ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. 95 ರಿಂದ 105 ಸ್ಥಾನ ಗೆಲ್ಲಲಿದೆ. ಆದರೆ ವಿಧಾನಸಭೆ ಅತಂತ್ರವಾಗಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುತ್ತಿದೆ.
ಮುಂಬೈ(ಆ.23) ಮಹಾರಾಷ್ಟ್ರಯಲ್ಲಿ ಬಿಜೆಪಿ ಹಾಗೂ ಶಿವಸೇನೆ(ಶಿಂದೆ) ನೇತೃತ್ವದ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದೆ. ಮತ್ತೊಂದೆಡೆ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟಕ್ಕೆ ಸಿಕ್ಕಿದ ಅಭೂತಪೂರ್ವ ಯಶಸ್ಸಿನ ಅಲೆಯಲ್ಲಿರುವ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಪಕ್ಷಗಳು ಗೆಲುವಿನ ವಿಶ್ವಾಸದಲ್ಲಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ. ಇದರ ಬೆನ್ನಲ್ಲೆ ಚುನಾವಣಾ ಸಮೀಕ್ಷೆ ಬಹಿರಂಗವಾಗಿದೆ. ಟೈಮ್ಸ್ ನೌ ಸಮೀಕ್ಷೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿದೆ. ಆದರೆ ಬಹುಮತ ಕೊರತೆ ಎದುರಾಗಿದೆ. ಹೀಗಾಗಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದಿದೆ.
ಮುಂಬರುವ ಮಹಾರಾಷ್ಟ್ರಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು
ಟೌಮ್ಸ್ ನೌ ಸಮೀಕ್ಷೆ ಹೇಳುತ್ತಿದೆ. ಬಿಜೆಪಿ 95 ರಿಂದ 105 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದಿದೆ. ಆದರೆ ಬಹುಮತ ಕೊರತೆ ಎದುರಿಸಲಿದೆ. ವಿಶೇಷ ಅಂದರೆ ಇಂಡಿಯಾ ಮೈತ್ರಿ ಒಕ್ಕೂಟದ ಪಕ್ಷಗಳು ಒಟ್ಟಾಗಿಯೂ ಬಹುತಮ ಗಡಿ ದಾಟುವುದಿಲ್ಲ ಎಂದಿದೆ. ಕಾಂಗ್ರೆಸ್, ಉದ್ದವ್ ಠಾಕ್ರೆ ಶಿವಸೇನೆ, ಶರದ್ ಪವಾರ್ ಎನ್‌ಸಿಪಿ ಒಟ್ಟು 110 ರಿಂದ 115 ಸ್ಥಾನ ಗೆಲ್ಲಲಿದೆ ಎಂದಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಮತ್ತೊಂದು ಹೈಡ್ರಾಮಗೆ ವೇದಿಕೆಯ ಸಜ್ಜಾಗಲಿದೆ ಅನ್ನೋ ಸೂಚನೆಯನ್ನು ಸಮೀಕ್ಷೆ ನೀಡುತ್ತಿದೆ.
ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಭುಗಿಲೆದ್ದ ಹಿಂಸಾಚಾರ, ಥಾಣೆ ಸಂಘರ್ಷದಲ್ಲಿ ಹಲವರಿಗೆ ಗಾಯ!
ಮಹಾರಾಷ್ಟ್ರ ವಿಧಾನಸಭೆ - 288
ಟೈಮ್ಸ್ ನೌ ಸಮೀಕ್ಷೆ (ಸ್ಥಾನಗಳು)
ಬಿಜೆಪಿ - 95 - 105
ಶಿವಸೇನೆ (ಶಿಂಧೆ ಬಣ) - 19-24
ಎನ್ಜಿಪಿ (ಅಜಿತ್ ಬಣ) - 7-12
ಕಾಂಗ್ರೆಸ್ - 42-47
ಶಿವಸೇನೆ (ಠಾಕ್ರೆ ಬಣ) - 26-31
ಎನ್‌ಸಿಪಿ (ಪವಾರ್ ಬಣ) - 23-28
ಇತರೆ - 11-16
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ ಮೈತ್ರಿ ಸರ್ಕಾರ ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ಬಗೆಯ ಟೀಕೆ ಎುರಿಸುತ್ತಿದೆ. ಥಾಣೆಯಲ್ಲಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ, ಪ್ರತಿಭಟನೆ, ಮಹಾರಾಷ್ಟ್ರ ಬಂದ್ ಸೇರಿದಂತೆ ಹಲವು ಘಟನೆಗಳು ಆಡಳಿತ ಪಕ್ಷಕ್ಕೆ ಮುಳುವಾಗಿ ಪರಿಣಮಿಸುವ ಸಾಧ್ಯತೆ ಇದೆ.
ಮಹಾರಾಷ್ಟ್ರ ವಿಧಾನಸಭೆ - 288
ಟೈಮ್ಸ್ ನೌ ಸಮೀಕ್ಷೆ (ವೋಟ್ ಶೇರ್)
ಬಿಜೆಪಿ - ಶೇ. 25.8
ಶಿವಸೇನೆ (ಶಿಂಧೆ ಬಣ) - ಶೇ. 14.2
ಎನ್ಜಿಪಿ (ಅಜಿತ್ ಬಣ) - ಶೇ.5.2
ಕಾಂಗ್ರೆಸ್ - ಶೇ. 18.6
ಶಿವಸೇನೆ (ಠಾಕ್ರೆ ಬಣ) - ಶೇ. 17.6
ಎನ್‌ಸಿಪಿ (ಪವಾರ್ ಬಣ) - ಶೇ. 6.2
ಇತರೆ - ಶೇ. 12.4
ಸಹೋದರಿ ವಿರುದ್ಧ ಪತ್ನಿಯನ್ನ ಕಣಕ್ಕಿಳಿಸಿ ತಪ್ಪು ಮಾಡಿದೆ: ಅಜಿತ್ ಪವಾರ್