ಎರಡು ವಾರ ಒಂದೇ ಮಾಸ್ಕ್ ಬಳಕೆ, ಬ್ಲ್ಯಾಕ್‌ ಫಂಗಸ್‌ಗೆ ಆಹ್ವಾನ!

By Kannadaprabha News  |  First Published May 23, 2021, 7:56 AM IST

* ದೇಶ​ದಲ್ಲಿ ಬ್ಲ್ಯಾಕ್‌ ಫಂಗಸ್‌ ಪ್ರಕ​ರ​ಣ​ಗಳು ಏರಿಕೆ 

* 2-3 ವಾರ ಒಂದೇ ಮಾಸ್ಕ್‌ ಬಳ​ಕೆ ಬ್ಲ್ಯಾಕ್‌ ಫಂಗ​ಸ್‌ಗೆ ಕಾರ​ಣ​ವಾ​ಗ​ಲಿ​ದೆ

* ಶುಚಿತ್ವ ಕಾಪಾ​ಡಿ​ಕೊ​ಳ್ಳದೇ ಇರು​ವುದು ಹಾಗೂ ತೊಳೆ​ಯದೇ ಇರುವ ಮಾಸ್ಕ್‌​ಗ​ಳನ್ನು ಬಳಕೆ ಮಾಡು​ತ್ತಿ​ರು​ವುದೇ ಸೋಂಕು ತಗು​ಲು​ವು​ದಕ್ಕೆ ಪ್ರಮುಖ ಕಾರಣ


ನವ​ದೆ​ಹ​ಲಿ(ಮೇ.23): ದೇಶ​ದಲ್ಲಿ ಬ್ಲ್ಯಾಕ್‌ ಫಂಗಸ್‌ ಪ್ರಕ​ರ​ಣ​ಗಳು ಏರಿಕೆ ಆಗು​ತ್ತಿ​ರು​ವಾ​ಗಲೇ, ಶುಚಿತ್ವ ಇಲ್ಲದ ಅಥವಾ ತೊಳೆ​ಯದೇ ಇರು​ವ ಮಾಸ್ಕ್‌​ಗ​ಳನ್ನು 2-3 ವಾರ​ಗಳ ಕಾಲ ಬಳಕೆ ಮಾಡು​ವು​ದು, ಗಾಳಿ ಆಡದ ಕೋಣೆ​ಯಲ್ಲಿ​ರು​ವು​ದು ಬ್ಲ್ಯಾಕ್‌ ಫಂಗ​ಸ್‌ ಉಗ​ಮಕ್ಕೆ ಕಾರ​ಣ​ವಾ​ಗ​ಬ​ಹುದು ಎಂದು ವೈದ್ಯರು ಎಚ್ಚ​ರಿಕೆ ನೀಡಿ​ದ್ದಾ​ರೆ.

WHO ಲಿಸ್ಟ್‌ನಲ್ಲಿಲ್ಲ ಕೊವ್ಯಾಕ್ಸೀನ್: ಭಾರತೀಯರ ವಿದೇಶ ಪ್ರಯಾಣಕ್ಕೆ ಕುತ್ತು

Latest Videos

undefined

ಬ್ಲ್ಯಾಕ್‌ ಫಂಗಸ್‌ ಪ್ರಕ​ರ​ಣ​ಗಳು ಕಂಡು​ಬಂದ ರೋಗಿ​ಗಳು ಶುಚಿತ್ವ ಕಾಪಾ​ಡಿ​ಕೊ​ಳ್ಳದೇ ಇರು​ವುದು ಹಾಗೂ ತೊಳೆ​ಯದೇ ಇರುವ ಮಾಸ್ಕ್‌​ಗ​ಳನ್ನು ಬಳಕೆ ಮಾಡು​ತ್ತಿ​ರು​ವುದೇ ಸೋಂಕು ತಗು​ಲು​ವು​ದಕ್ಕೆ ಪ್ರಮುಖ ಕಾರಣ. ಒಂದೇ ಮಾಸ್ಕ್‌ ಅನ್ನು 2-3 ವಾರ​ಗಳ ಕಾಲ ಬಳಕೆ ಮಾಡು​ವುದು ಬ್ಲ್ಯಾಕ್‌ ಫಂಗಸ್‌ ಅಭಿ​ವೃದ್ಧಿ ಆಗಲು ದಾರಿ ಮಾಡಿ​ಕೊ​ಡ​ಬ​ಹುದು ಎಂದು ಏಮ್ಸ್‌ ಆಸ್ಪತ್ರೆ ವೈದ್ಯ ಡಾ. ಪಿ. ಶರತ್‌ ಚಂದ್ರ ಎಚ್ಚರಿಸಿದ್ದಾರೆ.

ಕೊರೋನಾ ಅಬ್ಬರ ಮಧ್ಯೆ ಲಸಿಕೆ ಪಡೆದವರಿಗೊಂದು ಶುಭ ಸಮಾಚಾರ!

ಆದರೆ, ಇದಕ್ಕೆ ಯಾವುದೇ ಕ್ಲಿನಿ​ಕಲ್‌ ಸಾಕ್ಷ್ಯ​ಗ​ಳು ಲಭ್ಯ​ವಾ​ಗಿಲ್ಲ ಎಂದು ಹಲವು ಮಂದಿ ವೈದ್ಯ​ಕೀಯ ತಜ್ಞರು ಅಭಿ​ಪ್ರಾಯ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

ಇದೇ ವೇಳೆ ಅನೇಕ ಪ್ರಕ​ರ​ಣ​ಗಲ್ಲಿ ಬ್ಲ್ಯಾಕ್‌ ಫಂಗ​ಸ್‌ಗೆ ತುತ್ತಾದ ರೋಗಿ​ಗ​ಳು, ಕೊರೋನಾ ಚಿಕಿ​ತ್ಸೆಯ ವೇಳೆ ವೈದ್ಯರ ಸಲಹೆ ಇಲ್ಲದೇ ಸ್ಟಿರಾ​ಯ್ಡ್‌​ಗ​ಳನ್ನು ಪಡೆ​ದ​ಕೊ​ಳ್ಳುವ ಮೂಲ​ಕ ತಾವಾಗಿಯೇ ಅಪಾ​ಯ​ವನ್ನು ಮೈ ಮೇಲೆ ಎಳೆ​ದು​ಕೊಂಡಿ​ದ್ದಾ​ರೆ. ಹೀಗಾಗಿ ಕೊರೋ​ನಾ​ದಿಂದ ಚೇತ​ರಿ​ಸಿ​ಕೊಂಡ​ವ​ರ​ಲ್ಲಿಯೂ ಬ್ಲ್ಯಾಕ್‌ ಫಂಗಸ್‌ ಕಂಡು​ಬ​ರು​ತ್ತಿದೆ ಎಂದು ಅಪೋಲೋ ಆಸ್ಪ​ತ್ರೆಯ ವೈದ್ಯ ಡಾ| ಸುರೇಶ್‌ ಸಿಂಗ್‌ ನಾರುಕಾ ತಿಳಿ​ಸಿ​ದ್ದಾ​ರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!