
ನವದೆಹಲಿ(ಸೆ.25): ಗಡಿ ನಿಯಂತ್ರಣ ರೇಖೆ ಬಳಿಕ ಯಥಾ ಸ್ಥಿತಿ ಕಾಪಾಡಬೇಕೆಂಬ ನಿಯಮ ಉಲ್ಲಂಘಿಸಿದ ಚೀನಾ, ವಾಸ್ತವ ರೇಖೆಯನ್ನು ಬದಲಿಸುವ ಪ್ರಯತ್ನ ಮಾಡಿದೆ. ನಿಯಮ ಉಲ್ಲಂಘಿಸಿ ಕಳೆದ 3 ತಿಂಗಳನಿಂದ ಅತಿಕ್ರಮ ಪ್ರವೇಶ ಮಾಡಿದೆ. ಚೀನಾ ನಡೆಯನ್ನು ವಿರೋಧಿಸಿದ ಭಾರತೀಯ ಸೇನೆ ತಕ್ಕ ತಿರುಗೇಟು ನೀಡಿತ್ತು. ಹೀಗಾಗಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆ ಭಾರತ ಹಲವು ಸುತ್ತಿನ ಮಾತುಕತೆ ಯತ್ನ ಮಾಡಿದೆ. ಆದರೆ ಚೀನಾ ಹೊಸ ಕ್ಯಾತೆ ತೆಗೆದಿದೆ.
ಲಡಾಖ್ ಗಡಿ ಸಂಘರ್ಷ; 6 ವಲಯ ಪ್ರದೇಶ ವಶಪಡಿಸಿಕೊಂಡ ಭಾರತೀಯ ಸೇನೆ!.
ಚೀನಾ ಕಳೆದ ಕೆಲ ತಿಂಗಳಲ್ಲಿ ಗಡಿ ನಿಯಮ ಉಲ್ಲಂಘಿಸಿ ಸ್ವಾಧೀನಪಡಿಸಿಕೊಂಡಿರುವ ಪೂರ್ವ ಲಡಾಖ್ ಪ್ರದೇಶದಲ್ಲಿ ಖಾಯಂ ಪೋಸ್ಟ್ ಮಾಡುವ ತಂತ್ರದಲ್ಲಿದೆ. ಇದರ ನಡುವೆ ಚೀನಾ, ಭಾರತದ ಮೇಲೆ ಒತ್ತಡ ತಂತ್ರ ಪ್ರಯೋಗಿಸುತ್ತಿದೆ. ಮಾತುಕತೆಗೂ ಮುನ್ನ ಪಾಂಗೊಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಆಯಕಟ್ಟಿನ ಪ್ರದೇಶದಲ್ಲಿ ಠಿಕಾಣಿ ಹೂಡಿರುವ ಭಾರತೀಯ ಸೇನೆ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದೆ.
ತಂಟೆಗೆ ಬಂದ್ರೆ ಹುಷಾರ್, ಚೀನಾಕ್ಕೆ ಗಡಿಯಲ್ಲಿ ಭಾರತದ 'ಡಬಲ್' ಶಾಕ್
ಕೊನೆಯ ಬಾರಿ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಚೀನಾ ಸೇನೆ ತನ್ನ ವಾದವನ್ನು ಮುಂದಿಟ್ಟಿದೆ. ಪ್ಯಾಂಗಾಂಗ್ ಸೋರವರದ ಬಳಿ ಚೀನಾ ಸೇನೆ ಹಿಮ್ಮೆಟ್ಟಿಸಿ ಭಾರತ ವಶಪಡಿಸಿಕೊಂಡ ಪ್ರದೇಶದಿಂದ ಜಾಗ ಖಾಲಿ ಮಾಡಲು ಆಗ್ರಹಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಭಾರತೀಯ ಸೇನೆ, ಮೊದಲು LAC ರೋಡ್ ಮ್ಯಾಪ್ ನೋಡಿ. ರೋಡ್ ಮ್ಯಾಪ್ ಕುರಿತು ಖಚಿತತೆಯಾಗಲಿ ಎಂದಿದೆ.
ಪದೇ ಪದೇ ಭಾರತೀಯ ಸೇನೆಯನ್ನು ಕೆಣಕಿದ ಚೀನಾ ಸೇನೆಗೆ ಅದೇ ಭಾಷೆಯಲ್ಲಿ ಭಾರತೀಯ ಸೇನೆ ಉತ್ತರ ನೀಡಿದೆ. ಭಾರತೀಯ ಸೇನೆ ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿರುವ ರೆಚಿನ್ ಲಾ, ರೆಜಾಂಗ್ ಲಾ, ಮತ್ತು ಮುಕ್ಪಾರಿಗಳಂತಹ ನಿರ್ಣಾಯಕ ಶಿಖರ್ ಪ್ರದೇಶ ಆಕ್ರಮಿಸಿಕೊಂಡಿದೆ. ಇದರಿಂದ ಚೀನಾ ಸೇನೆಯ ನಿಯಂತ್ರಣದಲ್ಲಿದ್ದ ಸ್ಪ್ಯಾಂಗೂರ್ ಗ್ಯಾಪ್‌ನಲ್ಲಿ ಭಾರತದ ಪ್ರಾಬಲ್ಯ ಸಾಧಿಸಿದೆ. ಇದು ಚೀನಾ ನಿದ್ದೆಗೆಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ