ಪಂಜಾಬ್‌ ಪೂರ್ತಿ ಗುಡಿಸಿದ ಪೊರಕೆ... ಭಗವಂತ್ ಮಾನ್ ರೂಪದಲ್ಲಿ ಬಂದ ಪುಟ್ಟ ಬಾಲಕ

By Suvarna News  |  First Published Mar 10, 2022, 4:03 PM IST
  • ಪಂಜಾಬ್‌ನಲ್ಲಿ ಪ್ರಚಂಡ ಗೆಲುವಿನತ್ತ ಆಮ್‌ ಆದ್ಮಿ
  • ಭಗವಂತ್‌ ಮಾನ್ ವೇಷದಲ್ಲಿ ಕಂಗೊಳಿಸಿದ ಬಾಲಕ
  • ದೆಹಲಿಯಿಂದ ಪಂಜಾಬ್‌ವರೆಗೆ ವಿಸ್ತರಿಸಿದ ಆಪ್

ಪಂಜಾಬ್ ಅಸೆಂಬ್ಲಿ ಚುನಾವಣೆ 2022 ರಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಪ್ರಚಂಡ ಗೆಲುವಿನತ್ತ ಮುನ್ನಡೆಯುತ್ತಿದ್ದಂತೆ, ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಪಂಜಾಬ್‌ನಾದ್ಯಂತ ಸಂಭ್ರಮಾಚರಣೆ ನಡೆಸಿದರು. ದೆಹಲಿಯ ಎಎಪಿ ಕಾರ್ಯಕರ್ತರು ಕೂಡ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ಆರಂಭಿಸಿದರು. ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಮತ್ತು ಪಂಜಾಬ್‌ನಲ್ಲಿ ಪಕ್ಷದ ಮುಖ್ಯಮಂತ್ರಿ  ಅಭ್ಯರ್ಥಿ ಭಗವಂತ್ ಮಾನ್ ಅವರ ವೇಷಭೂಷಣದಲ್ಲಿ ಬೆಂಬಲಿಗರೊಬ್ಬರು ತಮ್ಮ ಮಗುವನ್ನು ಕರೆತಂದಿದ್ದರು.

ಚಿಕ್ಕ ಮಗುವಿಗೆ ಅರವಿಂದ್ ಕೇಜ್ರಿವಾಲ್ ಅವರ ಟ್ರೇಡ್ಮಾರ್ಕ್ ಆದಂತಹ  ನೀಲಿ ಮಫ್ಲರ್, ಸ್ವೆಟರ್ (sweater) ಮತ್ತು ಕನ್ನಡಕವನ್ನು ಹಾಕಲಾಗಿತ್ತು. ಜೊತೆಗೆ ಭಗವಂತ್ ಮಾನ್  (Bhagwant Mann) ಅವರನ್ನು ಹೋಲಲು ಅವರಂತೆ ಹಳದಿ ಪೇಟವನ್ನೂ ಮಗುವಿಗೆ ಹಾಕಿಸಲಾಗಿತ್ತು. ಈ ಪುಟ್ಟ ಮಗು ಎಎಪಿ ಪ್ರಧಾನ ಕಛೇರಿಯಲ್ಲಿ ತಮ್ಮ ತಂದೆಯ ತೋಳುಗಳಲ್ಲಿ ಕಾಣಿಸಿಕೊಂಡಿದೆ ಈ ಮಗುವು ಎಎಪಿ ಬೆಂಬಲಿಗನಂತೆ.

Tap to resize

Latest Videos

Election Result 2022 ಮಾಜಿ ಕಾಮಿಡಿಯನ್ ಭಗವಂತ್ ಸಿಂಗ್ ಮಾನ್ ಪಂಜಾಬ್ ನೂತನ ಸಿಎಂ!

ಎರಡು ವರ್ಷಗಳ ಹಿಂದೆ  2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗೆಲುವು ಸಾಧಿಸಿದಾಗ, ಈ ಹುಡುಗ ಇನ್ನೂ ಚಿಕ್ಕವನಿದ್ದ ಆತನಿಗೆ  ಕೇಜ್ರಿವಾಲ್‌ ವೇಷ ಹಾಕಲಾಗಿತ್ತು. ಆಗ ಇಂಟರ್‌ನೆಟ್‌ನಲ್ಲಿ ಈ ಪುಟ್ಟ ಬಾಲಕ 'ಬೇಬಿ ಕೇಜ್ರಿವಾಲ್' ಎಂದು ಸಂಚಲನ ಮೂಡಿಸಿದ್ದ. ಈ ಪುಟ್ಟ ಬಾಲಕ  ಈಗ ಇಬ್ಬರೂ ಸಿಎಂಗಳಂತೆ ವೇಷ ಧರಿಸಿ ಚಿತ್ರಗಳಿಗೆ ಪೋಸ್ ನೀಡಿ ವಿಜಯದ ಚಿಹ್ನೆಯನ್ನು ಎತ್ತಿ ಹಿಡಿದಿದ್ದಾರೆ.

ಎಎಪಿ ಈಗ ಈ ಬಾಲಕನನ್ನು 'ಬೇಬಿ ಭಗವಂತ್ ಮಾನ್' ಮತ್ತು ಅವರ ‘ಮುದ್ದಾದ ಪುಟ್ಟ ರೂಪ’ ಎಂದು ಕರೆಯುತ್ತಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಎನ್‌ಐ ಟ್ವೀಟ್‌ ಮಾಡಿದ್ದು, ಎಎಪಿ ಬೆಂಬಲಿಗರ ಮಗುವೊಂದು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಸಿಎಂ ಭಗವಂತ್ ಮಾನ್ ಆಗಿದ್ದು, ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವಿಜಯವನ್ನು ಆಚರಿಸುತ್ತಿದೆ ಎಂದು ಹೇಳಿದೆ.

'ಬಿಜೆಪಿಗೆ ಪ್ರಮುಖ ಸವಾಲಾಗ್ತಾರೆ ಕೇಜ್ರಿವಾಲ್, ಕಾಂಗ್ರೆಸ್ ಸ್ಥಾನ ಪಡೆಯಲಿದೆ AAP'

ಇತ್ತ ಪಂಜಾಬ್‌ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರು ಮತ ಎಣಿಕೆ ಆರಂಭವಾಗುವುದಕ್ಕೂ ಮುನ್ನ ಇಂದು ಮುಂಜಾನೆ ಸಂಗ್ರೂರಿನ ಗುರುದ್ವಾರ ಗುರುಸಾಗರ್ ಮಸ್ತುವಾನಾ ಸಾಹಿಬ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯದಲ್ಲಿ ಪಂಜಾಬ್‌ನ 88 ವಿಧಾನಸಭಾ ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆಯೊಂದಿಗೆ ಆಮ್ ಆದ್ಮಿ ಪಕ್ಷ ಬಹುಮತದ ಗಡಿ ದಾಟಿದೆ.

😍

Our cute little mascot is now all set to make Bhagwant Mann the CM of Punjab! pic.twitter.com/SLj5qrQLdH

— AAP (@AamAadmiParty)

| A child of an AAP supporter dressed as party's national convenor Arvind Kejriwal & to be CM Bhagwant Mann, celebrating the victory of party in Punjab assembly elections pic.twitter.com/g6Tw02Kcdm

— ANI (@ANI)

 

ಒಟ್ಟಿನಲ್ಲಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಕ್ಲೀನ್ ಸ್ವೀಪ್ ಗೆಲುವು ದಾಖಲಿದ್ದು ಅರವಿಂದ್ ಕೇಜ್ರಿವಾಲ್ ಪಕ್ಷ ಇದೀಗ ದೆಹಲಿಯಿಂದ ಪಂಜಾಬ್‌ ವರೆಗೆ ವಿಸ್ತರಿಸಿದೆ. ಆಪ್ ಮೊದಲೇ ಘೋಷಿಸಿದಂತೆ ಭಗವಂತ್ ಸಿಂಗ್ ಮಾನ್ ಮುಂದಿನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ತಯಾರಿ ನಡೆಸಿದ್ದಾರೆ. ಸದ್ಯ ಅಂತರ್ಜಾಲದಲ್ಲಿ ಪಂಜಾಬ್ ಮುಖ್ಯಮಂತ್ರಿಯಾಗುತ್ತಿರುವ ಭಗವಂತ್ ಸಿಂಗ್ ಮಾನ್ ಯಾರು ಅನ್ನೋದನ್ನು ಜನ ಹುಡುಕಾಟ ನಡೆಸುತ್ತಿದ್ದಾರೆ. 
 

click me!