'ಮಕ್ಕಳ ದಿನಾಚರಣೆ' ಗೂಗಲ್ ಡೂಡಲ್ ವಿಶ್; ಮಕ್ಕಳು ಫುಲ್ ಖುಷ್!

By Web Desk  |  First Published Nov 14, 2019, 11:03 AM IST

ಇಂದು ಮಕ್ಕಳ ದಿನಾಚರಣೆ. ಚಾಚಾ ಜವಹರ್‌ಲಾಲ್ ನೆಹರು ಹುಟ್ಟುಹಬ್ಬವಾದ ಇಂದು ದೇಶಾದ್ಯಂತ ಸಡಗರ ಸಂಭ್ರಮದಿಂದ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಗೂಗಲ್ ಡೂಡಲ್ ನೆಹರು ಹುಟ್ಟುಹಬ್ಬವನ್ನು ಆಚರಿಸಿದೆ. 


ಇಂದು ಮಕ್ಕಳ ದಿನಾಚರಣೆ. ಚಾಚಾ ನೆಹರು ಅವರ ಹುಟ್ಟುಹಬ್ಬದ ನೆನಪಾಗಿ ಇಡೀ ದೇಶ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತದೆ. ಶಾಲಾ ಮಕ್ಕಳಲ್ಲಿ ಸಡಗರ, ಸಂಭ್ರಮ ಜಾಸ್ತಿ.  ಎಲ್ಲ ಪ್ರಮುಖ ದಿನಾಚರಣೆಗಳಿಗೆ, ವಿಶೇಷಗಳಿಗೆ ವಿಶ್ ಮಾಡುವ ಗೂಗಲ್ ದೂಡಲ್ ಎಂದಿನಂತೆ ಮಕ್ಕಳ ದಿನಾಚರಣೆಗೆ ವಿಶ್ ಮಾಡಿದೆ. 

ಗುರ್ಗಾಂವ್‌ನ ದಿವ್ಯಾಂಶಿ ಸಿಂಘಾನ್ ಬರೆದಿರುವ ಡ್ರಾಯಿಂಗ್‌ವೊಂದನ್ನು ತೆಗೆದುಕೊಂಡು ಗೂಗಲ್ ಡೂಡಲ್ ವಿಶ್ ಮಾಡಿದೆ.  7 ವರ್ಷದ ಈ ಬಾಲಕ ಕಾಡಿನ ಮಹತ್ವವನ್ನು ತಿಳಿಸುವ ಚಿತ್ರವನ್ನು ಬಿಡಿಸಿದ್ದಾನೆ. ಮುಂದಿನ ಜನಾಂಗ ಡಿಫಾರೆಸ್ಟ್ರೇಶನ್‌ನಿಂದ ನರಳಬಾರದು ಎಂಬ ಸಂದೇಶ ನೀಡಿದ್ದಾನೆ. 

Tap to resize

Latest Videos

ಜವಹರ್‌ಲಾಲ್ ನೆಹರು ಸಾಯುವುದಕ್ಕೂ ಮೊದಲು ನವೆಂಬರ್ 20 ಕ್ಕೆ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು.  ನೆಹರೂರವರು 1964 ರಲ್ಲಿ ವಿಧಿವಶರಾಗುತ್ತಾರೆ. ಆ ನಂತರ ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲು ಅವಿರೋಧವಾಗಿ ಸಂಸತ್‌ನಲ್ಲಿ ನಿರ್ಧರಿಸಲಾಯಿತು. 

 

click me!