Latest Videos

ಮತ್ತೆ ಕೇಸರಿಯಾದ ಉತ್ತರ... ಸಿಎಂ ಯೋಗಿ ವೇಷ ಧರಿಸಿದ ಪುಟಾಣಿ...

By Suvarna NewsFirst Published Mar 10, 2022, 4:30 PM IST
Highlights
  • ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಗೆಲುವು
  • ಸಿಎಂ ಯೋಗಿ ವೇಷ ಧರಿಸಿದ ಪುಟಾಣಿ
  • ಕಾರ್ಯಕರ್ತರಿಂದ ಸಂಭ್ರಮಾಚರಣೆ

ಉತ್ತರಪ್ರದೇಶದಲ್ಲಿ ಕಮಲ ಮತ್ತೆ ಅರಳಿದೆ. ಸಿಎಂ ಯೋಗಿ ಆದಿತ್ಯನಾಥ್ ಪ್ರಚಂಡ ಬಹುಮತದೊಂದಿಗೆ ಮತ್ತೆ ಅಧಿಕಾರಿಕ್ಕೆ ಬಂದಿದ್ದಾರೆ. ದೇಶಾದ್ಯಂತ ಬಿಜೆಪಿ ಬೆಂಬಲಿಗರು ಗೆಲುವಿನ ಸಂಭ್ರಮ ಆಚರಿಸುತ್ತಿದ್ದು, ಪುಟ್ಟ ಮಗುವೊಂದು ಸಿಎಂ ಯೋಗಿ ಆದಿತ್ಯನಾಥ್‌ ರೂಪದಲ್ಲಿ ಕಂಗೊಳಿಸುತ್ತಿದೆ. ಯೋಗಿಯಂತೆ ಈ ಪಟ್ಟ ಮಗುವಿನ ತಲೆ ಕೂದಲನ್ನು ಪೂರ್ತಿಯಾಗಿ ತೆಗೆಯಲಾಗಿದ್ದು, ಸನ್ಯಾಸಿಯಂತೆ ಕೇಸರಿ ವಸ್ತ್ರದಲ್ಲಿ ಮಗು ಮಿಂಚುತ್ತಿದೆ. ಒಂದೂವರೆ ವರ್ಷದ ಈ ಮಗುವಿನ ಹೆಸರು ನವ್ಯ. ಬಿಜೆಪಿ ಅಭಿಮಾನಿಗಳಾಗಿರುವ ಈ ಮಗುವಿನ ಪೋಷಕರು ಯೋಗಿಯಂತೆ ಈ ಮಗುವಿಗೆ ವೇಷ ಹಾಕಿಸಿದ್ದಾರೆ.ತನ್ನ ತಂದೆಯೊಂದಿಗ ಲಖ್ನೋದ ಬಿಜೆಪಿ ಕಚೇರಿಗೆ ಆಗಮಿಸಿದ ಈ ಮಗು ಕೈಯಲ್ಲಿ ಬುಲ್ಡೋಜರ್‌ನ ಆಟದ ಸಾಮಾನು ಹಿಡಿದುಕೊಂಡಿತ್ತು.

ಇತ್ತ ಪಂಜಾಬ್‌ನಲ್ಲಿ ಎಎಪಿ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಅಲ್ಲೂ ಕೂಡ ಪುಟ್ಟ ಮಗುವೊಂದು ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಹಾಗೂ ಕೇಜ್ರಿವಾಲ್ ಇಬ್ಬರಿಗೂ ಹೋಲಿಕೆಯಾಗುವಂತಹ ವೇಷವನ್ನು ಧರಿಸಿತ್ತು. ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಮತ್ತು ಪಂಜಾಬ್‌ನಲ್ಲಿ ಪಕ್ಷದ ಮುಖ್ಯಮಂತ್ರಿ  ಅಭ್ಯರ್ಥಿ ಭಗವಂತ್ ಮಾನ್ ಅವರ ವೇಷಭೂಷಣದಲ್ಲಿ ಬೆಂಬಲಿಗರೊಬ್ಬರು ತಮ್ಮ ಮಗುವನ್ನು ಕರೆತಂದಿದ್ದರು.

A 1.5-year-old child, Navya dresses up as CM Yogi Adityanath and carries a toy bulldozer, as she arrives at BJP office in Lucknow along with her father. pic.twitter.com/g1rwLmifx8

— ANI UP/Uttarakhand (@ANINewsUP)

 

ಚಿಕ್ಕ ಮಗುವಿಗೆ ಅರವಿಂದ್ ಕೇಜ್ರಿವಾಲ್ ಅವರ ಟ್ರೇಡ್ಮಾರ್ಕ್ ಆದಂತಹ  ನೀಲಿ ಮಫ್ಲರ್, ಸ್ವೆಟರ್ (sweater) ಮತ್ತು ಕನ್ನಡಕವನ್ನು ಹಾಕಲಾಗಿತ್ತು. ಜೊತೆಗೆ ಭಗವಂತ್ ಮಾನ್  (Bhagwant Mann) ಅವರನ್ನು ಹೋಲಲು ಅವರಂತೆ ಹಳದಿ ಪೇಟವನ್ನೂ ಮಗುವಿಗೆ ಹಾಕಿಸಲಾಗಿತ್ತು. ಈ ಪುಟ್ಟ ಮಗು ಎಎಪಿ ಪ್ರಧಾನ ಕಛೇರಿಯಲ್ಲಿ ತಮ್ಮ ತಂದೆಯ ತೋಳುಗಳಲ್ಲಿ ಕಾಣಿಸಿಕೊಂಡಿದೆ ಈ ಮಗುವು ಎಎಪಿ ಬೆಂಬಲಿಗನಂತೆ.

ಯೋಗಿ ಸರ್ಕಾರ ಬಂದ್ರೆ ಅಲ್ಲಾಹು ಬಳಿ ಹೋಗ್ತೇನೆ ಎಂದಿದ್ದ ಮುನವ್ವರ್ ಆರೋಗ್ಯ ಏರುಪೇರು!

ಎರಡು ವರ್ಷಗಳ ಹಿಂದೆ  2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗೆಲುವು ಸಾಧಿಸಿದಾಗ, ಈ ಹುಡುಗ ಇನ್ನೂ ಚಿಕ್ಕವನಿದ್ದ ಆತನಿಗೆ  ಕೇಜ್ರಿವಾಲ್‌ ವೇಷ ಹಾಕಲಾಗಿತ್ತು. ಆಗ ಇಂಟರ್‌ನೆಟ್‌ನಲ್ಲಿ ಈ ಪುಟ್ಟ ಬಾಲಕ 'ಬೇಬಿ ಕೇಜ್ರಿವಾಲ್' ಎಂದು ಸಂಚಲನ ಮೂಡಿಸಿದ್ದ. ಈ ಪುಟ್ಟ ಬಾಲಕ  ಈಗ ಇಬ್ಬರೂ ಸಿಎಂಗಳಂತೆ ವೇಷ ಧರಿಸಿ ಚಿತ್ರಗಳಿಗೆ ಪೋಸ್ ನೀಡಿ ವಿಜಯದ ಚಿಹ್ನೆಯನ್ನು ಎತ್ತಿ ಹಿಡಿದಿದ್ದಾರೆ.

ಪಂಜಾಬ್‌ ಪೂರ್ತಿ ಗುಡಿಸಿದ ಪೊರಕೆ... ಭಗವಂತ್ ಮಾನ್ ರೂಪದಲ್ಲಿ ಬಂದ ಪುಟ್ಟ ಬಾಲಕ

ಈ ನಡುವೆ ಮುಂದಿನ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಕರೆಯಲಾಗುವ ಪಂಚರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಇಡೀ ದೇಶದ ಗಮನಸೆಳೆದಿದೆ. ಈಗಾಗಲೇ ಮತಗಟ್ಟೆ ಸಮೀಕ್ಷೆಗಳು ಹೇಳಿದಂತೆ ದೇಶದ ಅತೀದೊಡ್ಡ ವಿಧಾನಸಭೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನತ್ತ ಮುನ್ನುಗ್ಗುತ್ತಿದೆ. 403 ವಿಧಾನಸಭಾ ಕ್ಷೇತ್ರಗಳಿರುವ ಯುಪಿಯಲ್ಲಿ ಬಿಜೆಪಿ ಈಗಾಗಲೇ ಮ್ಯಾಜಿಕ್ ನಂಬರ್ ದಾಟಿ 278 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅಚ್ಚರಿಯ ವಿಚಾರವೆಂದರೆ ಬಹುಮತದತ್ತ ಸಾಗುತ್ತಿರುವ ಕೇಸರಿ ಪಾಳಯ ತನ್ನ ವಿರೋಧಿ ಅಲೆ ಇದ್ದ ಹತ್ರಾಸ್, ಉನ್ನಾವ್, ಲಖೀಂಪುರದ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿದೆ ಎಂಬುವುದು ಭಾರೀ ಅಚ್ಚರಿಯ ವಿಚಾರ.

click me!