ಚೀನಾ ನಮ್ಮ ನಿಕಟ ಸ್ನೇಹಿತ; ಆದರೆ, ಭಾರತ ನಮ್ಮ ಸೋದರ ದೇಶ: ಶ್ರೀಲಂಕಾ ರಾಯಭಾರಿ

By Santosh Naik  |  First Published Sep 20, 2022, 2:34 PM IST

ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ದೇಶವನ್ನು ತೊರೆದ ಪ್ರಹಸನ ಹಾಗೂ ದೇಶದ ರಾಜಕೀಯ ಅಸ್ಥಿರತನೆ ನಡುವೆಯೂ ಚೀನಾದ ಸಂಶೋಧನಾ ಹಡಗು 'ಯುವಾನ್ ವಾಂಗ್ 5' ಅನ್ನು ಡಾಕಿಂಗ್ ಮಾಡಲು ಅನುಮತಿಸುವ ನಿರ್ಧಾರವನ್ನು "ಅಧಿಕಾರಿಗಳ" ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಶ್ರೀಲಂಕಾದ ರಾಯಭಾರಿ ಮೊರಗೋಡ ಹೇಳಿದ್ದಾರೆ.


ನವದೆಹಲಿ (ಸೆ. 20): ಭಾರತದಲ್ಲಿರುವ ಶ್ರೀಲಂಕಾದ ಹೈಕಮಿಷನರ್ ಮಿಲಿಂದ ಮೊರಗೋಡ ಅವರು ಸೋಮವಾರ,  ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ "ಬಲವಾದ ಜೀವಸೆಲೆ" ಒದಗಿಸಿದ್ದಕ್ಕಾಗಿ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದರು ಮತ್ತು ಇದು ತಮ್ಮ ದೇಶದ ಆರ್ಥಿಕ ಪುನರುಜ್ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಆಶಿಸಿದರು. ಭಾರತಕ್ಕೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಈ ಸಮಯದಲ್ಲಿ ಯಾವ ದೇಶವೂ ನಮಗೆ ಸಹಾಯ ಮಾಡಲು ಮುಂದೆ ಬಂದಿರಲಿಲ್ಲ. ಈ ವೇಳೆ ಬದುಕುವ ಜೀವಸೆಲೆ ನಮಗೆ ಸಿಕ್ಕಿದ್ದು ಭಾರತದಿಂದ ಮಾತ್ರ. ಮುಂದಿನ ದಿನಗಳಲ್ಲಿ ಆರ್ಥಿಕ ಪುನರುಜ್ಜೀವನದ ಹಾದಿಯಲ್ಲಿ ಖಂಡಿತವಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅವರು ದೆಹಲಿಯ ಭಾರತೀಯ ಮಹಿಳಾ ಪ್ರೆಸ್‌ ಕಾರ್ಪ್ಸ್‌ (ಐಡಬ್ಲ್ಯೂಪಿಸಿ) ಸಂವಾದದಲ್ಲಿ ಹೇಳಿದರು. ಕಳೆದ ತಿಂಗಳು ದ್ವೀಪದ ದಕ್ಷಿಣ ಬಂದರಿನಲ್ಲಿ ಚೀನಾದ ಸಂಶೋಧನಾ ಹಡಗಿನ ಡಾಕಿಂಗ್ ವಿಷಯದ ಬಗ್ಗೆ ಮಾತನಾಡಿದ ಲಂಕಾ ರಾಯಭಾರಿ ತಮ್ಮ ದೇಶವು ಸಮಸ್ಯೆಗಳನ್ನು ತಪ್ಪಿಸಲು ಭಾರತದೊಂದಿಗೆ ಸಹಕಾರಕ್ಕಾಗಿ ಚೌಕಟ್ಟಿನ ಮೇಲೆ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಚೀನಾದ ಹಡಗು ಶ್ರೀಲಂಕಾದ ದ್ವೀಪದಲ್ಲಿ ಡಾಕಿಂಗ್‌ ಮಾಡುವಂಥ ಸಮಯದಲ್ಲಿ ಲಂಕಾ ರಾಜಕೀಯ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು. ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ದೇಶವನ್ನು ತೊರೆಯುವ ಪ್ರಹಸನ ಮಾಡುತ್ತಿದ್ದರೆ, ಇನ್ನೊಂದೆಡೆ ಲಂಕಾದಲ್ಲಿ ರಾಜಕೀಯ ಅಸ್ಥಿರತೆಯಿಂದಾಗಿ ಜನಾಕ್ರೋಶ ಮುಗಿಲು ಮುಟ್ಟಿತ್ತು.

ಆ ಸಮಯದಲ್ಲಿ ಚೀನಾದ ಹಡಗು 'ಯುವಾನ್ ವಾಂಗ್ 5'  (Yuvan Wong)ಅನ್ನು ಡಾಕಿಂಗ್ ಮಾಡಲು ಅನುಮತಿಸುವ ನಿರ್ಧಾರವನ್ನು "ಅಧಿಕಾರಿಗಳ" ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಮೊರಗೋಡ ಹೇಳಿದರು. ನಾವು ನಮ್ಮ ದೇಶದಲ್ಲಿಯೇ ಅಸ್ತವ್ಯಸ್ಥ ಸ್ಥಿತಿಯಲ್ಲಿದ್ದಾಗ ಈ ಡಾಕಿಂಗ್‌ಗೆ ಅನುಮೋದನೆಯನ್ನು ನೀಡಲಾಯಿತು, ಎಂದು ಸುದ್ದಿ ಸಂಸ್ಥೆ ಪಿಟಿಐ ರಾಯಭಾರಿಯ ಮಾತನ್ನು ಉಲ್ಲೇಖಿಸಿದೆ. ಆದರೆ, ಚೀನಾದ ಈ ಹಡಗಿನ ಡಾಕಿಂಗ್‌ ವಿಚಾರದಲ್ಲಿಯಾಗಲಿ ಅಥವಾ ನಿರ್ಧಾರದಲ್ಲಿಯಾಗಲಿ ಯಾವುದೇ ರಾಜಕೀಯ ವಿಚಾರಗಳಿಲ್ಲ ಎಂದು ಹೇಳಿದರು.

ನಮ್ಮ ಸ್ಥಿತಿಯಿಂದ ನಾವು ಕಲಿತ ಪಾಠವೆಂದರೆ ಭಾರತದೊಂದಿಗೆ (India) ಅತ್ಯಂತ ನಿಕಟ ಸಹಕಾರ ಮತ್ತು ಸಮನ್ವಯವನ್ನು ಹೊಂದಿರಬೇಕು ಮತ್ತು ನಾವು ಸಹಕಾರದ ಚೌಕಟ್ಟನ್ನು ಹೊಂದಿರಬೇಕು ಎನ್ನುವುದು. ನಾವು ಅದನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಚರ್ಚಿಸುತ್ತಿದ್ದೇವೆ" ಎಂದು ಮೊರಗೋಡ ಹೇಳಿದರು. ಈ ಪ್ರದೇಶದಲ್ಲಿ ಸಂಪೂರ್ಣ ಭದ್ರತೆಗೆ ಭಾರತವೇ ಆಧಾರವಾಗಿದೆ ಎಂದು ಅವರು ಇದೇ ವೇಳೆ  (Milinda Moragoda) ಹೇಳಿದ್ದಾರೆ.

Nithyananda Life in Danger: ಶ್ರೀಲಂಕಾದಲ್ಲಿ ವೈದ್ಯಕೀಯ ಆಶ್ರಯ ಪಡೀತಾರಾ ಸ್ವಯಂಘೋಷಿತ ದೇವಮಾನವ..?

ಚೀನಾ ಬಹಳ ಆತ್ಮೀಯ ಸ್ನೇಹಿತ. ಆದರೆ ಭಾರತ ನಮ್ಮ ಸಹೋದರ ಮತ್ತು ಸಹೋದರಿ; ನಾನು ಇದನ್ನು ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಮಾತಿನಿಂದ ಉಲ್ಲೇಖಿಸುತ್ತೇನೆ ...," ಎಂದು ಸುದ್ದಿ ಸಂಸ್ಥೆ ಎಎನ್‌ಐ ಇವರ ಮಾತನ್ನು ಉಲ್ಲೇಖಿಸಿದೆ.

Tap to resize

Latest Videos

ಶ್ರೀಲಂಕಾಗೆ ಡಾರ್ನಿಯರ್ ಯುದ್ಧ ವಿಮಾನ ಉಡುಗೊರೆ ನೀಡಿದ ಭಾರತ

ತಮಿಳುನಾಡಿನ ಮೀನುಗಾರರು (Tamil Nadu Fisherman) ದೊಡ್ಡ ಟ್ರಾಲರ್‌ಗಳಲ್ಲಿ ಮೀನುಗಾರಿಕೆಗೆ ಹೋಗುತ್ತಾರೆ ಮತ್ತು ಶ್ರೀಲಂಕಾದ (Sri Lanka) ಉತ್ತರ ಭಾಗದ ಮೀನುಗಾರರು ಮೀನುಗಾರಿಕೆಗೆ ಬಂದಾಗ ಅವರು ಮಿತಿಮೀರಿದ ಮೀನುಗಾರಿಕೆಯನ್ನು ಪರಸ್ಪರ ಆರೋಪಿಸುತ್ತಾರೆ ಎನ್ನುವ ಬಗ್ಗೆ ಮಾತನಾಡಿದ ಅವರು, ಮೀನುಗಾರರ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ ಮತ್ತು ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಕಾನೂನು ಸ್ಪಷ್ಟವಾಗಿದೆ, ಇದರಲ್ಲಿ ಮೂರು ಅಂಶಗಳಿವೆ, ಸಮುದ್ರದ ಗಡಿಗಳು, ಎರಡನೆಯದಾಗಿ, ಪರಿಸರ ಭಾಗದಲ್ಲಿ ಮೀನುಗಾರಿಕೆ ವಲಯವನ್ನು ಅತಿಕ್ರಮಿಸಬಾರದು ಮತ್ತು ಮೂರನೆಯದಾಗಿ ಮೀನುಗಾರಿಕೆಯ ಮೇಲೆ ಅವಲಂಬಿತವಾದ ಜೀವನೋಪಾಯವು ತಮ್ಮದೇ ಆದ ನೀರಿನಲ್ಲಿ ಮೀನುಗಾರಿಕೆಯನ್ನು ಬಯಸೋದಿಲ್ಲ ಎನ್ನುವುದಾಗಿದೆ. ಆಳ ಸಮುದ್ರದ ಮೀನುಗಾರಿಕೆಯ ಕುರಿತು ಚರ್ಚೆಗಳು ನಡೆದಿವೆ, ಇದು ಈ ನಿರಂತರ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ ಎಂದಿದ್ದಾರೆ.

click me!