2 ಮಕ್ಕಳು ಇದ್ದವರಿಗಷ್ಟೇ ಎಲೆಕ್ಷನ್ ಟಿಕೆಟ್: ಜನಸಂಖ್ಯೆ ಏರಿಕೆಗೆ ಚಂದ್ರಬಾಬು ಪ್ಲಾನ್!

By Kannadaprabha News  |  First Published Oct 21, 2024, 7:59 AM IST

‘ಆಂಧ್ರಪ್ರದೇಶ ಸೇರಿದಂತೆ ಇಡೀ ದಕ್ಷಿಣ ಭಾರತದ ಜನಸಂಖ್ಯಾ ಏರಿಕೆ ಪ್ರಮಾಣದಲ್ಲಿ ಇಳಿಕೆ ಆಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಹಾಗೂ ‘ದಕ್ಷಿಣ ಭಾರತೀಯರೆಲ್ಲ ಹೆಚ್ಚು ಮಕ್ಕಳ ಹೆರಬೇಕು’ ಎಂದು ಕರೆ ನೀಡಿದ್ದಾರೆ.


ವಿಜಯವಾಡ (ಅ.21): ಕುಟುಂಬಕ್ಕೆ ಎರಡೇ ಮಕ್ಕಳ ಮಿತಿ ಕುರಿತ ಕಾಯ್ದೆ ಜಾರಿಗೆ ದೇಶವ್ಯಾಪಿ ಒಲವು ವ್ಯಕ್ತವಾಗುತ್ತಿರುವಾಗ, ತೆಲುಗುದೇಶಂ ನಾಯಕ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ‘ಆಂಧ್ರಪ್ರದೇಶ ಸೇರಿದಂತೆ ಇಡೀ ದಕ್ಷಿಣ ಭಾರತದ ಜನಸಂಖ್ಯಾ ಏರಿಕೆ ಪ್ರಮಾಣದಲ್ಲಿ ಇಳಿಕೆ ಆಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಹಾಗೂ ‘ದಕ್ಷಿಣ ಭಾರತೀಯರೆಲ್ಲ ಹೆಚ್ಚು ಮಕ್ಕಳ ಹೆರಬೇಕು’ ಎಂದು ಕರೆ ನೀಡಿದ್ದಾರೆ.

‘ಇದಕ್ಕೆ ಪ್ರೋತ್ಸಾಹ ನೀಡಲು ಆಂಧ್ರದಲ್ಲಿ 2ಕ್ಕಿಂತ ಹೆಚ್ಚು ಮಕ್ಕಳಿದ್ದವರಿಗೆ ಮಾತ್ರ ಸ್ಥಳೀಯ ಸಂಸ್ಥೆ ಚುನಾವಣೆ ಅವಕಾಶ ನೀಡುವ ಚಿಂತನೆ ನಡೆಸಲಾಗುತ್ತಿದೆ ಹಾಗೂ ಹೆಚ್ಚು ಮಕ್ಕಳ ಹೆರುವ ಕುಟುಂಬಗಳಿಗೆ ಪ್ರೋತ್ಸಾಹಧನ ನೀಡುವ ಇರಾದೆಯೂ ಇದೆ’ ಎಂದು ಹೇಳಿದ್ದಾರೆ. ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ದಕ್ಷಿಣ ಭಾರತೀಯರಲ್ಲಿ ಸಂತಾನೋತ್ಪತ್ತಿ ಪ್ರಮಾಣ ಸರಾಸರಿ ಶೇ.1.6ಕ್ಕೆ ಕುಸಿದಿದೆ. ಅಂದರೆ ಪ್ರತಿ 100 ಕುಟುಂಬಗಳಲ್ಲಿ 160 ಮಕ್ಕಳು ಮಾತ್ರ ಜನಿಸುತ್ತಿದ್ದಾರೆ. ಇದು ರಾಷ್ಟ್ರೀಯ ಸರಾಸರಿ ಶೇ.2.1ಕ್ಕಿಂತ ಕಡಿಮೆ. 

Latest Videos

undefined

ಚನ್ನಪಟ್ಟಣ ಉಪಚುನಾವಣೆ: ಜೆಡಿಎಸ್‌ ಟಿಕೆಟ್‌ ಆಫರ್‌ ಒಪ್ಪುತ್ತಿಲ್ಲ ಯೋಗೇಶ್ವರ್‌

ಇದು ಇನ್ನಷ್ಟು ಕುಸಿದರೆ 2047ಕ್ಕೆ ದಕ್ಷಿಣದಲ್ಲಿ ಯುವಕರಿಗಿಂತ ವೃದ್ಧರೇ ಹೆಚ್ಚಾಗುತ್ತಾರೆ. ಜಪಾನ್‌, ಕೊರಿಯಾ, ಚೀನಾದಲ್ಲಿ ಕಾಣಿಸಿಕೊಂಡ ಈ ಸಮಸ್ಯೆ ದಕ್ಷಿಣ ಭಾರತದಲ್ಲೂ ಕಾಣಲಿದೆ. ಈಗಾಗಲೇ ಆಂಧ್ರದ ಹಲವು ಹಳ್ಳಿ ಸೇರಿದಂತೆ ದೇಶದ ಗ್ರಾಮೀಣ ಭಾಗಗಳಲ್ಲಿ ವಯೋವೃದ್ಧರು ಮಾತ್ರ ಉಳಿದುಕೊಂಡಿದ್ದಾರೆ. ಯುವಕರು ನಗರ ಪ್ರದೇಶಗಳಿಗೆ ಮತ್ತು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಅಸಮತೋಲನ ಸರಿಪಡಿಸಲು ದಕ್ಷಿಣ ಭಾರತೀಯರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬೇಕು’ ಎಂದು ಸಲಹೆ ನೀಡಿದರು

ಹೆಚ್ಚು ಮಕ್ಕಳ ಹೆತ್ತರೆ ಬಂಪರ್!: ‘ಜನಸಂಖ್ಯಾ ನಿರ್ವಹಣಾ ಯೋಜನೆ ಅಂಗವಾಗಿ 2 ರೀತಿಯ ಸವಲತ್ತಿಗೆ ಚಿಂತನೆ ನಡೆದಿದೆ. ಮೊದಲನೆಯದಾಗಿ ಹೆಚ್ಚು ಮಕ್ಕಳ ಹೆರುವ ಪೋಷಕರಿಗೆ ವಿವಿಧ ರೀತಿಯ ವಿಶೇಷ ಸೌಲಭ್ಯ ಒದಗಿಸಲು ನಾವು ಚಿಂತಿಸುತ್ತಿದ್ದೇವೆ’ ಎಂದರು. ‘ಎರಡನೆಯದಾಗಿ, 2ಕ್ಕಿಂತ ಹೆಚ್ಚು ಮಕ್ಕಳು ಹೊಂದಿದವರಿಗೆ ಮಾತ್ರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧೆ ಅವಕಾಶ ನೀಡುವ ಕಾನೂನು ಜಾರಿಗೆ ಯೋಚನೆ ಮಾಡುತ್ತಿದ್ದೇವೆ. 

ದೇಶದಾದ್ಯಂತ ಒಂದೇ ದಿನ 30 ವಿಮಾನಗಳಿಗೆ ಬಾಂಬ್‌ ಬೆದರಿಕೆ ಸಂದೇಶ!

ಈ ಹಿಂದೆ 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶ ನಿರಾಕರಿಸುವ ಕಾಯ್ದೆ ಇತ್ತೀಚಿನವರೆಗೂ ಆಂಧ್ರದಲ್ಲಿ ಇತ್ತು. ಆದರೆ ನಮ್ಮ ಸರ್ಕಾರ ಬಂದ ನಂತರ ಆಗಸ್ಟ್‌ನಲ್ಲಿ ಆ ಕಾಯ್ದೆ ಸಡಿಲಿಸಿ 2ಕ್ಕಿಂತ ಹೆಚ್ಚು ಮಕ್ಕಳು ಇದ್ದರೂ ಸ್ಪರ್ಧೆಗೆ ಅವಕಾಶ ನೀಡಿದ್ದೇವೆ. ಆದರೆ ಇದನ್ನು ಸಂಪೂರ್ಣ ತಿರುವು ಮುರುವು ಮಾಡಿ 2ಕ್ಕಿಂತ ಹೆಚ್ಚು ಮಕ್ಕಳಿದ್ದಷ್ಟೇ ಸ್ಥಳೀಯ ಸಂಸ್ಥೆ ಚುನಾವಣೆಗೆ ನಿಲ್ಲುವಂತೆ ಮಾಡುವ ಚಿಂತನೆ ಇದೆ’ ಎಂದರು.

click me!