೆಡ್ಡಿ ಫುಟ್ಬಾಲ್ ಸ್ಕಿಲ್ ಪ್ರದರ್ಶಿಸಿದ್ದಾರೆ. 56 ವರ್ಷದ ರೇವಂತ್ ರೆಡ್ಡ, ಫುಟ್ಬಾಲ್ ದಿಗ್ಗಜನಿಗೆ ನೀಡಿದ ಪಾಸ್ ವೈಡ್ ಆಗಿತ್ತು. ಹಲವು ಬಾರಿ ರೇವಂತ್ ರೆಡ್ಡಿ ಮೆಸ್ಸಿಗೆ ಪಾಸ್ ನೀಡಿದ್ದಾರೆ. ಆದರೆ ಎಲ್ಲಾ ಪಾಸ್ ವೈಡ್ ಆಗಿದೆ. ಹೀಗಾಗಿ ರೇವಂತ್ ರೆಡ್ಡಿ ಫುಟ್ಬಾಲ್ ವಿಡಿಯೋ ವೈರಲ್ ಆಗಿದೆ.
ಹೈದರಾಬಾದ್‌ನ ಉಪ್ಪಳ ಕ್ರೀಡಾಂಗಣದಲ್ಲಿ ಮೆಸ್ಸಿ ನೋಡಲು ಜನಸಾಗರವೇ ಆಗಮಿಸಿತ್ತು. ರೇವಂತ್ ರೆಡ್ಡಿ ಜೊತೆ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕೂಡ ಹಾಜರಿದ್ದರು.ರಾಹುಲ್ ಗಾಂಧಿ ಹಾಗೂ ಲಿಯೋನಲ್ ಮೆಸ್ಸಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದರೆ, ಇತ್ತ ರೇವಂತ್ ರೆಡ್ಡಿಹಾಗೂ ಮೆಸ್ಸಿ ಜೊತೆಗೆ ಫುಟ್ಬಾಲ್ ಪಾಸ್ ವಿಡಿಯೋ ವೈರಲ್ ಆಗಿದೆ. ಲಿಯೋನಲ್ ಮೆಸ್ಸಿ ಜೊತೆ ಅರ್ಜೆಂಟೀನಾ ಫುಟ್ಬಾಲ್ ತಂಡದ ಲೂಸಿ ಸೌರೆಜ್ ಹಾಗೂ ರೋಡಿಗ್ರೋ ಡೆ ಪೌಲ್ ಹಾಜರಾಗಿದ್ದರು. ಮೂವರು ಫುಟ್ಬಾಲ್ ದಿಗ್ಗಜರನ್ನು ನೋಡಿದ ಅಭಿಮಾನಿಗಳು ಸಂಭ್ರದಲ್ಲಿ ತೇಲಾಡಿದ್ದರು.
ಲಿಯೋನಲ್ ಮೆಸ್ಸಿ ಜೊತೆ ಹುಲ್ ಗಾಂಧಿ, ರೇವಂತ್ ರೆಡ್ಡಿ ಗ್ರೂಪ್ ಫೋಟೋ ಕ್ಲಿಕ್ಲಿಸಿದ್ದಾರೆ. ಇದೇ ವೇಳೆ ಕ್ರೀಡಾಂಗಣದಲ್ಲಿ ಪ್ರದರ್ಶನ ಫುಟ್ಬಾಲ್ ಪಂದ್ಯ ಆಯೋಜಿಸಲಾಗಿತ್ತು ರೇವಂತ್ ರೆಡ್ಡಿ ನಾಯಕತ್ವದ ಆರ್‌ಆರ್9 ಹಾಗೂ ಅಪರ್ಣಾ ಆಲ್ ಸ್ಟಾರ್ ತಂಡ ಮುಖಾಮುಖಿಯಾಗಿತ್ತು. ಮುಖ್ಯಮಂತ್ರಿ ರೇವಂತ್ ರೆಡ್ಡಿ ಗೋಲ್ ಸಿಡಿಸಿ ತಮ್ಮ ಫುಟ್ಬಾಲ್ ಕೌಶಲ್ಯ ಪ್ರದರ್ಶಿಸಿದ್ದರು. ವಿಶೇಷ ಅಂದರೆ ಈ ಪ್ರದರ್ಶನ ಪಂದ್ಯದಲ್ಲಿ ಆರ್‌ಆರ್9 4-0 ಗೋಲುಗಳಿಂದ ಗೆಲುವು ಸಾಧಿಸಿತ್ತು.
ಉಪ್ಪಳ ಕ್ರೀಡಾಂಗಣದಲ್ಲಿ ಮೆಸ್ಸಿ ಕಾರ್ಯಕ್ರಮವನ್ನು ತೆಲಂಗಾಣ ಸರ್ಕಾರ ಅಚ್ಚುಕಟ್ಟಾಗಿ ಆಯೋಜಿಸಿತ್ತು. ಕೋಲ್ಕತಾದಲ್ಲಿ ಆಯೋಜಿಸಿದ ಕಾರ್ಯಕ್ರಮ ವಿಶ್ವದಲ್ಲೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕಾರ್ಯಕ್ರಮದಲ್ಲಿ ಅವ್ಯವಸ್ಥೆಗಳು, ಅಭಿಮಾನಿಗಳ ನೂಕಾಟ ತಳ್ಳಾಟಗಳು ಸ್ವತಃ ಲಿಯೋನಲ್ ಮೆಸ್ಸಿಗೂ ಬೇಸರ ತರಿಸಿತ್ತು. ಇದರಿಂದ ಎಚ್ಚೆತ್ತುಕೊಂಡಿದ್ದ ತೆಲಂಗಾಣ ಸರ್ಕಾರ ಸೂಕ್ತ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ