
ನವದೆಹಲಿ(ಏ.08): ಚೀನಾದವರು(China) ಭಾರತದ(India) ಮೇಲೆ ಕೇವಲ ಗಡಿ ತಂಟೆಯ ಮೂಲಕವಷ್ಟೇ ಅಲ್ಲ, ವಿದ್ಯುತ್ ಗ್ರಿಡ್‌ಗಳ ಮೇಲೂ ‘ದಾಳಿ’(Power Grid) ನಡೆಸಲು ಯತ್ನಿಸಿದ ವಿಚಾರ ಬೆಳಕಿಗೆ ಬಂದಿದೆ. ಚೀನಾ ಗಡಿ ತಗಾದೆಯ ಪ್ರಮುಖ ಕೇಂದ್ರವಾಗಿರುವ ಗಡಿ ಪ್ರದೇಶ ಲಡಾಖ್ ಹಾಗೂ ಉತ್ತರ ಭಾರತದಲ್ಲಿನ 7 ಪವರ್ ಗ್ರಿಡ್‌ಗಳ ತಂತ್ರಾಂಶಕ್ಕೆ ಚೀನಿ ಹ್ಯಾಕರ್‌ಗಳು ಕನ್ನ ಹಾಕಿ, ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಯತ್ನಿಸಿದ್ದಾರೆ. ಆದರೆ ಈ ಯತ್ನ ವಿಫಲವಾಗಿದೆ.
‘ರೆಕಾರ್ಡೆಡ್ ಫ್ಯೂಚರ್’(Recorded Future) ಎಂಬ ಖಾಸಗಿ ಗುಪ್ತಚರ ಸಂಸ್ಥೆ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ವರದಿ ಪ್ರಕಟಿಸಿದೆ. ಹ್ಯಾಕಿಂಗ್ ಯತ್ನ ನಡೆದಿದ್ದನ್ನು ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಕೂಡ ಖಚಿತಪಡಿಸಿದ್ದಾರೆ.
Sri Lanka Crisis ಇಡೀ ದೇಶವನ್ನೇ ಚೀನಾಕ್ಕೆ ಮಾರಿದ್ದೀರಿ, ಶ್ರೀಲಂಕಾ ಪ್ರಧಾನಿ ವಿರುದ್ಧ ವ್ಯಾಪಾರಿಗಳ ಆಕ್ರೋಶ!
ಚೀನಾ ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳು(Hackers) ಕಳೆದ ಆಗಸ್ಟ್‌ನಿಂದ ಈ ವರ್ಷದ ಮಾಚ್‌ರ್‍ವರೆಗೆ ಹ್ಯಾಕಿಂಗ್‌ಗೆ ಯತ್ನ ನಡೆಸಿದ್ದಾರೆ. ಭಾರತದ ವಿದ್ಯುತ್ ವಿತರಣಾ ಕೇಂದ್ರಗಳ ದತ್ತಾಂಶವು ಚೀನಾ ಪ್ರಾಯೋಜಿತ ಕಮಾಂಡ್ ಹಾಗೂ ಸರ್ವರ್‌ಗಳಿಗೆ ವರ್ಗ ಆಗುತ್ತಿತ್ತು. ಭಾರತದ ಈ ಪ್ರಮುಖ ಮೂಲಸೌಕರ್ಯ ಘಟಕಗಳ ಮಾಹಿತಿಯನ್ನು ಕಳ್ಳತನದ ಮೂಲಕ ಸಂಗ್ರಹಿಸುವುದು ಚೀನಾ ಹ್ಯಾಕರ್‌ಗಳ ಉದ್ದೇಶವಾಗಿತ್ತು ಎಂದೂ ಗುಪ್ತಚರ ವರದಿ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್(VK Singh), ‘ಚೀನಾ ಹ್ಯಾಕರ್‌ಗಳಿಂದ ಲಡಾಖ್‌ವ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು 2 ಹ್ಯಾಕಿಂಗ್ ಯತ್ನಗಳು ನಡೆದಿವೆ. ಆದರೆ ಈ ಯತ್ನಗಳನ್ನು ವಿಫಲಗೊಳಿಸಲಾಗಿದೆ. ನಮ್ಮ ರಕ್ಷಣಾ ವ್ಯವಸ್ಥೆ ಬಲವಾಗಿದ್ದು, ಇಂಥ ಸೈಬರ್ ದಾಳಿಗಳನ್ನು(Cber Attack) ಸಮರ್ಥವಾಗಿ ಎದುರಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.
ಹೃದಯಕ್ಕಾಗಿ ಕೈದಿಗಳನ್ನು ಕೊಲ್ಲುತ್ತಿರುವ ಚೀನಾದ ವೈದ್ಯರು
ಚೀನಾ: ಹೇಳಿ ಕೇಳಿ ಚೀನಾ ಕಮ್ಯೂನಿಷ್ಟ್ ರಾಷ್ಟ್ರ. ಇಲ್ಲಿ ಮಾನವ ಹಕ್ಕುಗಳಿಗೆ ಯಾವುದೇ ಬೆಲೆ ಇಲ್ಲ ಎಂಬುದು ಹಲವು ಬಾರಿ ಸಾಬೀತಾಗಿದೆ. ಈ ಮಧ್ಯೆ ಚೀನಾದಿಂದ ಒಂದು ಭಯಾನಕ ಮಾಹಿತಿಯೊಂದು ಹೊರ ಬಂದಿದೆ. ಅದೇನೆಂದರೆ ಚೀನಾದಲ್ಲಿ ಮರಣದಂಡನೆಗೊಳಗಾದ ಕೈದಿಗಳ ಸಾವಿಗೂ ಮೊದಲೇ ಅವರನ್ನು ಹತ್ಯೆ ಮಾಡಿ ಅವರ ಹೃದಯ ಹಾಗೂ ದೇಹದ ಇತರ ಅಮೂಲ್ಯ ಅಂಗಾಂಗಗಳನ್ನು ಕಸಿಯಲಾಗುತ್ತಿದೆಯಂತೆ. ಅವರು ಮೃತಪಟ್ಟಿದ್ದಾರೆ ಎಂಬುದನ್ನು ಅಧಿಕೃತವಾಗಿ ಧೃಢಪಡಿಸುವ ಮೊದಲೇ ಈ ಕೃತ್ಯವೆಸಗಲಾಗುತ್ತಿದೆ ಎಂದು ಶೈಕ್ಷಣಿಕ ಅಧ್ಯಯನವೊಂದರಿಂದ ತಿಳಿದು ಬಂದಿದೆ.
ಲಾಕ್‌ಡೌನ್ :ಶಾಂಘೈನ ಖಾಲಿ ಬೀದಿಯಲ್ಲಿ ಗಸ್ತು ತಿರುಗುತ್ತಿರುವ ರೋಬೋ ನಾಯಿ
ಹೊಸ ಶೈಕ್ಷಣಿಕ ಪತ್ರಿಕೆಯೂ ಬಹಿರಂಗಪಡಿಸಿದ ಪ್ರಕಾರ, ನೂರಾರು ಚೀನೀ ಶಸ್ತ್ರಚಿಕಿತ್ಸಕರು ಮತ್ತು ವೈದ್ಯಕೀಯ ಸಿಬ್ಬಂದಿ ಕೈದಿಗಳು ಸತ್ತಿದ್ದಾರೆ ಎಂದು ಅಧಿಕೃತವಾಗಿ ಘೋಷಿಸುವ ಮೊದಲೇ ಕಸಿ ಮಾಡುವ ಸಲುವಾಗಿ ಅವರ ಹೃದಯಗಳನ್ನು ತೆಗೆದು ಮರಣದಂಡನೆ ಕೈದಿಗಳನ್ನು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಅಂಗಾಂಗ ಕಸಿ ಸುತ್ತಲಿನ ನೈತಿಕತೆಯ ಕುರಿತಾದ ಅಂತರಾಷ್ಟ್ರೀಯ ಮಾರ್ಗಸೂಚಿಗಳು ಅಂಗ ತೆಗೆಯುವಿಕೆಯು ದಾನಿಯ ಸಾವಿಗೆ ಕಾರಣವಾಗಬಾರದು ಎಂದು ಹೇಳುತ್ತದೆ. ಆದರೆ ಈ ವಾರ ಅಮೆರಿಕನ್ ಜರ್ನಲ್ ಆಫ್ ಟ್ರಾನ್ಸ್‌ಪ್ಲಾಂಟೇಶನ್‌ನಲ್ಲಿ ಪ್ರಕಟವಾದ ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯ ಹೊಸ ಸಂಶೋಧನೆಯು ಚೀನೀ ಶಸ್ತ್ರಚಿಕಿತ್ಸಕರು ಅದನ್ನು ಮಾಡಿರಬಹುದು ಎಂದು ಹೇಳಿದೆ.
ಚೀನೀ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ತಿಳಿಸಿದಂತೆ ಫೋರೆನ್ಸಿಕ್ ಪರಿಶೀಲನೆ ನಡೆಸಿದಾಗ 2,838 ಪ್ರಕರಣಗಳಲ್ಲಿ71 ಪ್ರಕರಣಗಳಲ್ಲಿ ಈ ರೀತಿ ಆಗಿದೆ ಎಂಬುದು ಬಹಿರಂಗವಾಗಿದೆ. ಅಲ್ಲಿ ಶಸ್ತ್ರಚಿಕಿತ್ಸಕರು 'ಮೆದುಳಿನ ಸಾವಿನ ಕಾನೂನುಬದ್ಧ ನಿರ್ಣಯ' ಕ್ಕಿಂತ ಮೊದಲು ರೋಗಿಗಳ ಹೃದಯ ಅಥವಾ ಶ್ವಾಸಕೋಶವನ್ನು ತೆಗೆದುಹಾಕಿದ್ದಾರೆ. ಮಿದುಳಿನ ಮರಣವನ್ನು ಸಾಮಾನ್ಯವಾಗಿ ರೋಗಿಯು ವೆಂಟಿಲೇಟರ್ ಇಲ್ಲದೆ ಬದುಕಲು ಸಾಧ್ಯವಿಲ್ಲದ್ದ ವೈದ್ಯಕೀಯ ಸ್ಥಿತಿ ಎಂದು ವ್ಯಾಖ್ಯಾನಿಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ