ಡಿಜಿಟಲ್ ಸ್ಟ್ರೈಕ್ ಬೆನ್ನಲ್ಲೇ ಚೀನಾಕ್ಕೆ ರಸ್ತೆ, ರೈಲು, ಟೆಲಿಕಾಂ ಶಾಕ್‌!

By Kannadaprabha News  |  First Published Jul 2, 2020, 8:09 AM IST

ಚೀನಾಕ್ಕೀಗ ರಸ್ತೆ, ರೈಲು, ಟೆಲಿಕಾಂ ಶಾಕ್‌| ಚೀನಿ ಕಂಪನಿಗೆ ಕೇಂದ್ರ ಸರ್ಕಾರದ ಗುತ್ತಿಗೆ ಇಲ್ಲ| ಬಿಎಸ್‌ಎನ್‌ಎಲ್‌ 4ಜಿಗೆ ಚೀನಿ ಉಪಕರಣ ಬಳಕೆ ಇಲ್ಲ| ಹೆದ್ದಾರಿ ನಿರ್ಮಾಣದಿಂದಲೂ ಡ್ರ್ಯಾಗನ್‌ ಔಟ್‌: ಗಡ್ಕರಿ


ನವದೆಹಲಿ(ಜು.02): ಲಡಾಖ್‌ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ಚೀನಾಕ್ಕೆ ಪಾಠ ಕಲಿಸಲು ಸೋಮವಾರವಷ್ಟೇ ಆ ದೇಶದ 59 ಆ್ಯಪ್‌ಗಳಿಗೆ ನಿಷೇಧ ಹೇರಿದ್ದ ಕೇಂದ್ರ ಸರ್ಕಾರ, ಇದೀಗ ತನ್ನ ಸಚಿವಾಲಯಗಳ ಮೂಲಕ ಮತ್ತಷ್ಟುಶಾಕ್‌ ನೀಡಿದೆ. ಚೀನಾ ಮೂಲದ ಕಂಪನಿಗಳ ಜೊತೆಗೆ ಯಾವುದೇ ಒಪ್ಪಂದ ಮಾಡಿಕೊಳ್ಳದೇ ಇರುವ ಮತ್ತು ಚೀನಾ ಕಂಪನಿಗಳ ಉಪಕರಣಗಳನ್ನು ಬಳಸದೇ ಇರಲು ಕೇಂದ್ರ ಸರ್ಕಾರದ 4 ಸಚಿವಾಲಯಗಳು ನಿರ್ಧರಿಸಿವೆ.\

ಗಡಿಯಲ್ಲಿ ಯುದ್ಧದ ಕಾರ್ಮೋಡ: ಭಾರತದ 30,000 ಯೋಧರು, ಟ್ಯಾಂಕ್‌ಗಳು ಗಾಲ್ವಾನ್‌ಗೆ!

Tap to resize

Latest Videos

undefined

4ಜಿ ಸೇವೆ ನವೀಕರಣಕ್ಕೆ ಕೆಲ ದಿನಗಳ ಹಿಂದಷ್ಟೇ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ಗಳು ಜಾಗತಿಕ ಟೆಂಡರ್‌ ಆಹ್ವಾನಿಸಿದ್ದವು. ಆದರೆ ವಿದೇಶಿ ಕಂಪನಿಗಳ ಬದಲಾಗಿ ಮೇಕ್‌ ಇನ್‌ ಇಂಡಿಯಾ ಯೋಜನೆಗಳಿಗೆ ಆದ್ಯತೆ ನೀಡಲು ಮತ್ತು ದೇಶೀಯ ಕಂಪನಿಗಳಿಗೆ ಆದ್ಯತೆ ನೀಡಲು ಹಳೆಯ ಟೆಂಡರ್‌ ರದ್ದುಪಡಿಸಲು ನಿರ್ಧರಿಸಲಾಗಿದೆ.

ಈ ಸಂಬಂಧ ದೂರಸಂಪರ್ಕ ಇಲಾಖೆ ರಚಿಸಿದ 6 ಸದಸ್ಯರ ತಂಡ ವರದಿ ನೀಡಿದ ಬಳಿಕ ಮುಂದಿನ 2 ವಾರಗಳಲ್ಲಿ 4ಜಿ ನವೀಕರಣಕ್ಕೆ ಹೊಸ ಟೆಂಡರ್‌ ಆಹ್ವಾನಿಸಲು ಬಿಎಸ್‌ಎನ್‌ಎಲ್‌ ನಿರ್ಧರಿಸಿದೆ. ಈ ನಿರ್ಧಾರ ಪರೋಕ್ಷವಾಗಿ ಚೀನಾ ಕಂಪನಿಗಳನ್ನು ದೂರ ಇಡುವ ಯತ್ನವಾಗಿದೆ.

ಗಡಿಯಲ್ಲಿ ಯುದ್ಧದ ಕಾರ್ಮೋಡ: ಭಾರತದ 30,000 ಯೋಧರು, ಟ್ಯಾಂಕ್‌ಗಳು ಗಾಲ್ವಾನ್‌ಗೆ!

ಮತ್ತೊಂದೆಡೆ, ಹೆದ್ದಾರಿ ನಿರ್ಮಾಣದ ಯಾವುದೇ ಯೋಜನೆಗಳಲ್ಲೂ ಚೀನಾ ಕಂಪನಿಗಳ ಸಹಭಾಗಿತ್ವಕ್ಕೆ ಅವಕಾಶ ನೀಡಲಾಗದು ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಕಡ್ಡಿ ಮುರಿದಂತೆ ಹೇಳಿದ್ದಾರೆ. ಅಲ್ಲದೆ ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೋದ್ಯಮಗಳಲ್ಲೂ ಚೀನಾ ಪಾಲುದಾರಿಕೆಯಾಗದಂತೆ ಸರ್ಕಾರ ಕ್ರಮ ವಹಿಸುತ್ತದೆ ಎಂದು ಹೇಳಿದ್ದಾರೆ.

ಇನ್ನು ಭಾರತೀಯ ರೈಲ್ವೆ ಕೂಡಾ ಥರ್ಮಲ್‌ ಕ್ಯಾಮೆರಾಗಳ ಪೂರೈಕೆಗೆ ನೀಡಿದ್ದ ಟೆಂಡರ್‌ ಕೂಡಾ ರದ್ದಪಡಿಸಿದೆ. ಹಾಲಿ ಇರುವ ನಿಯಮಗಳ ಚೀನಾ ಕಂಪನಿಗಳಿಗೆ ಲಾಭ ತರುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

click me!