
ಚೆನ್ನೈ(ಅ. 04) ಮದ್ರಾಸ್ ಹೈ ಕೋರ್ಟ್(Madras High Court) ಮಹತ್ವದ ಆದೇಶವೊಂದನ್ನು ನೀಡಿದ್ದು ಸಿನಿಮಾ ಮಂದಿರಗಳೆ ವೀಕ್ಷಕರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ತಿಳಿಸಿದೆ. ಹೊರಗಿನಿಂದ ಬರುವ ನೀರನ್ನು ನೀಡಬಾರದು ಎಂದು ತಿಳಿಸಿದೆ.
ನ್ಯಾಯಮೂರ್ತಿ ಎಸ್‌ಎಂ ಸುಬ್ರಮಣಿಯನ್ ಪೀಠ ಮಹತ್ವದ ಆದೇಶ ನೀಡಿದೆ. ಹೊರಗಿನಿಂದ ನೀರು ತರುವ ಪರಿಪಾಠ ಬಿಡಬೇಕು. ಸಿನಿಮಾ ಮಂದಿರದಲ್ಲಿಯೇ ನೀರು ಪೂರೈಕೆ ಘಟಕ ಸ್ಥಾಪನೆ ಮಾಡಬೇಕು ಎಂದು ತಿಳಿಸಿದೆ.
2016 ರಲ್ಲಿ ಜಿ ದೇವರಾಜನ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಮಾತು ಹೇಳಿದೆ. ಸಿನಿಮಾ ಮಂದಿರದಲ್ಲಿ ಎಂಆರ್ ಪಿಗಿಂತ( Maximum Retail Price (MRP)) ಅತಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಇದಕ್ಕೆ ತಡೆ ಹಾಕಬೇಕು ಎಂದು ಅರ್ಜಿ ಸಕ್ಕಿಸಿದ್ದರು.
ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯುವುದರಿಂದ ಏನು ಲಾಭ?
ಭದ್ರತೆ ಕಾರಣದಿಂದಲೂ ಹೊರಗಿನಿಂದ ನೀರು ತರುವುದು ಸರಿ ಅಲ್ಲ. ವಾಟರ್(Water) ಕೂಲರ್ ಗಳನ್ನು ಸನಿಮಾ ಮಂದಿರಗಳೆ ಸ್ಥಾಪನೆ ಮಾಡಬೇಕು. ಇಲ್ಲವಾದರೆ ಅಂಥ ಥಿಯೇಟರ್ ಗಳ ಲೈಸನ್ಸ್ ರದ್ದು ಮಾಡಲಾಗುತ್ತದೆ ಎಂದು ಪೀಠ ಎಚ್ಚರಿಕೆ ನೀಡಿದೆ.
ವಾಟರ್ ಪ್ಯೂರಿಫೈರ್ ಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುವಂತೆ ನಿರ್ವಹಿಸಬೇಕು. ಸಿನಿಮಾ ಶುರುವಾಗುವುದಕ್ಕೆ ಮುನ್ನವೇ ಕುಡಿಯುವ ನೀರು ಲಭ್ಯ ಇರಬೇಕು. ಒಂದು ವೇಳೆ ನೀರು ಲಭ್ಯ ಇಲ್ಲ ಎಂದಾದರೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ನ್ಯಾಯಾಲಯ ತಿಳಿಸಿದೆ. ಸಿನಿಮಾ ಮಂದಿರದ ಮಾಲೀಕ ಈ ನಿಯಮಕ್ಕೆ ತಪ್ಪಿದರೆ ದಂಡ ತೆತ್ತಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ