ಈ ಯುದ್ಧದಲ್ಲಿ ಭಾರತ ಎಂದಿಗೂ ತಟಸ್ಥವಾಗಿಲ್ಲ, ನಾವು ಶಾಂತಿಯ ಪರವಾಗಿದ್ದೇವೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. 2022ರಲ್ಲಿ ಯುದ್ಧ ಪ್ರಾರಂಭವಾದಾಗಿನಿಂದಲು ಈ ಯುದ್ಧವನ್ನು ಕೊನೆ ಮಾಡುವ ಬಗ್ಗೆ ಭಾರತ ಪ್ರಯತ್ನಪಟ್ಟಿದೆ ಎಂದಿದ್ದಾರೆ.
ನವದೆಹಲಿ (ಆ.23): ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೈವ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮರ್ ಝೆಲೆನ್ಸ್ಕಿ ಅವರನ್ನು ಭೇಟಿಯಾದರು. ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ ಕೈವ್‌ಗೆ ಐತಿಹಾಸಿಕ ಭೇಟಿ ನೀಡಿದ ಪ್ರಧಾನಿ ಮೋದಿ, ಯುದ್ಧದಲ್ಲಿ ಮಕ್ಕಳು ಸಾವುಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಫೆಬ್ರವರಿ 2022 ರಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸಲು ಮಾತುಕತೆಗೆ ಕರೆ ನೀಡಿರುವ ಪ್ರಧಾನಿ ಮೋದಿ, "ಈ ಯುದ್ಧದಲ್ಲಿ ಭಾರತ ಎಂದಿಗೂ ತಟಸ್ಥವಾಗಿಲ್ಲ, ನಾವು ಶಾಂತಿಯ ಪರವಾಗಿದ್ದೇವೆ" ಎಂದು ಹೇಳಿದರು. ಇಂದು ಮುಂಜಾನೆ ಕೈವ್‌ನಲ್ಲಿ ಅಧ್ಯಕ್ಷ ಝೆಲೆನ್ಸ್‌ಕಿಯವರನ್ನು ಭೇಟಿಯಾದ ಪ್ರಧಾನಿ ಮೋದಿ, ಉಕ್ರೇನ್ ಅಧ್ಯಕ್ಷರನ್ನು ಅಪ್ಪಿಕೊಳ್ಳುವ ಮೊದಲು ಉಭಯ ನಾಯಕರು ಹಸ್ತಲಾಘವ ಮಾಡಿದರು. ಇಬ್ಬರೂ ಯುದ್ಧ-ಹಾನಿಗೊಳಗಾದ ಪ್ರದೇಶಗಳು ಹಾಗೂ ದೇಶದ ಹುತಾತ್ಮ ಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಪ್ರಧಾನಿ ಮೋದಿ ಅವರ ಕೈ ಝೆಲೆನ್ಸ್ಕಿಯ ಭುಜದ ಮೇಲೆ ಬಲವಾಗಿ ಉಳಿದಿತ್ತು. ಇದು ಉಕ್ರೇನ್‌ನೊಂದಿಗೆ ಭಾರತದ ಒಗ್ಗಟ್ಟಿನ ಸೂಚಕವಾಗಿದೆ.
ಈ ಯುದ್ಧ ವಿಶೇಷವಾಗಿ ಚಿಕ್ಕ ಮಕ್ಕಳಿಗೆ ವಿನಾಶಕಾರಿಯಾಗಿದೆ. ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಮಕ್ಕಳ ಕುಟುಂಬಕ್ಕೆ ನನ್ನ ಸಂತಾಪವಿದೆ. ಅವರಿಗೆ ದುಃಖವನ್ನು ಮರೆಯುವ ಶಕ್ತಿ ದೇವರು ನೀಡಲಿ ಎಂದು ನಾನು ಪ್ರಾರ್ಥನೆ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಸ್ಮಾರಕಕ್ಕೆ ಭೇಟಿ ನೀಡಿದ ಚಿತ್ರಗಳನ್ನು ಕೂಡ ಹಂಚಿಕೊಂಡಿದ್ದಾರೆ.
ಪ್ರತಿ ದಿನ 90 ರೇಪ್ ಕೇಸ್ ದಾಖಲು, 15ದಿನದಲ್ಲಿ ವಿಚಾರಣೆ ಮುಗಿಸಲು ಮೋದಿಗೆ ಪ.ಬಂಗಾಳ ಸಿಎಂ ಪತ್ರ!
1991 ರಲ್ಲಿ ಸೋವಿಯತ್ ಒಕ್ಕೂಟದಿಂದ ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರ ನರೇಂದ್ರ ಮೋದಿ ಅವರು ಉಕ್ರೇನ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ. ಈ ಭೇಟಿಯಲ್ಲಿ ಪ್ರಧಾನಿ ಮೋದಿ ಅವರು ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ, ಕಳೆದ ತಿಂಗಳು ರಷ್ಯಾ ಪ್ರವಾಸದ ಬಳಿಕ ಅವರು ಉಕ್ರೇನ್‌ಗೆ ಭೇಟಿ ನೀಡಿದ್ದಾರೆ. ಆ ಸಮಯದಲ್ಲಿ ಮಾತನಾಡಿದ್ದ ಝೆಲೆನ್ಸ್ಕಿ ಅವರು ಪ್ರಧಾನ ಮಂತ್ರಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಪ್ತ ಫೋಟೋಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಪುಟಿನ್ ಅವರನ್ನು ಮೋದಿ ತಬ್ಬಿಕೊಂಡಿದ್ದು, "ದೊಡ್ಡ ನಿರಾಶೆ ಮತ್ತು ಶಾಂತಿ ಪ್ರಯತ್ನಗಳಿಗೆ ವಿನಾಶಕಾರಿ ಹೊಡೆತ" ಎಂದು ಹೇಳಿದ್ದರು.
ಪೋಲೆಂಡ್‌ನಲ್ಲಿ ಪ್ರವಾಸಿ ಭಾರತೀಯರಿಂದ ಮೋದಿಗೆ ಅದ್ದೂರಿ ಸ್ವಾಗತ!