
ಮೋದಿ: ರಾಮ್ ರಾಮ್...
ಅಂಕಿತ್: ರಾಮ್ ರಾಮ್ ಮೋದಿ ಜಿ..
ಮೋದಿ: ಏನು ಅಂಕಿತ್, ನಿಮ್ಮಿಂದ ಸ್ವಲ್ಪ ಕಲಿಯೋಣ ಫಿಟ್ನೆಸ್‌ಗಾಗಿ ನೀವು ಸಾಕಷ್ಟು ಶ್ರಮ ಪಡುತ್ತೀರಿ.. ಅದರಲ್ಲಿ ಈ ಸ್ವಚ್ಛತಾ ಅಭಿಯಾನ ಹೇಗೆ ಸಹಾಯ ಮಾಡುತ್ತದೆ?
ಅಂಕಿತ್: ವಾತಾವರಣ ಸ್ವಚ್ಛ ಇಡುವುದು ನಮ್ಮ ಕರ್ತವ್ಯ. ಜನರು ಹೇಗೆ ಸ್ವಚ್ಛತೆ
ಮೋದಿ: ನಿಮ್ಮ ಗ್ರಾಮ ಸೋನಿಪತ್‌ನಲ್ಲಿ ಜನರು ಹೇಗೆ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿದ್ದಾರೆ?
ಅಂಕಿತ್: ಸ್ವಚ್ಛತೆಯತ್ತ ಹೆಚ್ಚು ಗಮನ ಕೊಡುತ್ತಿದ್ದಾರೆ.
ಮೋದಿ: ಅಂಕಿತ್.. ನೀವು ದೈಹಿಕ ಚಟುವಟಿಕೆ, ವ್ಯಾಯಾಮಕ್ಕಾಗಿ ಎಷ್ಟು ಸಮಯ ನೀಡುತ್ತೀರಿ?
ಅಂಕಿತ್: ದಿನ ನಿತ್ಯ 4 ರಿಂದ 5 ತಾಸು ನೀಡುತ್ತೇನೆ. ನಿಮ್ಮನ್ನು ನೋಡಿ ನಮಗೆ ಉತ್ತೇಜನ ಲಭಿಸುತ್ತಿದೆ. ನೀವು ಕೂಡ ಹೆಚ್ಚು ವ್ಯಾಯಾಮ ಮಾಡುತ್ತಿರಿ.
ಮೋದಿ: ನಾನು ಹೆಚ್ಚು ವ್ಯಾಯಾಮ ಮಾಡುವುದಿಲ್ಲ, ಆದರೆ ಹೆಚ್ಚು ಶಿಸ್ತು ಪಾಲನೆ ಮಾಡುತ್ತೇನೆ. ಆದರೆ ಎರಡು ವಿಷಯದಲ್ಲಿ ನಾನು ಹೆಚ್ಚು ಶಿಸ್ತು ಪಾಲಿಸುತ್ತಿಲ್ಲ. ಒಂದು... ತಿನ್ನುವ ಸಮಯದಲ್ಲಿ..., ಎರಡನೆಯದ್ದು.. ನಿದ್ದೆ ಮಾಡಲು ಸಮಯ ನೀಡಬೇಕು.. ಆದರೆ ನೀಡಲು ಆಗುತ್ತಿಲ್ಲ.
ಅಂಕಿತ್: ದೇಶವನ್ನು ಅಭಿವೃದ್ಧಿಪಡಿಸಲು ನೀವು ಎಚ್ಚರವಾಗಿ ಇರಲೇಬೇಕಾಗುತ್ತದೆ.
ಮೋದಿ: ಹಹ್ಹಹಾ. ಇಂದು ಸೋಷಿಯಲ್ ಮೀಡಿಯಾದ ಹೇಗೆ ಸಕಾರಾತ್ಮಕ ಬಳಕೆ ಆಗುತ್ತದೆ ಎಂದರೆ. ಇದಕ್ಕೆ ನೀವು ಪರ್ಫೆಕ್ಟ್ ಉದಾಹರಣೆ ನೀಡಿದ್ದೀರಿ. ನಾನು ನೋಡಿದ್ದೇನೆ.. ನಿಮ್ಮ ಕಾರಣದಿಂದ ಯುವಕರೇನಿದ್ದಾರೆ.. ಜಿಮ್‌ಗೇ ಹೋಗುವವರೇನಿದ್ದಾರೆ.. ನಿಮ್ಮನ್ನೇ ಅನುಸರಿಸುತ್ತಿದ್ದಾರೆ.
ಅಂಕಿತ್: ಹೌದು ಮೋದಿಜಿ..
ಮೋದಿ: ನಾನು ಒಂದು ಬಾರಿ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ನೋಡಿದ್ದೆ. ಒಬ್ಬ ಬಾಲಕನು ತಾಯಿಯ ಜಿಮ್' ಎಂದು ಪೋಸ್ಟ್ ಮಾಡಿದ್ದ. ಅಲ್ಲಿ ಬೀಸುವುದು, ಕುಟ್ಟುವುದು, ಬಟ್ಟೆ ಒಗೆಯುವುದೇ ಆಕೆಯ ಜಿಮ್ ಎಂಥ ಪರಿಣಾಮಕಾರಿ ಪೋಸ್ಟ್ ಆಗಿತ್ತು ಅದು...
ಅಂಕಿತ್: ನಿಮ್ಮನ್ನು ನೋಡುವುದು ನನ್ನ ಕನಸಾಗಿತ್ತು. ಅದು ಸಾಕಾರಗೊಂಡಿದೆ. ಜಿ20 ಸಮ್ಮೇಳನ ನೋಡಿದೆ. ಬಹಳ ವ್ಯವಸ್ಥಿತವಾಗಿತ್ತು.
ಮೋದಿ: ನೀವು ನೋಡಿರಬಹುದು. ನಾವು ಜಿ20ಗೆ ಭಾರತ ಮಂಟಪವನ್ನೇನು ನಿರ್ಮಿಸಿದೆವು.. ಅದರಲ್ಲಿ ಒಂದು ದ್ವಾರ ಭಾರತ ಮಂಟಪದ್ದಾಗಿತ್ತು. ಅಲ್ಲಿ ನಾವು ಅನೇಕ ಕ್ಯುಆರ್ ಕೋಡ್ ಹಾಕಿದ್ದೆವು. ಯಾವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುತ್ತೇವೋ ಆ ನಿರ್ದಿಷ್ಟ ಆಸನದ ವಿವರ ಲಭಿಸುತ್ತಿದ್ದವು.
ಅಂಕಿತ್: ನೀವು ಕ್ರೀಡೆಗೆ ಏನು ಉತ್ತೇಜನ ನೀಡಿದ್ದೀರಿ.. ಅದು ಸ್ವಾಗತಾರ್ಹ. ನಾನು ಕೂಡ ಕ್ರೀಡಾಳು ಆಗಿದ್ದೆ. ಆದರೆ ಗಾಯದಿಂದಾಗಿ ದೂರ ಉಳಿದೆ. ಪದಕ ವಿಜೇತ ಕ್ರೀಡಾಪಟುಗಳಿಗೆ ನೀವು ಫೋನ್ ಮಾಡಿದ್ದು ನೋಡಿದ್ದೇನೆ.
ಮೋದಿ: ನೀವು 75 ದಿನಗಳ ಫಿಟ್ನೆಸ್ ಚಾಲೆಂಜ್ ಹಮ್ಮಿಕೊಂಡಿದ್ದೀರಿ ಅದರಲ್ಲಿ ಏನು ಮಾಡುತ್ತೀರಿ?
ಅಂಕಿತ್: ಅದರಲ್ಲಿ 5 ರೂಲ್ಸ್ ಫಾಲೋ ಮಾಡಬೇಕು, ಮೊದಲನೆಯದಾಗಿ ದಿನಕ್ಕೆ 2 ಟೈಂ ವ್ಯಾಯಾಮ ಮಾಡಬೇಕು. ಒಂದು ಒಳಾಂಗಣ, ಇನ್ನೊಂದು ಹೊರಾಂಗಣ ವ್ಯಾಯಾಮ. ಎರಡೂ ಹೊರಾಂಗಣ ಆದರೂ ಏನೂ ಸಮಸ್ಯೆ ಇಲ್ಲ. ಎರಡನೆಯದಾಗಿ 4 ಲೀ. ನೀರು ಕುಡಿಯಬೇಕು, ಒಂದು ಪುಸ್ತಕ ಓದಬೇಕು. ಇನ್ನೊಂದು ನಿಯಮವೆಂದರೆ ಆಹಾರದ ಕಠಿಣ ಪಥ್ಯ ಅನುಸರಿಸಬೇಕು. ಹೇಗೆ ದೈಹಿಕ ಪ್ರಗತಿ ಆಗಿದೆ ಎಂಬುದನ್ನು ಗಮನಿಸಲು ಆಗಾಗ ಸೆಲ್ಫಿ ಹೊಡೆದುಕೊಳ್ಳಬೇಕು.
ಮೋದಿ: ಒಳ್ಳೇದು..... ಇಂದು ಸ್ವಚ್ಛತೆ ಬಗ್ಗೆ ಜನರು ಸದಭಿ ರುಚಿ ಬೆಳೆಸಿಕೊಳ್ಳುತ್ತಿದ್ದಾರೆ. ಕುಟುಂಬದಲ್ಲಿ ಇಂದು ಮಕ್ಕಳು ಕೂಡ ತಮ್ಮ ಅಜ್ಜನಿಗೆ ಕೊಳೆ ಮಾಡಬೇಡ ಎಂದು ಹೇಳುತ್ತಾರೆ. ಹೀಗೆ ಒಂದು ಉತ್ತಮ ವಾತಾವರಣ ಸೃಷ್ಟಿಯಾಗುತ್ತಿದೆ. ನಡೀರಿ ಅಂಕಿತ್.. ತುಂಬಾ ಉತ್ತಮ ಕೆಲಸ ಮಾಡುತ್ತಿದ್ದೀರಿ.
ಯಾರು ಈ ಅಂಕಿತ್
ಅಂಕಿತ್ ಹರ್ಯಾಣ ಮೂಲದ ಫಿಟ್‌ನೆಸ್ ಗುರು, ದೇಸಿ ಕುಸ್ತಿ ಪಟುವೂ ಹೌದು. ಸಾಮಾನ್ಯ ಕೃಷಿಕ ಕುಟು೦ಬದ ಮಧ್ಯಮ ವರ್ಗದ ಯುವಕ ಅಂಕಿತ್ ತಂದೆ ರೈತರಾಗಿದ್ದರೆ, ತಾಯಿ ಗೃಹಿಣಿ, ಅಂಕಿತ್ ವಿಶೇಷಎಂದರೆ ಯಾವುದೇ ಯಂತ್ರೋಪಕರಣಗಳ ಮೂಲಕ ಜಿಮ್ ಮಾಡದೇ ಕೇವಲ ದೇಸಿ ದೈಹಿಕ ವರ್ಕ್ ಔಟ್ (ವ್ಯಾಯಾಮ) ಮೂಲಕ ಅಂಕಿತ್ ದೇಹ ವನ್ನು ಫಿಟ್ ಆಗಿರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಕಾರಣಕ್ಕೆ ಅಂಕಿತ್ ಸಾಮಾಜಿಕ ಜಾಲತಾಣದಲ್ಲಿ ಜನ ಪ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅಂಕಿತ್ ಬರೋಬ್ಬರಿ 37 ಲಕ್ಷ ಫಾಲೋವರ್ಸ್ ಇದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ