
ಲಂಡನ್(ಜೂ.16): ಗಡಿಯಲ್ಲಿ ಚೀನಾ ಹಾಗೂ ಪಾಕಿಸ್ತಾನಗಳು ಪದೇ ಪದೇ ಕ್ಯಾತೆ ತೆಗೆಯುತ್ತಿರುವ ನಡುವೆಯೇ, ಆ ಎರಡೂ ದೇಶಗಳಿಗೆ ಹೋಲಿಸಿದರೆ ಭಾರತದ ಬಳಿ ಅಣ್ವಸ್ತ್ರಗಳ ಸಂಖ್ಯೆ ಕಡಿಮೆ ಇದೆ ಎಂಬ ಕಳವಳಕಾರಿ ವರದಿಯೊಂದು ಬಿಡುಗಡೆಯಾಗಿದೆ.
ಸ್ವೀಡನ್‌ನ ಚಿಂತಕರ ಚಾವಡಿಯಾಗಿರುವ ‘ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ’ಯ ವರದಿ ಪ್ರಕಾರ, ಕಳೆದೊಂದು ವರ್ಷದಲ್ಲಿ ಭಾರತದ ಬತ್ತಳಿಕೆಗೆ 10 ಅಣ್ವಸ್ತ್ರಗಳು ಸೇರ್ಪಡೆಯಾಗಿವೆ. ಈ ಮೂಲಕ ಭಾರತದ ಬಳಿ ಇರುವ ಅಣ್ವಸ್ತ್ರಗಳ ಸಂಖ್ಯೆ 150ಕ್ಕೇರಿಕೆಯಾಗಿದೆ. ಆದರೆ 320 ಅಣ್ವಸ್ತ್ರ ಸಿಡಿತಲೆ ಹೊಂದಿರುವ ಚೀನಾ, 160 ಅಣ್ವಸ್ತ್ರ ಸಿಡಿತಲೆ ಹೊಂದಿರುವ ಪಾಕಿಸ್ತಾನಕ್ಕೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಇದೆ ಎಂದು ಸೋಮವಾರ ಬಿಡುಗಡೆಯಾಗಿರುವ ವರದಿ ವಿವರಿಸಿದೆ. ಅಮೆರಿಕ 5800 ಸಿಡಿತಲೆ ಹೊಂದಿದ್ದರೆ, ರಷ್ಯಾ 6375 ಹಾಗೂ ಬ್ರಿಟನ್ 215 ಅಣ್ವಸ್ತ್ರಗಳನ್ನು ಹೊಂದಿದೆ ಎಂದು ವರದಿ ತಿಳಿಸಿದೆ.
ಬದಲಾಗಲಿದೆ ನ್ಯೂಕ್ಲಿಯರ್ ನೋ ಫಸ್ಟ್ ಪಾಲಿಸಿ?:ರಾಜನಾಥ್ ಹೇಳಿಕೆಗೆ ಪಾಕ್ ಕಸಿವಿಸಿ!
ಯಾರ ಬಳಿ ಎಷ್ಟು ಅಣ್ವಸ್ತ್ರ?
ದೇಶ| 2019| 2020
ಚೀನಾ| 290| 320
ಪಾಕಿಸ್ತಾನ| 150-160| 160
ಭಾರತ| 130-140| 150
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ